ಅಪ್ಪು ಅಭಿನಯದ ‘ಲಕ್ಕಿ ಮ್ಯಾನ್’ ಚಿತ್ರದ ವಿತರಣೆ ಹಕ್ಕು ಪಡೆದ ನಿರ್ಮಾಪಕ ಜಾಕ್ ಮಂಜು

  • ದೇವರಾಗಿ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯ
  • ನಾಗೇಂದ್ರ ಪ್ರಸಾದ್ ನಿರ್ದೇಶನದ ಲಕ್ಕಿ ಮ್ಯಾನ್ ಚಿತ್ರ ಸೆಪ್ಟೆಂಬರ್ 9ಕ್ಕೆ ಬಿಡುಗಡೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಲಕ್ಕಿ ಮ್ಯಾನ್ ಚಿತ್ರವನ್ನು ‘ವಿಕ್ರಾಂತ್ ರೋಣ’ ಚಿತ್ರದ ನಿರ್ಮಾಪಕ ಜಾಕ್ ಮಂಜು ಎಂದೇ ಖ್ಯಾತಿ ಪಡೆದಿರುವ ಮಂಜುನಾಥ್ ಗೌಡ ಕರ್ನಾಟಕ ವಿತರಣಾ ಹಕ್ಕನ್ನು ಪಡೆಡುಕೊಂಡಿದ್ದಾರೆ. 

ಲಕ್ಕಿ ಮ್ಯಾನ್‌ನಲ್ಲಿ ಅಪ್ಪು ಅವರು ದೇವರ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ನಟ, ನೃತ್ಯ ಸಂಯೋಜಕ ಪ್ರಭುದೇವ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಭುದೇವ ಮತ್ತು ಪುನೀತ್ ರಾಜ್‌ಕುಮಾರ್ ಮೊದಲ ಬಾರಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಇಬ್ಬರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ವೀಕೆಂಡ್ ಟೆಂಟ್ | ಈ ವಾರ ನೋಡಬಹುದಾದ ಸಿನಿಮಾ ಮತ್ತು ವೆಬ್ ಸರಣಿಗಳು

ತಮಿಳಿನ 'ಓಹ್ ಮೈ ಕಡವುಲೆ' ಚಿತ್ರದಿಂದ ಸ್ಫೂರ್ತಿ ಪಡೆದು 'ಲಕ್ಕಿ ಮ್ಯಾನ್' ಚಿತ್ರವನ್ನು ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದಾರೆ. ಲಕ್ಕಿ ಮ್ಯಾನ್ ಚಿತ್ರವು ಮುಂಬರುವ ಸೆಪ್ಟೆಂಬರ್ ಒಂಭತ್ತರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. 

ಸಂಗೀತಾ ಶೃಂಗೇರಿ ಮತ್ತು ಡಾರ್ಲಿಂಗ್ ಕೃಷ್ಣ ಅವರು ಈ ಚಿತ್ರದ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. 

ಚಿತ್ರವನ್ನು 'ಪಾರ್ಸಾ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಪಿ.ಆರ್ ಮೀನಾಕ್ಷಿ ಸುಂದರಂ ಮತ್ತು ಆರ್. ಸುಂದರ ಕಾಮರಾಜ್ ನಿರ್ಮಿಸಿದ್ದಾರೆ. 'ಲಕ್ಕಿ ಮ್ಯಾನ್' ಸಿನಿಮಾಗೆ ವಿ2 ವಿಜಯ್ ಮತ್ತು ವಿಕ್ಕಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜೀವ ಶಂಕರ್ ಛಾಯಾಗ್ರಹಣ ಮತ್ತು ಜೆ.ವಿ ಮಣಿಕಂದ ಬಾಲಾಜಿ ಅವರು ಸಂಕಲನ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್