ಸುದ್ದಿ ಸ್ವಾರಸ್ಯ | ಎಮ್ಮೆಗಿಂತ ಕಡಿಮೆ ಬೆಲೆಯಲ್ಲಿ ಸಿಂಹವನ್ನು ಕೊಳ್ಳಬಹುದು!

Lion

ಎಮ್ಮೆಯನ್ನು ಕೊಂಡುಕೊಳ್ಳುವ ಬೆಲೆಗಿಂತ ಅಗ್ಗದ ಬೆಲೆಯಲ್ಲಿ ಕಾಡಿನ ರಾಜ ಎನ್ನಲಾಗುವ ಘನಗಂಭೀರ ಸಿಂಹಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಅರೆ... ಸಿಂಹವನ್ನೆಲ್ಲ ಯಾರು ಕೊಳ್ಳುತ್ತಾರೆ ಬಿಡಿ ಅಂತ ನಿಮಗನ್ನಿಸಿದರೂ ಈ ಸುದ್ದಿ ಮಾತ್ರ ನೂರಕ್ಕೆ ನೂರು ನಿಜ.

ಪಾಕಿಸ್ತಾನದ ಲಾಹೋರ್‌ ಸಫಾರಿ ಮೃಗಾಲಯದ ಆಡಳಿತ ಮಂಡಳಿಯು ತನ್ನ ಬಳಿ ಇರುವ ಆಫ್ರಿಕನ್‌ ಸಿಂಹಗಳನ್ನು ಒಂದಕ್ಕೆ ಒಂದೂವರೆ ಲಕ್ಷ ರೂಪಾಯಿಯಂತೆ ಮಾರಾಟ ಮಾಡಲು ಸಜ್ಜಾಗಿದೆ ಎಂದು ಪಾಕಿಸ್ತಾನದ 'ಸಮಾ ಟಿವಿ' ವರದಿ ಮಾಡಿದೆ. ಆದರೆ, ಒಂದು ಎಮ್ಮೆಯ ಬೆಲೆ ಸ್ಥಳೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮೂರೂವರೆ ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.

ಮೃಗಾಲಯದಲ್ಲಿ ಪ್ರಾಣಿಗಳ ನಿರ್ವಹಣೆಯ ವೆಚ್ಚಗಳನ್ನು ಭರಿಸಲು ಲಾಹೋರ್‌ ಸಫಾರಿ ಸಂಸ್ಥೆಗೆ ಹಣದ ಕೊರತೆ ಕಾಡುತ್ತಿದೆ. ಆದ್ದರಿಂದ, ಆಗಸ್ಟ್‌ ಮೊದಲ ವಾರದಲ್ಲಿ ತನ್ನ 12 ಸಿಂಹಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಮಾರಾಟಕ್ಕಿಟ್ಟಿರುವ ಸಿಂಹಗಳಲ್ಲಿ ಮೂರು ಹೆಣ್ಣು ಸಿಂಹಗಳಿವೆ.

ಈ ಸುದ್ದಿ ಓದಿದ್ದೀರಾ?: ವಿಡಿಯೊ ಸುದ್ದಿ | ಬೆಂಗಳೂರಿನ ಕಸ ವಿಂಗಡಣೆ ಮಾಡುವ ಶ್ರಮಿಕರಿಗಾಗಿ ಒಂದು ಹೊಸ ಹಾಡು

AV Eye Hospital ad

ಲಾಹೋರ್‌ ಸಫಾರಿ ಮೃಗಾಲಯವು ಬರೋಬ್ಬರಿ 142 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇಲ್ಲಿ ಮಿತಿ ಮೀರಿ ಪ್ರಾಣಿಗಳಿಗೆ ಆಶ್ರಯ ಒದಗಿಸಲಾಗಿದ್ದು, 40 ಸಿಂಹಗಳಿವೆ. ಇವುಗಳ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದೆ.

ಸ್ವಾರಸ್ಯವೆಂದರೆ, ಹೀಗೆ ಆರ್ಥಿಕ ಸಂಕಷ್ಟ ಎದುರಾದಾಗಲೆಲ್ಲ ಹೀಗೆ ಸಿಂಹಗಳನ್ನು ಮಾರಾಟ ಮಾಡಿ ಮೃಗಾಲಯದ ಖಜಾನೆ ನಿಭಾಯಿಸಲಾಗುತ್ತದೆ! ಕಳೆದ ವರ್ಷ ಸ್ಥಳಾವಕಾಶದ ನೆಪ ಹೇಳಿ 14 ಸಿಂಹಗಳನ್ನು ನಾಗರಿಕರಿಗೆ ಮಾರಾಟ ಮಾಡಲಾಗಿತ್ತು ಎಂದಿದೆ 'ಸಮಾ ಟಿವಿ' ವರದಿ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app