ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ ಗೆದ್ದ ಜೈ ಭೀಮ್‌

jai bhim
  • ಫಾಲ್ಕೆ ಚಲನ ಚಿತ್ರೋತ್ಸವದಲ್ಲಿ ಜೈಭೀಮ್‌ ಮೋಡಿ
  • ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದ ಮಣಿಕಂದನ್‌

ತಮಿಳಿನ ಖ್ಯಾತ ನಟ ಸೂರ್ಯ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ʼಜೈ ಭೀಮ್ʼ ಸಿನಿಮಾ 12ನೇ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ನೈಜ ಕಥೆ ಆಧರಿಸಿದ 'ಜೈ ಭೀಮ್' ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ʼರಸಕಣ್ಣುʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಮಣಿಕಂದನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಈ ಬಗ್ಗೆ ನಟ ಸೂರ್ಯ ಒಡೆತನದ 2ಡಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮಾಹಿತಿ ನೀಡಿದ್ದು, “ದಾದಾ ಸಾಹೇಬ್ ಫಾಲ್ಕೆ ಚಲನ ಚಿತ್ರೋತ್ಸವದಲ್ಲಿ 'ಜೈಭೀಮ್' ಸಿನಿಮಾ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದೆ" ಎಂದು ಸಂತಸ ವ್ಯಕ್ತಪಡಿಸಿದೆ. ಸಿನಿಮಾವನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ಫಾಲ್ಕೆ ಚಿತ್ರೋತ್ಸವಕ್ಕೆ ಸಂಸ್ಥೆ ಧನ್ಯವಾದ ತಿಳಿಸಿದೆ.

90ರ ದಶಕದಲ್ಲಿ ಬುಡಕಟ್ಟು ಜನಾಂಗದ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಕತೆಯನ್ನಾಧರಿಸಿ ತೆರೆಗೆ ಬಂದ 'ಜೈ ಭೀಮ್' ಸಿನಿಮಾ ಜನ ಮೆಚ್ಚುಗೆ ಗಳಿಸಿತ್ತು. 'ಸೂರ್ಯ' ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಅವರು ಮಿಂಚಿದ್ದರು. ಕಥೆಯನ್ನು ಮೆಚ್ಚಿ ಚಿತ್ರಕ್ಕೆ ತಾವೇ ಬಂಡವಾಳ ಹೂಡಿದ್ದರು.

ಟಿ ಜಿ ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿಬಂದ 'ಜೈಭೀಮ್‌' ಆಸ್ಕರ್ ಪ್ರಶಸ್ತಿಗೆ ಕೂಡ ನಾಮ ನಿರ್ದೇಶನಗೊಂಡಿತ್ತು. ಆಸ್ಕರ್‌ನ ಅಧಿಕೃತ ಯುಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಯೂ 'ಜೈಭೀಮ್' ಚಿತ್ರಕ್ಕಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app