ವೀಕೆಂಡ್ ಟೆಂಟ್ | ಈ ವಾರ ನೋಡಬಹುದಾದ ಸಿನಿಮಾ ಮತ್ತು ವೆಬ್ ಸರಣಿಗಳು

ವಾರಾಂತ್ಯದಲ್ಲಿ ನೀವು ಬಿಡುವು ಮಾಡಿಕೊಂಡು ನೋಡಲೇಬೇಕಾದ ಹೊಸ ಸಿನಿಮಾ ಮತ್ತು ವೆಬ್ ಸರಣಿಗಳ ಪಟ್ಟಿಯನ್ನು ಇಲ್ಲಿದೆ

ಈ ವಾರ ನಾನಾ ಭಾಷೆಗಳ ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ. ಸಿನಿಮಾ ಪ್ರಿಯರಿಗೆ ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ನೀವು ನೋಡಬಹುದಾದ ಸಿನಿಮಾಗಳು ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

  • ‘ನೊಪ್'ನಲ್ಲಿರುವ ನಿಗೂಢತೆ ಏನು?

ಜೋರ್ಡಾನ್ ಪೀಲೆ ನಿರ್ದೇಶನದ ‘ನೊಪ್' ನಿಗೂಢತೆಯನ್ನು ಒಳಗೊಂಡಿರುವ ಚಿತ್ರವಾಗಿದ್ದು, ಆಗಸ್ಟ್ 19ರಂದು ಬಿಡುಗಡೆಯಾಗಿದೆ. ಆಕಾಶದಲ್ಲಿ ಕಾಣಿಸಿಕೊಳ್ಳುವ ಅಗೋಚರ ಶಕ್ತಿ ಹಿಂದೆ ಬೀಳುವ ಕ್ಯಾಲಿಫೋರ್ನಿಯಾದ ಸಹೋದರ-ಸಹೋದರಿಯ ಕಥೆಯಾಗಿದ್ದು, ಕುತೂಹಲಕಾರಿಯಾಗಿದೆ. ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಬಹುದಾಗಿದೆ.

  • ‘ದುರಂಗ’ ಸೈಕೋ ಕೊಲೆಗಾರನ ಸುತ್ತಾ ಸುತ್ತುವ ವೆಬ್ ಸರಣಿ

ಪ್ರದೀಪ್ ಸರ್ಕಾರ್, ಐಜಾಜ್ ಖಾನ್ ನಿರ್ದೇಶನದ ಕ್ರೈಂ ಥ್ರಿಲ್ಲಿಂಗ್ ಕಥೆ ಹೊಂದಿರುವ ‘ದುರಂಗ’ ವೆಬ್ ಸರಣಿಯು ಆಗಸ್ಟ್ 19ರಂದು ಜೀ ಫೈವ್‌ನಲ್ಲಿ ಬಿಡುಗಡೆಯಾಗಿದೆ. ತನುಕಾ ಲಘಟೆ, ಗುರು ಹರ್ಯಾಣಿ ಹಾಗೂ ಗುಲ್ಶನ್ ದೇವಯ್ಯ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸರಣಿಯೂ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಕೊರಿಯನ್ ರೂಪಾಂತರ ಸರಣಿಯಾಗಿದ್ದು, ಸೈಕೋ ಕೊಲೆಗಾರನ ಸುತ್ತಾ ಸರಣಿಯಲ್ಲಿ ತನಿಖೆ ನಡೆಯುತ್ತದೆ. ಕಣ್ಣಿಗೆ ಕಂಡದ್ದು ಕೆಲವೊಮ್ಮೆ ಸತ್ಯಕ್ಕೆ ದೂರವಾಗಿರುತ್ತದೆ ಎಂಬುದು ಇಲ್ಲಿ ಸತ್ಯವಾಗಿದೆ. ಸರಣಿಯನ್ನು ತಪ್ಪದೇ ನೋಡಿ ವೀಕೆಂಡ್ ಕಳೆಯಿರಿ.

