ತೆರೆಕಂಡ ಎರಡೇ ವಾರಕ್ಕೆ ಒಟಿಟಿ ಪಾಲಾದ ವಿರಾಟ ಪರ್ವಂ

virata-parvam
  • ಚಿತ್ರಮಂದಿರಗಳಲ್ಲಿ ವಿರಾಟ ಪರ್ವಂ ನಿರಸ ಪ್ರದರ್ಶನ
  • ಒಟಿಟಿ ಮೊರೆ ಹೊದ ಸಿನಿಮಾದ ನಿರ್ಮಾಪಕರು 

ಬಹುಭಾಷಾ ನಟಿ ಸಾಯಿ ಪಲ್ಲವಿ ಮತ್ತು ನಟ ರಾಣಾ ದಗ್ಗುಬಾಟಿ ಮುಖ್ಯಭೂಮಿಕೆಯ 'ವಿರಾಟ ಪರ್ವಂ' ಸಿನಿಮಾ ಚಿತ್ರಮಂದಿರಗಳಲ್ಲಿ ತಕ್ಕ ಮಟ್ಟಿನ ಯಶಸ್ಸು ಗಳಿಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೆರೆಕಂಡ ಎರಡೇ ವಾರಕ್ಕೆ ಚಿತ್ರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ.

15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ʼವಿರಾಟ ಪರ್ವಂʼ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮೊತ್ತವನ್ನು ಕಲೆ ಹಾಕುವಲ್ಲಿ ಸೋತಿದೆ. ತೆರೆಕಂಡ 2 ವಾರಕ್ಕೆ ಚಿತ್ರ ಗಳಿಸಿದ್ದು ಕೇವಲ 12 ಕೋಟಿ ರೂಪಾಯಿ ಮಾತ್ರ. ಹಾಕಿದ್ದ ಬಂಡವಾಳ ಕೂಡ ಹಿಂತಿರುಗಿಲ್ಲ ಎಂಬ ಕಾರಣಕ್ಕೆ ನಿರ್ಮಾಪಕರು ಚಿತ್ರವನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಸಲ್ಮಾನ್‌ ಖಾನ್‌ ಸಿನಿಮಾಗೆ ರವಿ ಬಸ್ರೂರ್‌ ಗಾನ ಬಜಾನ

ಜುಲೈ 1ರಿಂದ 'ವಿರಾಟ ಪರ್ವಂ' ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನ ಕಾಣಲಿದ್ದು, ಜೂನ್ 17ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ, ಕೇವಲ 13 ದಿನಗಳ ಅಂತರದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿರುವುದು ಸಾಯಿ ಪಲ್ಲವಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಚಿತ್ರದ ಸೋಲಿಗೆ ಸಾಯಿ ಪಲ್ಲವಿ ಅವರ ಹೇಳಿಕೆಗಳೇ ಕಾರಣ ಎಂದು ಕೂಡ ಆರೋಪಿಸಲಾಗುತ್ತಿದೆ.

ವೇಣು ಉಡುಗುಲ ನಿರ್ದೇಶನದಲ್ಲಿ ಮೂಡಿ ಬಂದಿರುವ ʼವಿರಾಟ ಪರ್ವಂʼ ಕತೆ 90ರ ದಶಕದ ತೆಲಂಗಾಣ ನಕ್ಸಲ್ ಚಳವಳಿಯ ಹಿನ್ನೆಲೆಯನ್ನು ಹೊಂದಿದೆ. ಹಳ್ಳಿಗರು ಮತ್ತು ಬುಡಕಟ್ಟು ಜನರ ಮೇಲೆ ಅಧಿಕಾರಶಾಹಿಯ ದೌರ್ಜನ್ಯ. ನ್ಯಾಯಕ್ಕಾಗಿ ದಟ್ಟಾರಣ್ಯಗಳ ನಡುವೆ ಹೋರಾಟ ಸಂಘಟಿಸುವ ನಕ್ಸಲರ ಗುಂಪು. ಹೋರಾಟದ ಕತೆಗಳನ್ನು ಓದಿ ಸ್ಫೂರ್ತಿಗೊಳ್ಳುವ ಹಳ್ಳಿ ಹುಡುಗಿ ಚಳವಳಿಯ ಮುಂಚೂಣಿ ನಾಯಕನನ್ನು ಪ್ರೀತಿಸಲು ಶುರು ಮಾಡುತ್ತಾಳೆ. ಆತನೊಂದಿಗೆ ಬದುಕುವ ನಿರ್ಧಾರಕ್ಕೆ ಬರುವ ಯುವತಿ ಮುಂದೆ ತಾನೇ ಚಳವಳಿಯ ಚುಕ್ಕಾಣಿ ಹಿಡಿಯುತ್ತಾಳೆ. ಪ್ರೀತಿಗಾಗಿ ಹೋರಾಟದ ಹಾದಿ ತುಳಿದ ಕಥಾನಾಯಕಿ ಮುಂದೆ ಏನಾದಳು ಎಂಬುದನ್ನು ಸಿನಿಮಾವನ್ನು ನೋಡಿಯೇ ತಿಳಿಯಬೇಕು.

ನಿಮಗೆ ಏನು ಅನ್ನಿಸ್ತು?
0 ವೋಟ್