ಬಹುಕೋಟಿ ಒಪ್ಪಂದದ ಮದ್ಯಪಾನ ಪ್ರಚಾರ ನಿರಾಕರಿಸಿದ ಅಲ್ಲು ಅರ್ಜುನ್

  • ಕೆಲತಿಂಗಳ ಹಿಂದೆ ಪಾನ್ ಮಸಾಲಾ ಬ್ರಾಂಡ್ ಪ್ರಚಾರ ತಿರಸ್ಕರಿಸಿದ್ದ ಅರ್ಜುನ್
  • ಹತ್ತು ಕೋಟಿ ರೂಪಾಯಿ ಪ್ರಚಾರ ಒಪ್ಪಂದ ತಿರಸ್ಕರಿಸಿದ ಅಲ್ಲು ಅರ್ಜುನ್

ಬಹುಕೋಟಿ ಒಪ್ಪಂದದ ಮದ್ಯಪಾನ ಜಾಹೀರಾತು ಪ್ರಚಾರವನ್ನು ಪುಷ್ಪ-2 ಖ್ಯಾತಿಯ ಅಲ್ಲು ಅರ್ಜುನ್ ಅವರು ನಿರಾಕರಿಸಿದ್ದಾರೆ. ಈ ಮೂಲಕ ತಮ್ಮ ಚಲನಚಿತ್ರ, ಸಾಂಸಾರಿಕ ಬದುಕಿನ ಶೈಲಿಯಿಂದ ಅಭಿಮಾನಿಗಳ ಹೃದಯ ಗೆದ್ದಿದ್ದ, ಅಲ್ಲು ಅರ್ಜುನ್ ಅವರು ಮದ್ಯಪಾನ ಪ್ರಚಾರ ತಿರಸ್ಕರಿಸಿ ಮತ್ತಷ್ಟು ಅಭಿಮಾನಿಗಳ ಮನ ಗೆದ್ದಿದ್ದಾರೆ ಎಂಬ ಮಾತು ಸಾಮಾಜಿಕ ತಾಣದಲ್ಲಿ ಕೇಳಿ ಬರುತ್ತಿದೆ. 

ಕಳೆದ ಒಂದೆರಡು ತಿಂಗಳ ಹಿಂದೆ ಭಾರಿ ಮೊತ್ತದ ಪಾನ್ ಮಸಾಲಾ ಬ್ರ್ಯಾಂಡ್ ಪ್ರಚಾರ ಒಪ್ಪಂದವನ್ನು ನಿರಾಕರಿಸಿದ್ದರು. 

ಅಂಕಣಕಾರ ಮನೋಬಲ ವಿಜಯಬಾಲನ್ ಪ್ರಕಾರ, ಈ ಹಿಂದೆ ಅಲ್ಲು ಅರ್ಜುನ್ ಅವರು ಪಾನ್ ಮಸಾಲಾ ಬ್ರ್ಯಾಂಡ್ ಪ್ರಚಾರ ಮಾಡುವುದಿಲ್ಲ ಎಂದು ಹೇಳಿ ಹತ್ತು ಕೋಟಿ ಒಪ್ಪಂದವನ್ನು ನಿರಾಕರಿಸಿದ್ದರು.

ಹಾನಿಕಾರಕ ಮತ್ತು ಮಾದಕ ವಸ್ತುಗಳ ಪ್ರಚಾರ ನಿರಾಕರಿಸುವ ಮೂಲಕ ತನ್ನ ‘ಇಮೇಜಿಗೆ’ ದಕ್ಕೆಯಾಗದಂತೆ ಅಲ್ಲು ಅರ್ಜುನ್ ನಡೆದುಕೊಂಡಿದ್ದಾರೆ. ಈಗಾಗಲೇ ಬ್ರ್ಯಾಂಡ್‌ಗಳ ಪ್ರಚಾರ ಮಾಡಲು ಅಲ್ಲು ಅರ್ಜುನ್ ಅವರು ದೊಡ್ಡ ಮೊತ್ತವನ್ನೆ ಪಡೆಯುತ್ತಿದ್ದು, ಪ್ರಚಾರ ರಾಯಬಾರಿಯಾಗಿ ₹7.5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವಿಜಯಬಾಲನ್ ಅವರು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಕಟೌಟ್ ಹಿಂದಿನ ಕಥೆ-ವ್ಯಥೆ | ತೆರೆ ಮರೆಯಲ್ಲೇ ಉಳಿದು ಹೋದ ಬಣ್ಣ ಮೆತ್ತಿದ ಕೈಗಳು

ಈ ಹಿಂದೆ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಪಾನ್ ಮಸಾಲಾ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಬಹಳಷ್ಟು ಟೀಕೆಗೆ ಗುರಿಯಾಗಿದ್ದರು. ಮಹೇಶ್ ಬಾಬು ಕೂಡ ಪಾನ್ ಮಸಾಲಾ ಬ್ರಾಂಡ್ ಅನ್ನು ಪ್ರಚಾರ ಮಾಡಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದರು. ನಟ ಯಶ್ ಸಹ ಈ ಹಿಂದೆ ಪಾನ್ ಮಸಾಲಾ ಬ್ರಾಂಡ್ ಪ್ರಚಾರವನ್ನು ತಿರಸ್ಕರಿಸಿದ್ದರು. 

ಈಗ ಅಲ್ಲು ಅರ್ಜುನ್, ಅವರ ಕೆಲಸ, ಆದರ್ಶಗಳು ಮತ್ತು ಸಮರ್ಪಣಾ ಮನೋಭಾವದಿಂದ ಎಲ್ಲರ ಮನ ಗೆದ್ದಿದ್ದಾರೆ. 

ನಿಮಗೆ ಏನು ಅನ್ನಿಸ್ತು?
1 ವೋಟ್