  • ‘ಲವ್ 360’ ಸಿನಿಮಾ ಹಾಡುಗಳಿಂದಲೇ ಮನಸ್ಸುಗೆದ್ದ ಚಿತ್ರ

ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಮೊಗ್ಗಿನ ಮನಸ್ಸು ಚಿತ್ರದ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದ ಮೆಲೋಡಿ ಹಾಡುಗಳಿಂದಲೇ ಸದ್ದು ಮಾಡಿದ್ದ ʼಲವ್ 360ʼ ಆಗಸ್ಟ್ 19ರಂದು ಬಿಡುಗಡೆಯಾಗಿದೆ. ಈ ಚಿತ್ರ ʼರೊಮ್ಯಾಂಟಿಕ್ ಲವ್ ಸ್ಟೋರಿʼಯ ಸುತ್ತ ಮೂಡಿ ಬಂದಿದ್ದು, ʼಸಸ್ಪೆನ್ಸ್ʼ ಅಂಶವನ್ನು ಹೊಂದಿದೆ. ಯುವಪ್ರತಿಭೆ ಪ್ರವೀಣ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಹಾಗೇ ʼಲವ್ ಮಾಕ್ಟೈಲ್ʼ ಖ್ಯಾತಿಯ ನಟಿ ರಚನಾ ಇಂದರ್ ಚಿತ್ರದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳನ್ನ ಪ್ರೋತ್ಸಾಹಿಸುವವರು ತಪ್ಪದೇ ಚಿತ್ರವನ್ನು ಚಿತ್ರಮಂದಿರದಲ್ಲಿ ಹೋಗಿ ನೋಡಿ ಬನ್ನಿ.

  • ‘ತಮಿಳ್ ರಾಕರ್ಸ್’ ಸಿನಿಮಾದೊಳಗಿನ ಸಿನಿಮಾದ ಕಥೆ

ಅರಿವಳಗನ್ ನಿರ್ದೇಶನದ ‘ತಮಿಳ್ ರಾಕರ್ಸ್’ ಚಿತ್ರ ಆಗಸ್ಟ್ 19ರಂದು ಬಿಡುಗಡೆಯಾಗಿದೆ. ಅರುಣ್ ವಿಜಯ್, ವಾಣಿ ಭೋಜನ್, ಐಶ್ವರ್ಯ ಮೆನನ್, ಅಳಗಂ ಪೆರುಮಾಳ್ ಹಾಗೂ ವಿನೋದಿನಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳ್ ರಾಕರ್ಸ್’ ಸಿನಿಮಾದೊಳಗಿನ ಸಿನಿಮಾ ಕಥೆ ಎನ್ನಬಹುದು. ಆದರೆ, ಸಿನಿಮಾದೊಳಗೆ ಚರ್ಚೆಯಾಗಿರುವುದು ಪೈರಸಿ ಬಗ್ಗೆ. ಸಿನಿಮಾ ಪೈರಸಿ ಸುತ್ತಾ ಕಥೆ ನಡೆಯುತ್ತದೆ. ಪೈರಸಿ ದಂದೆಯ ಬಗ್ಗೆ ಎಳೆಎಳೆಯಾಗಿ ತೋರಿಸಲಾಗಿದೆ. ಚಿತ್ರವು 'ಸೋನಿಲಿವ್‌'ನಲ್ಲಿ ಬಿಡುಗಡೆಯಾಗಿದ್ದು, ತಪ್ಪದೇ ಒಮ್ಮೆ ನೋಡಿ.

  • ‘ತಿರುಚಿತ್ರಂಬಲಂ’ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕಾಣಿಸಿಕೊಂಡ ಧನುಷ್

ನಟ ಧನುಷ್ ಅಭಿನಯದ ‘ತಿರುಚಿತ್ರಂಬಲಂ’ ಚಿತ್ರದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾತ್ರದಲ್ಲಿ ನಟಿಸಿರುವ ಚಿತ್ರ. ತಿರುಚಿತ್ರಂಬಲಂ ಚಿತ್ರವು ಆಗಸ್ಟ್ 18ರಂದು ಬಿಡುಗಡೆಯಾಗಿದೆ. ಮಿತ್ರನ್ ಆರ್ ಜವಾಹರ್ ನಿರ್ದೇಶನದ ಈ ಚಿತ್ರದಲ್ಲಿ ಧನುಷ್‌ಗೆ ನಿತ್ಯಾ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಮಾನ್ಯ ಜನರ ಬದುಕಿನ ಕಥೆಯಾಗಿದ್ದು, ಸಿನಿಮಾ ನೋಡಿದವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 

ನಿಮಗೆ ಏನು ಅನ್ನಿಸ್ತು?
2 ವೋಟ್