ಈದಿನ ಎಕ್ಸ್‌ಕ್ಲೂಸಿವ್ | ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಉಪಾಧ್ಯಕ್ಷ ಚಿಕ್ಕಣ್ಣ

ಕನ್ನಡದ ಖ್ಯಾತ ಹಾಸ್ಯನಟ ಚಿಕ್ಕಣ್ಣ 'ಉಪಾಧ್ಯಕ್ಷ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರ ಹೊಮ್ಮಿದ್ದಾರೆ. ದಶಕದ ಕಾಲ ಪೋಷಕ ಪಾತ್ರಗಳನ್ನು ನಿಭಾಯಿಸಿದ ಅವರು ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಅನುಭವದ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ್ದಾರೆ.
chikkanna

ಕನ್ನಡದ ಖ್ಯಾತ ಹಾಸ್ಯನಟ ಚಿಕ್ಕಣ್ಣ ಇದೀಗ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆಲ ವರ್ಷಗಳ ಹಿಂದೆ‌ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದ ʼಅಧ್ಯಕ್ಷʼ ಚಿತ್ರದಲ್ಲಿ ʼಉಪಾಧ್ಯಕ್ಷʼನ ಪಾತ್ರದಲ್ಲಿ ಮಿಂಚಿದ್ದ ಚಿಕ್ಕಣ್ಣ ಮತ್ತೆ ʼಉಪಾಧ್ಯಕ್ಷʼನಾಗಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. 

ಚಿಕ್ಕಣ್ಣ ಯಾವ ಚಿತ್ರದಲ್ಲಿ ಉಪಾಧ್ಯಕ್ಷನಾಗಲಿದ್ದಾರೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಅವರು ನಟಿಸುತ್ತಿರುವ ಸಿನಿಮಾದ ಹೆಸರೇ ʼಉಪಾಧ್ಯಕ್ಷʼ. ಈ ಚಿತ್ರದಲ್ಲಿ ಚಿಕ್ಕಣ್ಣ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Eedina App

ಇತ್ತೀಚೆಗೆ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ 'ಉಪಾಧ್ಯಕ್ಷ' ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಸ್ಮಿತಾ ಉಮಾಪತಿ ಹಾಗೂ ನಾಯಕ ಚಿಕ್ಕಣ್ಣ ಅವರ ತಾಯಿ ಆರಂಭಫಲಕ ತೋರಿದರೆ, ಹಾಸ್ಯನಟ ಸಾಧುಕೋಕಿಲ ಕ್ಯಾಮರಾ ಚಾಲನೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

upadhyaksha

ನಾಯಕನಟನಾಗಿ ಮೊದಲ ಬಾರಿಗೆ ಕ್ಯಾಮೆರಾ ಎದುರುಗೊಳ್ಳುತ್ತಿರುವ ಅನುಭವದ ಬಗ್ಗೆ ಚಿಕ್ಕಣ್ಣ ಈದಿನ.ಕಾಮ್‌ನೊಂದಿಗೆ ಮಾತನಾಡಿದ್ದಾರೆ. "ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವುದಕ್ಕೆ ನನಗೆ ಖುಷಿ ಇದೆ. ʼರಾಜಹುಲಿʼ, ʼಅಧ್ಯಕ್ಷʼ ಚಿತ್ರಗಳ ನಂತರ ಹೀರೋ ಆಗಲು ಸಾಕಷ್ಟು ಅವಕಾಶಗಳು ಬಂದಿದ್ದವು. ಆದರೆ, ನಾನು ಒಪ್ಪಿರಲಿಲ್ಲ. ಈ ಚಿತ್ರದ ಕತೆ ಕೇಳಿದ ಬಳಿಕ ಒಪ್ಪಿಕೊಂಡೆ. ಯಾಕೆಂದರೆ ಅಧ್ಯಕ್ಷ ಸಿನಿಮಾ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಆ ಚಿತ್ರದಲ್ಲಿ ಉಪಾಧ್ಯಕ್ಷನ ಪಾತ್ರ ನಿರ್ವಹಿಸಿದ್ದರಿಂದ ಮತ್ತದೇ ಪಾತ್ರದಲ್ಲಿ ನಟಿಸುವುದು ನನಗೆ ಸುಲಭವಾಗಲಿದೆ" ಎಂದರು. 

AV Eye Hospital ad

ಈ ಸುದ್ದಿ ಓದಿದ್ದೀರಾ? ಈ ವಾರ ಕನ್ನಡದ 2 ಚಿತ್ರಗಳು ತೆರೆಗೆ | ಇಂದಿನಿಂದ ವಿರಾಟ ಪರ್ವ ಶುರು

ಇಂದಿನಿಂದ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಎಂದಿನಂತೆ ನನ್ನ ಪಾತ್ರ ನಿರ್ವಹಿಸುತ್ತಿದ್ದೇನೆ. ನಾನು ಸಿನಿಮಾದ ಹೀರೋ ಎಂಬ ಭಾವ ಎಲ್ಲಿಯೂ ನನಗೆ ಬಂದಿಲ್ಲ. ಹಾಸ್ಯಪ್ರಧಾನ ಚಿತ್ರವಾದ ಕಾರಣ ಸಲಿಸಾಗಿ ಮಾಡಿಕೊಂಡು ಹೋಗುತ್ತೇನೆ ಎಂದರು.  

