ಪತಿಯ ಸಾವಿನ ಬಗ್ಗೆ ವದಂತಿ ಹರಡಿದ ಮಾಧ್ಯಮಗಳು; ಖಾಸಗಿತನ ಗೌರವಿಸಿ ಎಂದ ನಟಿ

meena
  • ಪತಿಯ ಸಾವಿನ ಕುರಿತು ನಟಿ ಮೀನಾ ಭಾವನಾತ್ಮಕ ಪತ್ರ
  • ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪಿದ್ದ ವಿದ್ಯಾಸಾಗರ್‌

ತಮ್ಮ ಪತಿಯ ಸಾವಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರ ಮೇಲೆ ಬಹುಭಾಷಾ ನಟಿ ಮೀನಾ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಭಾವನಾತ್ಮಕ ಪತ್ರವನ್ನು ಮೀನಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಪ್ರೀತಿಯ ಪತಿ ವಿದ್ಯಾಸಾಗರ್‌ ಅವರನ್ನು ಕಳೆದುಕೊಂಡು ನಾನು ತೀವ್ರತಮ ದುಃಖದಲ್ಲಿದ್ದೇನೆ. ಇಂತಹ ಸಮಯದಲ್ಲಿ ನಮ್ಮ  ಖಾಸಗಿತನ ಗೌರವಿಸಿ ಸಹಾನುಭೂತಿಯಿಂದ ವರ್ತಿಸುವಂತೆ ಎಲ್ಲಾ ಮಾಧ್ಯಮಗಳಿಗೂ ವಿನಂತಿಸಿಕೊಳ್ಳುತ್ತೇನೆ. ಈ ಘಟನೆಯ ಬಗ್ಗೆ ಇಲ್ಲ ಸಲ್ಲದ ವದಂತಿ ಹರಡುವುದನ್ನು ನಿಲ್ಲಿಸಿ" ಎಂದು ಮನವಿ ಮಾಡಿದ್ದಾರೆ.

ತಮ್ಮ ಅಭಿಮಾನಿಗಳು ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳಿಗೆ ಮೀನಾ ಧನ್ಯವಾದ ತಿಳಿಸಿದ್ದಾರೆ. "ನನ್ನ ಪತಿಯ ಆರೈಕೆಗೆ ಮಿತಿಮೀರಿ ಶ್ರಮಿಸಿದ ವೈದ್ಯಕೀಯ ತಂಡಕ್ಕೆ, ಸಂಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ನೆರವಾದ ತಮಿಳುನಾಡಿನ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಗೆ, ನನ್ನ ಪತಿಯ ಚೇತರಿಕೆಗಾಗಿ ಪ್ರಾರ್ಥಿಸಿದ ಆಪ್ತರು ಮತ್ತು ಪ್ರೀತಿಯ ಅಭಿಮಾನಿಗಳಿಗೆ ಧನ್ಯವಾದಗಳು" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಲಾವಿದರಿಗಾಗಿ ಹುಡುಕಾಟ ಶುರು ಮಾಡಿದ 'ಪುಷ್ಪ' ಚಿತ್ರತಂಡ

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ 48 ವರ್ಷದ ವಿದ್ಯಾಸಾಗರ್‌ ಅವರನ್ನು ಕಳೆದ ಎರಡ್ಮೂರು ತಿಂಗಳಿನಿಂದ ಚೆನ್ನೈ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್‌ 28ರಂದು ಅವರು ಅಸು ನೀಗಿದ್ದರು.

ವಿದ್ಯಾಸಾಗರ್‌ ಸಾವಿನ ಬಳಿಕ ಅವರು ಕೋವಿಡ್‌ನಿಂದ ನಿಧನರಾಗಿದ್ದಾರೆ. ಅವರಿಗೆ ವಾಸಿಯಾಗದ ಕಾಯಿಲೆ ಅಂಟಿಕೊಂಡಿತ್ತು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
2 ವೋಟ್