
- ಅಕ್ರಮ ಆನೆದಂತ ಸಂಗ್ರಹ ಆರೋಪ ಎದುರಿಸುತ್ತಿರುವ ನಟ
- 2012ರಲ್ಲಿ ಮೋಹನ್ಲಾಲ್ ನಿವಾಸದಲ್ಲಿ ಪತ್ತೆಯಾಗಿದ್ದ 4 ಆನೆದಂತಗಳು
ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ವಿರುದ್ಧದ ವಿಚಾರಣೆ ಕೈಬಿಡುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸ್ಥಳೀಯ ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದೆ.
ಆನೆದಂತಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡ ಆರೋಪದಲ್ಲಿ ನಟನ ವಿರುದ್ಧ ನಡೆಸಲಾಗುತ್ತಿರುವ ವಿಚಾರಣೆಯಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ ಎಂದು ಸರ್ಕಾರದ ಪರ ವಕೀಲರು ಇಂದು ನಟನ ಪರ ವಾದ ಮಂಡಿಸಿದ್ದಾರೆ.
ಸರ್ಕಾರದ ಪರ ವಕೀಲರ ಅರ್ಜಿ ತಿರಸ್ಕರಿಸಿರುವ ಪೆರಂಬೂರಿನ ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, "ಪ್ರಕರಣದಲ್ಲಿ ಆರೋಪಿಯಾಗಿರುವ ಮೋಹನ್ಲಾಲ್ ದಂತಗಳ ಮಾಲೀಕತ್ವ ಹೊಂದಿರುವ ಬಗ್ಗೆ ಹೈಕೋರ್ಟ್ನ ತೀರ್ಪು ಬಾಕಿ ಇರುವ ಹೊತ್ತಿನಲ್ಲಿ ಆರೋಪಿ ಸಲ್ಲಿಸಿರುವ ಮಾಲೀಕತ್ವ ಪ್ರಮಾಣಪತ್ರವನ್ನು ಊರ್ಜಿತವಾಗಿದೆ ಎಂದು ಊಹಿಸಿ ತ್ವರಿತವಾಗಿ ವಿಚಾರಣೆ ಕೈ ಬಿಡಲು ಸಾಧ್ಯವಿಲ್ಲ. ದಂತಗಳ ಮಾಲಿಕತ್ವ ಪ್ರಮಾಣಪತ್ರದ ಬಗ್ಗೆ ಹೈಕೋರ್ಟ್ ತೀರ್ಪು ನೀಡುವವರೆಗೆ ಪ್ರಕರಣದ ವಿಚಾರಣೆ ಮುಂದುವರೆಯಲಿದೆ" ಎಂದು ನ್ಯಾಯಾಧೀಶೆ ಅಂಜು ಕ್ಲೆಟಸ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಪಾಯಕಾರಿ ಕಾಯಿಲೆಗೆ ತುತ್ತಾದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್
ನಟ ಮೋಹನ್ ಲಾಲ್ ಎರಡು ಜೊತೆ ಆನೆದಂತಗಳನ್ನು ಅಕ್ರಮವಾಗಿ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದ ಆರೋಪ ಎದುರಿಸುತ್ತಿದ್ದಾರೆ. 2012ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೋಹನ್ ಲಾಲ್ ನಿವಾಸದ ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 4 ಆನೆದಂತಗಳನ್ನು ವಶಕ್ಕೆ ಪಡೆಯಲಾಗಿತ್ತು.
ಇದಾದ ಬಳಿಕ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಮೋಹನ್ ಲಾಲ್ ಅವರ ಮೇಲೆ ವನ್ಯಜೀವಿ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.