
- ಯುಟ್ಯೂಬ್ನಲ್ಲಿ ಸದ್ದು ಮಾಡ್ತಿದೆ ʼಕೊರಿಯನ್ ಮನಿ ಹೇಸ್ಟ್ʼ ಟೀಸರ್
- ಜೂನ್ 24ಕ್ಕೆ ನೆಟ್ಫ್ಲಿಕ್ಸ್ನಲ್ಲಿ ತೆರೆ ಕಾಣಲಿದೆ ಬಹು ನಿರೀಕ್ಷಿತ ಸರಣಿ
ʼಮನಿ ಹೇಸ್ಟ್ʼ (ದರೋಡೆ) ವೆಬ್ ಸರಣಿ ಯಾರಿಗೆ ತಾನೇ ಗೊತ್ತಿಲ್ಲ. ಸ್ಪೇನ್ ಮೂಲದ 'ಮನಿ ಹೇಸ್ಟ್' ಸರಣಿ ದೇಶ, ಭಾಷೆಗಳ ಗಡಿ ಮೀರಿ ಪ್ರಪಂಚದಾದ್ಯಂತ ಸಿನಿ ರಸಿಕರಿಗೆ ಹತ್ತಿರವಾಗಿತ್ತು.
ಕೊರೊನಾ ಸಂದರ್ಭದಲ್ಲಿ ʼನೆಟ್ಫ್ಲಿಕ್ಸ್ʼನಲ್ಲಿ ಸಖತ್ ಸದ್ದು ಮಾಡಿದ್ದ ಈ ಸರಣಿ ಇದೀಗ ಮತ್ತೆ ಸುದ್ದಿಯಲ್ಲಿದೆ. 'ಮನಿ ಹೇಸ್ಟ್' ಎಂದ ಕೂಡಲೇ ಮತ್ತದೆ ʼಬ್ಯಾಂಕ್ ಆಫ್ ಸ್ಪೇನ್ʼ, ʼರಾಯಲ್ ಮಿಂಟ್ʼ ಎಂಬ ಕಲ್ಪನೆಯಲ್ಲಿ ಕಳೆದು ಹೋಗಬೇಡಿ.
ಈ ಬಾರಿ ʼಮನಿ ಹೇಸ್ಟ್ʼ ನಡೆಯುತ್ತಿರುವುದು ಸ್ಪೇನ್ನಲ್ಲಿ ಅಲ್ಲ. ಬದಲಿಗೆ ದಕ್ಷಿಣ ಕೊರಿಯದಲ್ಲಿ. ಹೌದು, ʼಸ್ಪಾನಿಷ್ ಮನಿ ಹೇಸ್ಟ್ʼ ಛಾಯೆಯನ್ನೇ ಆಧರಿಸಿ ದಕ್ಷಿಣ ಕೊರಿಯ ಮೂಲದ ಕಥೆಯನ್ನಿಟ್ಟುಕೊಂಡು ʼಮನಿ ಹೇಸ್ಟ್ ಕೊರಿಯ : ಜಾಯಿಂಟ್ ಎಕಾನಮಿ ಏರಿಯಾʼ ಎಂಬ ಶೀರ್ಷಿಕೆ ಅಡಿಯಲ್ಲಿ ವೆಬ್ ಸರಣಿ ಮೂಡಿ ಬರುತ್ತಿದೆ.
ʼಮನಿ ಹೇಸ್ಟ್ ಕೊರಿಯʼದ ಟೀಸರ್ ಈಗಾಗಲೇ ಯುಟ್ಯೂಬ್ನಲ್ಲಿ ಬಿಡುಗಡೆಗೊಂಡಿದ್ದು, ಸರಣಿಯ ಮೇಲಿನ ನೀರಿಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ದಕ್ಷಿಣ ಕೊರಿಯಗೆ ಸ್ವಾತಂತ್ರ್ಯ ಸಿಕ್ಕ ಬಳಿಕ ಅಲ್ಲಿನ ಸರ್ಕಾರದ ಆರ್ಥಿಕ ನೀತಿಗಳಿಂದ ಜನ ಸಾಮಾನ್ಯರು ರೋಸಿ ಹೋಗುತ್ತಾರೆ. ಬಂಡವಾಳಶಾಹಿಗಳೇ ಮೇಲುಗೈ ಸಾಧಿಸುವ ಸಮಯ ಬಳಸಿಕೊಳ್ಳುವ ಗುಂಪು ʼಕೊರಿಯನ್ ಮಿಂಟ್ʼ ದೋಚಲು ಸಜ್ಜಾಗುತ್ತಾರೆ.
ʼಸ್ಪಾನಿಷ್ ಮನಿ ಹೇಸ್ಟ್ʼನಲ್ಲಿ ಇದ್ದಂತೆ ʼಕೊರಿಯನ್ ಮನಿ ಹೇಸ್ಟ್ʼನಲ್ಲೂ ʼಪ್ರೊಫೆಸರ್ʼ, ʼಟೋಕಿಯೋʼ ಎಲ್ಲಾ ಪಾತ್ರಧಾರಿಗಳು ಮಿಂಚಿದ್ದಾರೆ. ಬಹು ನಿರೀಕ್ಷೆ ಹುಟ್ಟಿಸಿರುವ ಈ ವೆಬ್ ಸರಣಿ ಜೂನ್ 24ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.