ವೀಕೆಂಡ್ ಟೆಂಟ್ | ಈ ವಾರ ನೋಡಬಹುದಾದ ಸಿನಿಮಾ ಮತ್ತು ವೆಬ್ ಸರಣಿಗಳು

ವಾರಾಂತ್ಯದಲ್ಲಿ ನೀವು ಬಿಡುವು ಮಾಡಿಕೊಂಡು ನೋಡಲೇಬೇಕಾದ ಹೊಸ ಸಿನಿಮಾ ಮತ್ತು ವೆಬ್ ಸರಣಿಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ.

ಈ ವಾರ ನಾನಾ ಭಾಷೆಗಳ ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ. ಸಿನಿಮಾ ಪ್ರಿಯರಿಗೆ ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ನೀವು ನೋಡಬಹುದಾದ ಸಿನಿಮಾಗಳು ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

  • ಡೇವಿಡ್ ಎಸ್ಎಫ್ ವಿಲ್ಸನ್ ನಿರ್ದೇಶನದ ‘ಬ್ಲಡ್‌ಶಾಟ್’ 

ಸೂಪರ್ ಹೀರೋ ಚಿತ್ರದ ಡೇವಿಡ್ ಎಸ್ಎಫ್ ವಿಲ್ಸನ್ ನಿರ್ದೇಶನದ 'ಬ್ಲಡ್‌ಶಾಟ್’ ಎಂಬ ಹಾಲಿವುಡ್ ಚಿತ್ರವು ಆಗಸ್ಟ್ 12ರಂದು ಬಿಡುಗಡೆಯಾಗಿದೆ. ವಿನ್ ಡೀಸೆಲ್, ಐಜಾ ಗೊನ್ಜಾಲೆಜ್, ಹಾಗೂ ಸ್ಯಾಮ್ ಹ್ಯೂಘನ್ ಪ್ರಮುಖರು ನಟಿಸಿದ್ದಾರೆ. ಈ ಚಿತ್ರವು ಅಮೇರಿಕನ್ ಸೂಪರ್ ಹೀರೋ ಥ್ರಿಲ್ಲರ್ ಕಥೆಯಾಗಿದೆ. ಹೊಸ ತಂತ್ರಜ್ಞಾನದಿಂದ ವ್ಯಕ್ತಿಯೊಬ್ಬ ಸದಾ ಜೀವಂತವಾಗಿ ಇರುವ ಕಥೆಯಾಗಿದ್ದು, ಆತನಿಂದ ಎದುರಾಗುವ ಸಮಸ್ಯೆಗಳು ಮೈರೋಮಾಂಚನಗೊಳಿಸುತ್ತದೆ. ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಸಾಹಸ, ವಿಜ್ಞಾನ ಇಷ್ಟಪಡುವವರು ತಪ್ಪದೇ ನೋಡಿ.

  • ಇಂಡಿಯನ್ ಮ್ಯಾಚ್ಮೇಕಿಂಗ್ ಸೀಸನ್ 2ರಲ್ಲಿ ಮ್ಯಾಚ್ ಹೇಗಿದೆ?

ಸಿಮಾ ತಪಾರಿಯಾ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಎಂಟು ಕಂತುಗಳಿರುವ ‘ಇಂಡಿಯನ್ ಮ್ಯಾಚ್‌ಮೇಕಿಂಗ್’ ಸೀಸನ್ 2 ವೆಬ್ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಮೊದಲ ಸೀಸನ್ ನೋಡಿದವರು ತಪ್ಪದೇ ಸೀಸನ್ ಎರಡನ್ನು ನೋಡಿ. ಮದುವೆಯಾಗುವ ಹುಡುಗ ಹುಡುಗಿಯರ ಬೇಡಿಕೆಗಳಿಗೆ ತಕ್ಕಂತೆ ಪ್ರಪಂಚಾದ್ಯಂತ ಸುತ್ತಾಡುವ ಮದುವೆ ಬ್ರೋಕರ್ ಕಥೆ ಇದಾಗಿದ್ದು, ಕೌಟುಂಬಿಕ ಸಂದೇಶ ನೀಡಲಿದೆ. ಕುಟುಂಬ ಸಮೇತ ಎಲ್ಲರೂ ನೋಡಬಹುದು.

  • ‘ಶಭಾಷ್ ಮಿಥು’ಗೆ ನೋಡಿ ಶಭಾಶ್ ಎನ್ನುವಿರಿ

ತಾಪ್ಸಿ ಪನ್ನು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಶಭಾಶ್ ಮಿಥು’ ಎಂಬ ಹಿಂದಿ ಚಿತ್ರ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಜೀವನಾಧಾರಿತ ಸಿನಿಮಾ. ಪ್ರತಿಯೊಬ್ಬ ಹೆಣ್ಣು ಮಕ್ಕಳು ನೋಡಲೆಬೇಕಾದ ಚಿತ್ರವಿದು. ಜುಲೈ 15ರಂದು ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸ್ಪೂರ್ತಿದಾಯಕ ಕಥೆಯಾಗಿದ್ದು, ಚಿತ್ರಮಂದಿರದಲ್ಲಿ ನೋಡದೆ ಇದ್ದವರು ಇವಾಗ ಆಗಸ್ಟ್ 12ರಂದು ವೂಟ್ ಸೆಲೆಕ್ಟ್‌ನಲ್ಲಿ ಬಿಡುಗಡೆಯಾಗಿದ್ದು, ಇಲ್ಲಿ ನೋಡಬಹುದಾಗಿದೆ. 

