ಲಿಂಗ ತಾರತಮ್ಯ | ನಾನು ಮಹಿಳೆ ‘ಪಾರ್ಸೆಲ್’ ಅಲ್ಲ ಎಂದ ಆಲಿಯಾ ಭಟ್

  • ನಾವು ಇನ್ನೂ ಪಿತೃಪ್ರಭುತ್ವದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ
  • ಮಾಧ್ಯಮದ ಕೆಲವು ವರದಿಗಳ ವಿರುದ್ಧ ನಟಿಯ ಹೇಳಿಕೆ

ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ ಅವರು ನಾನು ಮಹಿಳೆ, 'ಪಾರ್ಸೆಲ್‌' ಅಲ್ಲ ಎಂದು ತಮ್ಮ  ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಆಲಿಯಾ ಭಟ್‌ ಅವರು ತಾಯಿ ಆಗುತ್ತಿರುವ ಸಂಭ್ರಮದ ಸುದ್ದಿಯನ್ನು ಸಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ಮಾಡುತ್ತಿದ್ದಾರೆ.  

ನಟ ಮತ್ತು ಆಲಿಯಾ ಭಟ್‌ ಅವರ ಪತಿ ರಣಬೀರ್ ಕಪೂರ್ ಅವರು ಬ್ರಿಟನ್‌ಗೆ ಮುಂಬರುವ ಹಾಲಿವುಡ್ ಚಿತ್ರದ ಚಿತ್ರೀಕರಣಕ್ಕೆ ಆಲಿಯಾ ಭಟ್ ಅವರನ್ನು ಕರೆದುಕೊಂಡು ಹೋಗಲಿದ್ದಾರೆ ಎಂದು ಮಾದ್ಯಮವೊಂದು ವರದಿ ಮಾಡಿದೆ. ಆಲಿಯಾ ಅವರು ಚಿತ್ರೀಕರಣದಿಂದ ಹಿಂತಿರುಗಿದ ನಂತರ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ವರದಿ ಮಾಡಿದೆ. ರಣಬೀರ್ ಕಪೂರ್ ಬ್ರಿಟನ್‌ಗೆ ತಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಸುಳ್ಳು ವರದಿಯ ವಿರುದ್ಧ ಆಲಿಯಾ ಕಿಡಿಕಾರಿದ್ದಾರೆ.

Eedina App

ಆಲಿಯಾ ಭಟ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ನಾವು ಇಂದಿಗೂ ಪಿತೃಪ್ರಧಾನ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಯಾವುದೂ ತಡವಾಗಿಲ್ಲ. ಯಾರು ಯಾರನ್ನು ಎತ್ತಿಕೊಂಡು ಹೋಗುವ ಅಗತ್ಯವಿಲ್ಲ. ನಾನು ಮಹಿಳೆ, ‘ಪಾರ್ಸೆಲ್’ ಅಲ್ಲ. ನಾನು ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ. ನಿಮ್ಮೆಲ್ಲರ ಬಳಿ ವೈದ್ಯರ ಪ್ರಮಾಣಪತ್ರವೂ ಇದೆಯೆಂದು ತಿಳಿದು ಬಂದದ್ದು ಒಳ್ಳೆಯದೇ. ನಾವು 2022ನೇ ವರ್ಷದಲ್ಲಿ ಇದ್ದೀವಿ. ಪಿತೃಪ್ರಧಾನ ವ್ಯವಸ್ಥೆಯಿಂದ ಹೊರಬರಬಹುದೇ? ಈಗ ನೀವು ನನ್ನನ್ನು ಬಿಟ್ಟರೆ, ನಾನು ಚಿತ್ರೀಕರಣಕ್ಕೆ ಹೋಗಲು ಸಿದ್ಧಳಾಗುವೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜುಲೈ ಅಂತ್ಯದೊಳಗೆ ಅವರು "ಹಾರ್ಟ್ ಆಫ್ ಸ್ಟೋನ್' ಮತ್ತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರಗಳನ್ನು ಪೂರ್ಣಗೊಳಿಸಲಿದ್ದಾರೆ.

AV Eye Hospital ad
ನಿಮಗೆ ಏನು ಅನ್ನಿಸ್ತು?
1 ವೋಟ್
eedina app