ರಾಷ್ಟ್ರೀಯ ಸಿನಿಮಾ ದಿನ | ಮಲ್ಟಿಫ್ಲೆಕ್ಸ್‌ನಲ್ಲಿ ₹75ಕ್ಕೆ ಟಿಕೆಟ್‌; ದಾಖಲೆ ಆರು ಲಕ್ಷ ಮುಂಗಡ ಟಿಕೆಟ್ ಮಾರಿದ 'ಬ್ರಹ್ಮಾಸ್ತ್ರ'

  • ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ ದೇಶಾದ್ಯಂತ ಟಿಕೆಟ್‌ ದರ ಕೇವಲ ₹75
  • 'ಬ್ರಹ್ಮಾಸ್ತ್ರ' ಸೇರಿ ಮರುಬಿಡುಗಡೆಯಾದ 'ಅವತಾರ್' ವೀಕ್ಷಣೆಗೆ ಮುಗಿಬಿದ್ದ ಪ್ರೇಕ್ಷಕರು

ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ ಚಲನಚಿತ್ರ ಪ್ರದರ್ಶನಗಳ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಿದ ಕಾರಣ 'ಬ್ರಹ್ಮಾಸ್ತ್ರ' ಸಿನಿಮಾದ ಆರು ಲಕ್ಷಗಳಷ್ಟು ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ. ಆ ಮೂಲಕ ಬಾಲಿವುಡ್ ಸಿನಿಮಾ 'ಕೆಜಿಎಫ್ 2' ಚಿತ್ರ ಈ ವರ್ಷ ಮುಂಗಡ ಮಾರಾಟದಲ್ಲಿ ಮಾಡಿದ್ದ ದಾಖಲೆಯನ್ನು ಮುರಿದಿದೆ.

ಕೋವಿಡ್ ಕಾರಣದಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದರಿಂದ, ಪ್ರೇಕ್ಷಕರನ್ನು ಚಲನಚಿತ್ರ ಮಂದಿರಗಳತ್ತ ಆಕರ್ಷಿಸುವ ಸಲುವಾಗಿ ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ ಟಿಕೆಟ್‌ಗಳ ದರವನ್ನು ಒಂದು ದಿನದ ಮಟ್ಟಿಗೆ ₹75ಕ್ಕೆ ಇಳಿಸಲಾಗಿದೆ.

Eedina App

ಹಾಗಾಗಿ ಸಿನಿ ರಸಿಕರು ಶುಕ್ರವಾರ (ಸೆಪ್ಟೆಂಬರ್ 23) ಕಡಿಮೆ ಬೆಲೆಗೆ 'ಬ್ರಹ್ಮಾಸ್ತ್ರ' ಸಿನಿಮಾದ ಸುಮಾರು ಆರು ಲಕ್ಷ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. 

ಸಾಮಾನ್ಯವಾಗಿ 'ಪ್ರೀಮಿಯಂ 3ಡಿ' ಮತ್ತು 'ಐಮ್ಯಾಕ್ಸ್'ಗಳಲ್ಲಿ 'ಬ್ರಹ್ಮಾಸ್ತ್ರ' ಚಿತ್ರದ ಟಿಕೆಟ್ ದರ ₹150 ಮತ್ತು ₹200ರ ನಡುವೆ ಇರುತ್ತದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, 'ಬ್ರಹ್ಮಾಸ್ತ್ರ' ಮುಂಗಡ ಬುಕಿಂಗ್ ಮೂಲಕ ₹5.99 ಲಕ್ಷ ಟಿಕೆಟ್‌ಗಳನ್ನು ಮಾರಲು ಯೋಜಿಸಲಾಗಿತ್ತು. 

AV Eye Hospital ad

ಮಧ್ಯರಾತ್ರಿ 12 ಗಂಟೆಯಿಂದಲೇ 'ಬ್ರಹ್ಮಾಸ್ತ್ರ' ಚಿತ್ರದ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಇಂದು ಬಿಡುಗಡೆಯಾಗುತ್ತಿರುವ ‘ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್’ ಚಿತ್ರಕ್ಕಾಗಿಯೂ ಇದೇ ರೀತಿಯ ಪ್ರತಿಕ್ರಿಯೆ ಬಂದಿದ್ದು, ಅದು ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಮತ್ತು ‘ಜಗ್ಜಗ್ ಜೀಯೋ’ದಂತಹ ದೊಡ್ಡ ಚಿತ್ರಗಳನ್ನು ಮೀರಿಸಿದೆ.

ಈ ಸುದ್ದಿ ಓದಿದ್ದೀರಾ? ಸಿಹಿ ಸುದ್ದಿ | ₹75ಗೆ ಮಲ್ಟಿಪ್ಲೆಕ್ಸ್‌‌ನಲ್ಲಿ ನೋಡಿ ನಿಮ್ಮ ಇಷ್ಟದ ಸಿನಿಮಾ!

'ಬ್ರಹ್ಮಾಸ್ತ್ರ' ಸಿನಿಮಾ ಈಗಾಗಲೇ ಒಟ್ಟು ಒಂಬತ್ತು ಲಕ್ಷ ಟಿಕೆಟ್‌ಗಳನ್ನು ಮುಂಗಡ ಮಾರಾಟ ಮಾಡಿದೆ ಎಂದು ಹೇಳಿದೆ. ಈ ಮೊದಲು 'ಕೆಜಿಎಫ್ 2' ಚಿತ್ರ ಸುಮಾರು 5.15 ಲಕ್ಷ ಟಿಕೆಟ್‌ಗಳನ್ನು ಮುಂಗಡ ಮಾರಾಟ ಮಾಡಿರುವುದು ಈ ವರ್ಷದ ಹಿಂದಿನ ದಾಖಲೆಯಾಗಿತ್ತು. ಕೆಲ ವರ್ಷಗಳ ಹಿಂದೆ 'ಬಾಹುಬಲಿ 2' ಚಿತ್ರ 6.5 ಲಕ್ಷ ಟಿಕೆಟ್‌ಗಳನ್ನು ಮುಂಗಡವಾಗಿ ಮಾರಾಟ ಮಾಡಿದ್ದು ಸಾರ್ವಕಾಲಿಕ ದಾಖಲೆಯಾಗಿತ್ತು.

'ಬ್ರಹ್ಮಾಸ್ತ್ರ'ವನ್ನು ₹410 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಧರ್ಮ ಪ್ರೊಡಕ್ಷನ್ಸ್ ಪ್ರಕಾರ ₹360 ಕೋಟಿ ಗಳಿಸಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ ಹಾಗೂ ಮೌನಿ ರಾಯ್ ನಟಿಸಿದ್ದಾರೆ. ಜೊತೆಗೆ ಶಾರುಖ್ ಖಾನ್, ಡಿಂಪಲ್ ಕಪಾಡಿಯಾ ಹಾಗೂ ದೀಪಿಕಾ ಪಡುಕೋಣೆ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app