ಕಲಾವಿದರಿಗಾಗಿ ಹುಡುಕಾಟ ಶುರು ಮಾಡಿದ 'ಪುಷ್ಪ' ಚಿತ್ರತಂಡ

pushpa-the rule
  • ತಿರುಪತಿಯಲ್ಲಿ ನಡೆಯಲಿದೆ 3 ದಿನಗಳ ಕಾಲ 'ಪುಷ್ಪ' ಆಡಿಶನ್‌
  • ಕಲಾವಿದರ ಆಯ್ಕೆಗೆ ಷರತ್ತು ವಿಧಿಸಿದ ನಿರ್ದೇಶಕ ಸುಕುಮಾರ್‌ 

ಟಾಲಿವುಡ್‌ನ ಸ್ಟಾರ್‌ ನಟ ಅಲ್ಲು ಅರ್ಜುನ್‌ ಮುಖ್ಯಭೂಮಿಕೆಯ ʼಪುಷ್ಪ-ದಿ ರೈಸ್‌ʼ ಸಿನಿಮಾ ನಿರೀಕ್ಷೆಯನ್ನೂ ಮೀರಿ ಯಶಸ್ಸು ಗಳಿಸಿತ್ತು. ಭರ್ಜರಿ ಯಶಸ್ಸಿನ ಬೆನ್ನಲ್ಲೇ ಚಿತ್ರದ ನಿರ್ದೇಶಕ ಸುಕುಮಾರ್‌ ಪುಷ್ಪ-2 ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇದೀಗ 'ಪುಷ್ಪ-ದಿ ರೂಲ್‌' ಸಿನಿಮಾಗೆ ಚಿತ್ರತಂಡ ತಯಾರಿ ನಡೆಸುತ್ತಿದ್ದು, ಕಲಾವಿದರ ಹುಡುಕಾಟದಲ್ಲಿದೆ.

'ಪುಷ್ಪ-ದಿ ರೂಲ್‌' ಚಿತ್ರಕ್ಕಾಗಿ ಹೊಸ ಕಲಾವಿದರ ಹುಡುಕಾಟದಲ್ಲಿರುವ ನಿರ್ದೇಶಕರು ಆಡಿಶನ್‌ ಮೂಲಕ ಆಯ್ಕೆಗೆ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ 'ಪುಷ್ಪ' ಚಿತ್ರತಂಡ ತಿರುಪತಿಯಲ್ಲಿ 3 ದಿನಗಳ ಕಾಲ ಆಡಿಶನ್‌ಗೆ ನಿರ್ಧರಿಸಿದ್ದು, ಆಸಕ್ತ ಕಲಾವಿದರಿಗೆ ಭಾಗವಹಿಸುವಂತೆ ಆಹ್ವಾನಿಸಿದೆ.

ಈ ಸುದ್ದಿ ಓದಿದ್ದೀರಾ? ಜನುಮದಿನ | ಅಡಕಮಾರನಹಳ್ಳಿ ಹುಡುಗ ಗೋಲ್ಡನ್‌ ಸ್ಟಾರ್‌ ಆದ ಕತೆ

'ಪುಷ್ಪ' ಚಿತ್ರದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಚಿತ್ರತಂಡ ಆಡಿಶನ್‌ಗೆ ಆಹ್ವಾನ ನೀಡಿರುವ ಪೋಸ್ಟರ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಪೋಸ್ಟರ್‌ನಲ್ಲಿ ಉಲ್ಲೇಖಿಸಿರುವಂತೆ ಮಕ್ಕಳು, ಮಹಿಳೆಯರು ಮತ್ತು ಪುರುಷರು ಆಡಿಶನ್‌ನಲ್ಲಿ ಪಾಲ್ಗೊಳ್ಳಬಹುದು. ಕಲಾವಿದರ ಆಯ್ಕೆಗೆ ಷರತ್ತು ವಿಧಿಸಿರುವ ಚಿತ್ರತಂಡ, ಆಡಿಶನ್‌ಗೆ ಬರುವವರು ಕಡ್ಡಾಯವಾಗಿ ಚಿತ್ತೂರು ಶೈಲಿಯ ತೆಲುಗು ಭಾಷಿಕರಾಗಿರಬೇಕು ಎಂದು ಸೂಚಿಸಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ ಎಂದು ಚಿತ್ರತಂಡ ಖಚಿತ ಪಡಿಸಿದೆ.

ತಿರುಪತಿಯ ಬಾಲಾಜಿ ಕಾಲೋನಿಯಲ್ಲಿರುವ ಮೇಕ್‌ ಮೈ ಬೇಬಿ ಜೀನಿಯಸ್‌ ಶಾಲಾ ಆವರಣದಲ್ಲಿ ಜುಲೈ 3ರಂದು ಆರಂಭಗೊಳ್ಳಲಿರುವ 'ಪುಷ್ಪ' ಆಡಿಶನ್‌ ಸತತವಾಗಿ ಮೂರು ದಿನಗಳ ಕಾಲ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್