ಒಂದು ನಿಮಿಷದ ಓದು | ವಾರಾಣಸಿಗೆ ಎಸ್‌ಸಿಒನ 'ಪ್ರವಾಸಿ ಮತ್ತು ಸಾಂಸ್ಕೃತಿಕ ರಾಜಧಾನಿ'ಯ ಗರಿ

Varanasi

ವಾರಾಣಸಿಯನ್ನು 2022-23ರ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಮೊದಲ ಪ್ರವಾಸಿ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ಘೋಷಿಸಲಾಗಿದೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ಸೆ.16ರ ಶುಕ್ರವಾರ ಸಮರ್ಕಂಡ್‌ನ ಉಜ್ಬೆಕ್ ನಗರದಲ್ಲಿ ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಿಯೋಗ ಭಾಗಿಯಾಗಿತ್ತು. ಈ ವೇಳೆ ಉಜ್ಬೇಕಿಸ್ಥಾನ 2022-2023ನೇ ಸಾಲಿನ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಿತು. ಮುಂದಿನ ವರ್ಷದ ಎಸ್‌ಸಿಒ ಸದಸ್ಯ ರಾಷ್ಟ್ರಗಳು ಪ್ರವಾಸಿ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ವಾರಾಣಸಿಯನ್ನು ಆಯ್ಕೆ ಮಾಡಿವೆ.

“ಇದು ಐತಿಹಾಸಿಕ ನಗರಕ್ಕೆ ಸಿಕ್ಕ ಮನ್ನಣೆ. ಭಾರತ ಮತ್ತು ಇತರ ದೇಶಗಳ ಮಧ್ಯೆ ಸಂಸ್ಕೃತಿಯ ಪರಿಚಯ ಮತ್ತು ಜನರ ನಡುವೆ ಬಾಂಧವ್ಯಕ್ಕೆ ಒಂದು ಬಾಗಿಲಾಗಲಿದೆ. ವಾರಾಣಸಿಗೆ ಎಸ್‌ಸಿಒ ಮಾನ್ಯತೆ ಸಿಕ್ಕಿರುವ ಕಾರಣ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಉತ್ತರ ಪ್ರದೇಶ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ," ಎಂದಿದ್ದಾಋಎ ವಿನಯ್ ಕ್ವಾತ್ರಾ.

ಶೃಂಗಸಭೆಯಲ್ಲಿ ಬೆಲಾರಸ್ ಮತ್ತು ಇರಾಕ್‌ಗೆ ಶಾಶ್ವತ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ. ಶಾಂಘೈ ಸಹಕಾರ ಸಂಘಟನೆಯನ್ನು 2001ರಲ್ಲಿ ಸ್ಥಾಪಿಸಲಾಗಿತ್ತು. ರಷ್ಯಾ, ಚೀನಾ, ಕಿರ್ಗಿಸ್ ಸಂಯುಕ್ತ ರಾಷ್ಟ್ರಗಳು, ಕಜಕಿಸ್ಥಾನ, ತಜಕಿಸ್ಥಾನ್ ಹಾಗೂ ಉಜ್ಬೇಕಿಸ್ಥಾನ್ ಅಧ್ಯಕ್ಷರು ಒಗ್ಗೂಡಿ ಇದನ್ನು ಸ್ಥಾಪಿಸಿದ್ದರು. 2007ರಲ್ಲಿ ಭಾರತ ಮತ್ತು ಪಾಕಿಸ್ಥಾನ ಈ ಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರಗಳಾದವು.

ನಿಮಗೆ ಏನು ಅನ್ನಿಸ್ತು?
0 ವೋಟ್