ಸೆಪ್ಟೆಂಬರ್ 16ರಂದು ಎಲ್ಲ ಚಲನಚಿತ್ರಗಳ ಟಿಕೆಟ್‌ ದರ ಕೇವಲ ₹75

  • 4,000ಕ್ಕೂ ಹೆಚ್ಚು ಚಲನಚಿತ್ರ ಮಂದಿರಗಳಲ್ಲಿ ಒಂದು ದಿನ ಟಿಕೆಟ್‌ ಬೆಲೆಯಲ್ಲಿ ರಿಯಾಯಿತಿ
  • ಪಿವಿಆರ್, ಐನಾಕ್ಸ್ ಹಾಗೂ ಸಿನಿಪೊಲಿಸ್‌ ಮಲ್ಟಿಫ್ಲೆಕ್ಸ್‌ಗಳಲ್ಲಿಯೂ ಟಿಕೆಟ್ ಬೆಲೆ ಕಡಿತ

ಭಾರತೀಯ ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ ಸೆಪ್ಟೆಂಬರ್ 16ರಂದು ಭಾರತದ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಕೇವಲ ₹75 ಇರಲಿದೆ ಎಂದು ರಾಷ್ಟ್ರೀಯ ಸಿನಿಮಾ ದಿನ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸಿನಿಮಾ ಫೌಂಡೇಶನ್ ತಿಳಿಸಿದೆ.

ಪಿವಿಆರ್, ಐನಾಕ್ಸ್ ಹಾಗೂ ಸಿನೆಪೊಲಿಸ್ ಸೇರಿದಂತೆ ಭಾರತದಾದ್ಯಂತ 4,000ಕ್ಕೂ ಹೆಚ್ಚು ಚಿತ್ರಮಂದಿರಗಳು ಒಂದು ದಿನದ ಮಟ್ಟಿಗೆ ಟಿಕೆಟ್ ಬೆಲೆಯಲ್ಲಿ ರಿಯಾಯಿತಿ ನೀಡಲಿದೆ. 

ಕೊರೊನಾ ಕಾರಣದಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದರಿಂದ, ಪ್ರೇಕ್ಷಕರನ್ನು ಚಲನಚಿತ್ರ ಮಂದಿರಗಳತ್ತ ಆಕರ್ಷಿಸುವ ಸಲುವಾಗಿ ರಾಷ್ಟ್ರ ಸಿನಿಮಾ ದಿನದ ಪ್ರಯುಕ್ತ ಟಿಕೆಟ್ ದರ ಕಡಿಮೆ ಮಾಡಲಿದ್ದಾರೆ. 

ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಎಂಎಐ) ಸಹ ಟಿಕೆಟ್ ದರ ಕಡಿಮೆ ಮಾಡಲು ಸಮ್ಮತಿ ನೀಡಿದೆ. ಚಲನಚಿತ್ರಗಳ ವ್ಯವಾಹಾರಗಳನ್ನು ಉತ್ತೇಜಿಸುವ ಸಲುವಾಗಿ ಮತ್ತು ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಸಲುವಾಗಿ ಒಂದು ದಿನ ರಿಯಾಯಿತಿ ನೀಡಲಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಹುಟ್ಟು ಹಬ್ಬದ ದಿನದಂದು ಪುಣ್ಯಕೋಟಿ ಯೋಜನೆಗೆ ರಾಯಭಾರಿಯಾದ ಕಿಚ್ಚ ಸುದೀಪ್

ಸೆಪ್ಟೆಂಬರ್ 16ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಕಡಿಮೆ ಮಾಡುವುದರ ಬಗ್ಗೆ ಯಾವುದೇ ನಿರ್ಬಂಧಗಳನ್ನು ಪಟ್ಟಿ ಮಾಡಿರುವುದಿಲ್ಲ. ಆದರೆ ಚಿತ್ರದ ಸ್ವರೂಪ ಅಥವಾ ಭಾಷೆ ಪರಿಗಣಿಸದೆ, ಪ್ರತಿ ಚಿತ್ರಕ್ಕೂ ಒಂದೇ ಬೆಲೆ ಇರುತ್ತದೆ ಎಂದು ರಾಷ್ಟ್ರೀಯ ಸಿನಿಮಾ ದಿನ ಸಂಸ್ಥೆ ತಿಳಿಸಿದೆ. 

ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ ಈಗಾಗಲೇ ಅಮೆರಿಕದ ಎಎಂಸಿ ಮತ್ತು ಸಿನಿಮಾರ್ಕ್‌ನಂತಹ ಚಿತ್ರಮಂದಿರಗಳಲ್ಲಿ $3ಕ್ಕೆ (₹240) ಟಿಕೆಟ್ ದರ ಕಡಿಮೆ ಮಾಡಲಾಗಿದೆ. ಇಂಗ್ಲೆಂಡ್‌ನಲ್ಲಿ ಸಹ ಈ ಮಾದರಿ ಅನುಸರಿಸಿದ್ದು, ಶನಿವಾರದಂದು (ಸೆಪ್ಟೆಂಬರ್ 3) ಸುಮಾರು £3ರಷ್ಟು (₹277) ಟಿಕೆಟ್ ದರ ನಿಗದಿಪಡಿಸಲಾಗಿದೆ. 

'ಬುಕ್ ಮೈ ಶೋ'ನಂತಹ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗಳ ಮೂಲಕ ಟಿಕೆಟ್ ಖರೀದಿಸಲು ಯಾವುದೇ ಹೆಚ್ಚುವರಿ ತೆರಿಗೆ ಶುಲ್ಕ ಪಾವತಿಸಬೇಕಾಗಿರುವುದಿಲ್ಲ. ಆದರೆ, ಈ ಬಗ್ಗೆ ಯಾವುದೇ ಸಿನಿಮಾ ಟಿಕೆಟ್ ಬುಕಿಂಗ್ ವೆಬ್‌ಸೈಟ್‌ಗಳಲ್ಲಿ ಮಾಹಿತಿ ನವೀಕರಣಗೊಂಡಿಲ್ಲ. 

ನಿಮಗೆ ಏನು ಅನ್ನಿಸ್ತು?
3 ವೋಟ್
Image
av 930X180