  • 'ಹರಿಕಥೆ ಅಲ್ಲ ಗಿರಿಕಥೆ' ನಗಿಸಲು ಬಂತು ಒಟಿಟಿಗೆ 

ರಿಷಭ್ ಶೆಟ್ಟಿ ಅಭಿನಯದ, ಸಂಪೂರ್ಣ ನಗೆಗಡಲಲ್ಲಿ ತೇಲಿಸುವ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಚನಾ ಇಂದೆರ್ ಮತ್ತು ಪ್ರಮೋದ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಹರಿಕಥೆ ಅಲ್ಲ ಗಿರಿಕಥೆ’ ವೂಟ್ ಸೆಲೆಕ್ಟ್‌ನಲ್ಲಿ ಪ್ರಸಾರವಾಗುತ್ತಿದೆ. ಹಾಸ್ಯ ತುಂಬಿರುವ ಈ ಚಿತ್ರ ಪ್ರೇಕ್ಷಕರನ್ನು ನಗಿಸಲು ಆಗಸ್ಟ್ 12ರಂದು ಓಟಿಟಿಯಲ್ಲಿ ಬಂದಿದೆ. ಚಿತ್ರಮಂದಿರದಲ್ಲಿ ನೋಡದೇ ಇದ್ದವರು ತಪ್ಪದೇ ನೋಡಿ.

  • ಹತ್ಯೆಯ ಸುತ್ತ ಸುತ್ತುವ ಸಿನಿಮಾ ‘ಕಡವರ್’

ಪೊಲೀಸ್ ಅಧಿಕಾರಿಯಾಗಿ ಅಮಲಾ ಪೌಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಕಡವರ್’ ಎಂಬ ತಮಿಳು ಚಿತ್ರ ಕುತೂಹಲಕಾರಿಯಾಗಿದೆ. ಕೊಲೆಗಳ ಸುತ್ತ ನಡೆಸುವ ಪೊಲೀಸ್ ತನಿಖೆಯು ಪ್ರತಿ ಹಂತದಲ್ಲಿಯೂ ಮುಂದೇನು ಎಂಬ ಪ್ರಶ್ನೆಯಲ್ಲೇ ಚಿತ್ರದ ಪ್ರತೀ ದೃಶ್ಯ ಸಾಗುತ್ತದೆ. ರಿತ್ವಿಕಾ ಪನ್ನೀರಸೆಲ್ವಂ, ಮುನಿಷ್ಕಾಂತ್, ಹರೀಶ್ ಉತ್ತಮನ್, ಅತುಲ್ಯ ಹಾಗೂ ತ್ರಿಗುಣ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೈಜ್ಞಾನಿಕವಾಗಿ ಸಾಗುವ ಈ ಚಿತ್ರ ಆಗಸ್ಟ್ 12ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‍‌ನಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಥ್ರಿಲ್ಲರ್ ಸಿನಿಮಾ ಇಷ್ಟಪಡುವವರಿಗೆ ಈ ಚಿತ್ರ ಇಷ್ಟವಾಗುತ್ತದೆ.

  • 'ನೆವರ್ ಹ್ಯಾವ್ ಐ ಎವರ್' - ಸೀಸನ್ 3' ಹದಿಹರೆಯದವರ ವೆಬ್‌ ಸರಣಿ

'ನೆವರ್ ಹ್ಯಾವ್ ಐ ಎವರ್' ಸೀಸನ್ 3' ವೆಬ್‌ ಸರಣಿಯು ಕಾಲೇಜಿನ ಹುಡುಗ ಹುಡುಗಿಯರ ಸಾಮಾನ್ಯ ಪ್ರೀತಿಯ ಕಥೆಯಾಗಿದ್ದು, ಭಾರತ ಮೂಲದ ತಂದೆ ತಾಯಿಯರ ಅತಿಯಾದ ಶಿಸ್ತಿನ ನಡುವೆ ಅಮೇರಿಕಾದಲ್ಲಿ ಹುಟ್ಟಿ ಬೆಳೆಯುವ ಯುವತಿಯೊಬ್ಬಳ ಬದುಕಿನ ಕಥೆಯಾಗಿದೆ. ಪ್ರೀತಿಯಲ್ಲಿ ಆಗುವ ಮೋಸ ದುಃಖ ಹಾಗೂ ಹದಿಹರೆಯದ ಯುವಕ ಯುವತಿಯರ ರೋಮ್ಯಾಂಟಿಕ್ ಈ ವೆಬ್ ಸರಣಿಯಲ್ಲಿದೆ. ಆಗಸ್ಟ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಇದು ಬಿಡುಗಡೆಯಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್