ವೈವಾಹಿಕ ಜೀವನಕ್ಕೆ ಕಾಲಿಟ್ಟ ರವಿಚಂದ್ರನ್ ಪುತ್ರ ಮನೋರಂಜನ್

  • ಸಂಗೀತಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೋರಂಜನ್
  • ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಭಾಗಿ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ಅವರು ಸಂಗೀತಾ ದೀಪಕ್ ಎಂಬವರ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಗಸ್ಟ್ 20ರಂದು ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿದ್ದು, ನಟ ಶಿವರಾಜ್‌ ಕುಮಾರ್, ಹಂಸಲೇಖ ದಂಪತಿ, ರಾಘವೇಂದ್ರ ರಾಜ್‌ ಕುಮಾರ್ ದಂಪತಿ ಹಾಗೂ ಅಕುಲ್ ಬಾಲಾಜಿ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.

ಚಿತ್ರರಂಗದವರಿಗೋಸ್ಕರ ರವಿಚಂದ್ರನ್ ಆರತಕ್ಷತೆ ಕಾರ್ಯಕ್ರಮ ಸಿದ್ಧತೆ ಕೂಡ ನಡೆದಿದೆ. ತಾಯಿ ಸುಮತಿ ರವಿಚಂದ್ರನ್ ಅವರು ಹುಡುಕಿದ ಹುಡುಗಿ ಸಂಗೀತಾ ಜೊತೆ ಮನೋರಂಜನ್ ಮದುವೆಯಾಗಿದ್ದಾರೆ. ಈ ಮೊದಲೇ ರವಿಚಂದ್ರನ್ ಅವರು ಹೇಳಿದಂತೆ, “ನನ್ನ ಮಗಳು ಅಂಜಲಿ ರೀತಿಯಲ್ಲಿ ಮಗನ ಮದುವೆ ಮಾಡೋದಿಲ್ಲ. ಸರಳವಾಗಿ ಮಾಡುತ್ತೇವೆ, ಹೆಣ್ಣಿನ ಕಡೆಯವರಿಗೆ ಆಡಂಬರ ಇಷ್ಟವಿಲ್ಲ” ಎಂದು ಹೇಳಿದ್ದ ಹಾಗೇ ಮಗನ ಮದುವೆಯನ್ನು ಸರಳವಾಗಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಂದೂಗಳ ಭಾವನೆಗೆ ಧಕ್ಕೆ ಆರೋಪ: ವಿವಾದದಲ್ಲಿ ಹೃತಿಕ್ ರೋಷನ್‌ ಅಭಿನಯದ ಝೊಮ್ಯಾಟೊ ಜಾಹೀರಾತು!

"ಮನೆಯವರು ಒಪ್ಪಿ ಮಾಡಿರುವ ಮದುವೆ ನಮ್ಮದು. ನಾನು ಮದುವೆ ಆಗಲಿರುವ ಹುಡುಗಿ ಸಂಗೀತಾ ನಮಗೆ ದೂರದ ಸಂಬಂಧಿ ಆಗಬೇಕು. ನಾವು ಒಬ್ಬರನ್ನೊಬ್ಬರು ಅರಿತುಕೊಂಡ ನಂತರ ಮದುವೆಯಾಗಿದ್ದೇವೆ. ನಾನು ಚಿತ್ರರಂಗದಲ್ಲಿ ಕೆಲಸ ಮಾಡುವುದರಿಂದ ನನ್ನ ಬಗ್ಗೆ ಹುಡುಗಿಗೆ ತಿಳಿದುಕೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕು. ಹಾಗಾಗಿ ನಮ್ಮ ಮದುವೆ ತಡವಾಗಿ ಆಯಿತು. ನಾನು ನಟನಾಗಿರುವುದರಿಂದ, ಅವರಿಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಸಮಯ ನೀಡಬೇಕು. ಹಾಗಾಗಿ ಈ ನಿರ್ಧಾರವನ್ನು ಒಮ್ಮೆಲೆ ತೆಗೆದುಕೊಳ್ಳಲಿಲ್ಲ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಚಿತ್ರರಂಗದವರು ಮತ್ತು ಆತ್ಮೀಯರಿಗಾಗಿ ಆಗಸ್ಟ್ 22ರಂದು ರವಿಚಂದ್ರನ್ ಅವರು ಕೂಡ ಮಗನ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180