ವಿಶ್ವ ವಿಸ್ಮಯ | ಆಧುನಿಕ ಪ್ರಪಂಚದ ಅದ್ಭುತ ಗೋಲ್ಡನ್ ಗೇಟ್ ಸೇತುವೆ

Golden gate
  • ಗೋಲ್ಡನ್ ಗೇಟ್ ಸೇತುವೆ ಮೇಲಿದೆ ಪಾದಚಾರಿ ಮತ್ತು ಸೈಕಲ್ ಹಾದಿ
  • ದಶಕಗಳಿಂದ ಚಂಡಮಾರುತ- ಭೂಕಂಪ ಎದುರಿಸಿ ನಿಂತ ಸೇತುವೆ

ಅಮೆರಿಕದ ಅದ್ಭುತಗಳಲ್ಲಿ ಒಂದಾಗಿರುವ ಗೋಲ್ಡನ್ ಗೇಟ್ ಸೇತುವೆ ವಿಶ್ವದ ಗಮನ ಸೆಳೆದ ನಿರ್ಮಿತಿಗಳಲ್ಲಿ ಒಂದಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಈ ಸೇತುವೆ ಇದೆ. ಈ ಗೋಲ್ಡನ್ ಗೇಟ್ ಸೇತುವೆಯು ಸ್ಯಾನ್‌ಫ್ರಾನ್ಸಿಸ್ಕೊ ನಗರವನ್ನು ಸ್ಯಾನ್‌ಫ್ರಾನ್ಸಿಸ್ಕೊ ವಲಯದ ಮತ್ತೊಂದು ಪ್ರದೇಶವಾಗಿರುವ ಮರಿನ್ ಕೌಂಟಿಗೆ ಸಂಪರ್ಕಿಸುತ್ತದೆ.

ಪಾದಚಾರಿ ಮತ್ತು ಸೈಕಲ್ ಹಾದಿ ಕೂಡಾ ಈ ಸೇತುವೆಯ ಹಾದಿಯಲ್ಲಿದೆ. ಆಧುನಿಕ ಪ್ರಪಂಚದ ಅದ್ಭುತಗಳಲ್ಲಿ ಇದು ಒಂದಾಗಿದೆ ಎಂದು ಅಮೇರಿಕನ್ ಸೊಸೈಟಿ ಆಫ್ ಸಿವಿಲ್ ಇಂಜಿನಿಯರ್ಸ್‌ ಘೋಷಿಸಿತ್ತು.

ಈ ತೂಗು ಸೇತುವೆಯ ನಿರ್ಮಾಣ ಕಾರ್ಯವು ಜನವರಿ 5, 1933ರಂದು ಆರಂಭಗೊಂಡಿತ್ತು. ಏಪ್ರಿಲ್ 19, 1937ರಂದು ಈ ನಿರ್ಮಾಣ ಕಾರ್ಯ ಕೊನೆಗೊಂಡಿತ್ತು. ಈ ಸುಂದರ ಸೇತುವೆ ಸ್ಯಾನ್‌ಫ್ರಾನ್ಸಿಸ್ಕೊ ನಗರ ಮತ್ತು ಕ್ಯಾಲಿಫೋರ್ನಿಯ ರಾಜ್ಯದ  ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಹೆಗ್ಗುರುತಾಗಿದೆ. 

7-Wonders-of-the-World-Golden-Gate-Bridge-USA-_20

ಚಂಡಮಾರುತ, ಭೂಕಂಪಗಳನ್ನು ಎದುರಿಸಿ ಈ ಸೇತುವೆ ನಿಂತಿದೆ. ಸಮುದ್ರದಲ್ಲಿ ಉಂಟಾಗುವ ಅನೇಕ ಅಡಚಣೆಗಳು, ಹವಾಮಾನ ಪರಿಸ್ಥಿತಿ ಮುಂತಾದ ಪ್ರಕೃತಿ ವಿಕೋಪಗಳನ್ನು ಎದುರಿಸಿ ಸೇತುವೆ ನಿರ್ಮಿಸಲು ಯಾರೂ ಮುಂದೆ ಬಂದಿರಲಿಲ್ಲ.

AV Eye Hospital ad

ಈ ಸುದ್ದಿ ಓದಿದ್ದೀರಾ? ವಿಶ್ವ ವಿಸ್ಮಯ | ಈಜಿಪ್ಟ್‌ ಇತಿಹಾಸ ಸಾರುವ ಗೀಜಾದ ಪಿರಮಿಡ್‌

2೦ನೇ ಶತಮಾನದ ಆದಿಭಾಗದಲ್ಲೇ ಮೆರಿನ್ ಕೌಂಟಿ ಮತ್ತು ಸ್ಯಾನ್‌ಫ್ರಾನ್ಸಿಸ್ಕೊ ನಗರದ ಮಧ್ಯೆ ಗೋಲ್ಡನ್ ಗೇಟ್ ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಅನೇಕರು ಒತ್ತಡ ಹೇರುತ್ತಿದ್ದರು. ಇಲ್ಲಿನ ಸಮುದ್ರವು ಸುಮಾರು 6,700 ಅಡಿಗಳಷ್ಟು ಅಗಲವಿದೆ. ನೀರಿನ ಮಟ್ಟ 5೦೦ ಅಡಿಗಳಷ್ಟು ಅತ್ಯಂತ ಬಿರುಸಾದ ಅಲೆಗಳು ದಡಕ್ಕೆ ಲಗ್ಗೆ ಹಾಕುವುದರ ಜೊತೆಗೆ ನೀರು ವೇಗವಾಗಿ ಹರಿಯುತ್ತಿತ್ತು. ಬಿರುಸಾದ ಗಾಳಿಯನ್ನು ಎದುರಿಸುವುದು ಕಷ್ಟದ ಕೆಲಸವಾಗಿತ್ತು.

ಜೇಮ್ಸ್ ವಿಲ್ಕಿನ್ಸ್ ಎಂಬ ಇಂಜಿನಿಯರ್ 100 (1920ರಲ್ಲಿ) ಮಿಲಿಯನ್ ಡಾಲರ್ ವೆಚ್ಚವೆಂದು ಅಂದಾಜಿಸಿದ್ದ. ಇಷ್ಟು ಭಾರಿ ಮೊತ್ತವನ್ನು ಖರ್ಚು ಮಾಡಲು ಸರ್ಕಾರ ಸಿದ್ಧವಿರಲಿಲ್ಲ. ಸಾರ್ವಜನಿಕರ ಸಹಾಯ ಅಪೇಕ್ಷಿಸಿದಾಗ ಮುಂದೆ ಬಂದ ಜೋಸೆಫ್ ಸ್ಟ್ರಾಸ್ ಎಂಬ ಇಂಜಿನಿಯರ್‌ ಹಲವು ಸವಾಲುಗಳನ್ನು ಎದುರಿಸಿ ಈ ಸೇತುವೆ ನಿರ್ಮಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app