ಉಪಾಧ್ಯಕ್ಷ ಚಿತ್ರದ ಬಳಿಕ ಹಾಸ್ಯನಟನಾಗಿ ಮುಂದುವರೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಿಕ್ಕಣ್ಣ, "ನನಗೆ ಉಪಾಧ್ಯಕ್ಷ ಕತೆ ಆಪ್ತವಾದ ಕಾರಣಕ್ಕೆ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಲು ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾಯಕನಾದ ಮಾತ್ರಕ್ಕೆ ನಾನು ಹಾಸ್ಯನಟನಾಗಿ ಮುಂದುವರೆಯುವುದಿಲ್ಲ ಅಂತಲ್ಲ. ಖಂಡಿತವಾಗಿಯೂ ಮುಂಬರುವ ಚಿತ್ರಗಳಲ್ಲಿ ಹಾಸ್ಯನಟನಾಗಿ ಮುಂದುವರೆಯುತ್ತೇನೆ. ಹೀರೋ ಆಗಿಯೇ ಇರಬೇಕು ಎಂಬ ಯಾವ ಯೋಚನೆಯೂ ನನಗಿಲ್ಲ. ಒಂದು ವೇಳೆ ಜನ ನನ್ನನ್ನು ನಾಯಕನಾಗಿ ಮೆಚ್ಚಿದರೇ ಪೋಷಕ ಪಾತ್ರಗಳ ಜೊತೆಗೆ ಪ್ರಧಾನ ಪಾತ್ರಗಳಲ್ಲೂ ನಟಿಸುತ್ತೇನೆ" ಎಂದು ಹೇಳಿದ್ದಾರೆ.

ಉಪಾಧ್ಯಕ್ಷ ಚಿತ್ರದಲ್ಲಿ ಹೊಸದೇನಿದೆ ಎಂಬುದಕ್ಕೆ ಉತ್ತರಿಸಿದ ಅವರು, ʼಉಪಾಧ್ಯಕ್ಷʼ ಸಿನಿಮಾ, ಶರಣ್‌ ಸರ್‌ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿದ್ದ ʼಅಧ್ಯಕ್ಷʼ ಚಿತ್ರದ ಮುಂದುವರಿದ ಭಾಗ ಎನ್ನಬಹುದು. ಆ ಚಿತ್ರದಲ್ಲಿ ಕಥೆ ಎಲ್ಲಿ ನಿಂತಿತ್ತೊ, ಅಲ್ಲಿಂದ ʼಉಪಾಧ್ಯಕ್ಷʼ ಚಿತ್ರದ ಕಥೆ ಆರಂಭವಾಗುತ್ತದೆ. ಈ ಚಿತ್ರದಲ್ಲೂ ಶರಣ್‌ ಅವರೇ ಚಿ ತು ಸಂಘದ ಅಧ್ಯಕ್ಷರು. ಆದರೆ, ಚಿತ್ರದ ಕತೆಯನ್ನು ಉಪಾಧ್ಯಕ್ಷನ ಸುತ್ತ ಹೆಣೆಯಲಾಗಿದೆ. ಸಾಧು ಕೋಕಿಲ, ಧರ್ಮಣ್ಣ ಮತ್ತು ನಾಯಕಿ ಮಲೈಕ ಅವರನ್ನು ಬಿಟ್ಟರೆ ಅಧ್ಯಕ್ಷ ಚಿತ್ರದಲ್ಲಿದ್ದ ಕಲಾವಿದರೇ ಈ ಬಾರಿಯೂ ನಮ್ಮ ಜೊತೆಯಾಗಿದ್ದಾರೆ. ಮನರಂಜನೆಯೇ ಉಪಾಧ್ಯಕ್ಷನ ಜೀವಾಳ ಎಂದು ಚಿತ್ರಕತೆ ಮತ್ತು ಕಲಾವಿದರ ಬಗ್ಗೆ ಮಾಹಿತಿ ಹಂಚಿಕೊಂಡರು. 

ಈ ಸುದ್ದಿ ಓದಿದ್ದೀರಾ? ಸಿನಿಮಾ ಆಗಲಿದೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್‌ ಜೀವನಗಾಥೆ

ಹಾಸ್ಯನಟರು ಅಥವಾ ಪೋಷಕ ನಟರು ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಚಿತ್ರಗಳಿಗೆ ಹೆಚ್ಚು ಬಂಡವಾಳ ಹಾಕಲು ನಿರ್ಮಾಪಕರು ಸಿದ್ಧವಿರುವುದಿಲ್ಲ. ಆದರೆ, ನಮ್ಮ ಸಿನಿಮಾ ವಿಚಾರಕ್ಕೆ ಬಂದಾಗ ನಾನು ತುಸು ಅದೃಷ್ಟವಂತ. ನಿರ್ಮಾಪಕರಾದ ಉಮಾಪತಿಯವರು ಚಿತ್ರಕ್ಕೆ ಒಳ್ಳೆಯ ಬಜೆಟ್‌ ನೀಡಿದ್ದಾರೆ. ಚಿತ್ರದಲ್ಲಿ ತಂತ್ರಜ್ಞರ ದಂಡೆ ಇದೆ. ಈಗಾಗಲೇ ಹೆಸರು ಮಾಡಿರುವ ನಿರ್ದೇಶಕ ಅನಿಲ್‌ ಕುಮಾರ್‌ ಅವರು ನಮ್ಮ ಚಿತ್ರ ನಿರ್ದೇಶಿಸುತ್ತಿದ್ದಾರೆ. ಛಾಯಾಗ್ರಾಹಕ ಶೇಖರ್‌ ಚಂದ್ರು ಕೂಡ ಅನುಭವಸ್ಥರು. ವಿಶೇಷವಾಗಿ ಅರ್ಜುನ್‌ ಜನ್ಯ ನಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app