ವೀಕೆಂಡ್ ಟೆಂಟ್ | ಈ ವಾರ ನೋಡಬಹುದಾದ ಸಿನಿಮಾಗಳು ಮತ್ತು ವೆಬ್ ಸರಣಿಗಳು

ವಾರಾಂತ್ಯದಲ್ಲಿ ನೀವು ಬಿಡುವು ಮಾಡಿಕೊಂಡು ನೋಡಲೇಬೇಕಾದ ಹೊಸ ಸಿನಿಮಾ ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

ಈ ವಾರ ಹಲವು ಭಾಷೆಗಳ ಹಲವು ಸಿನಿಮಾಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ. ಸಿನಿಮಾ ಪ್ರಿಯರಿಗೆ ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ನೀವು ನೋಡಬಹುದಾದ ಸಿನಿಮಾಗಳು ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ. 

  • ‘ದಿ ಬುಲೆಟ್ ಟ್ರೈನ್’ನಲ್ಲಿ ಪ್ರಯಾಣ ಮಾಡೋಕೆ ಭಯ ಯಾಕೆ?

ಡೇವಿಡ್ ಲೀಚ್ ನಿರ್ದೇಶನದ ‘ದಿ ಬುಲೆಟ್ ಟ್ರೈನ್’ ಎಂಬ ಹಾಲಿವುಡ್ ಚಿತ್ರ ಆಗಸ್ಟ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ಕೂಡ ನೋಡಬಹುದಾಗಿದೆ. ಈ ಚಿತ್ರದಲ್ಲಿ ಜೋಯ್ ಕಿಂಗ್, ಬ್ಯಾಡ್ ಬನ್ನಿ, ಸಾಂಡ್ರಾ ಬುಲಕ್‌ನಂತಹ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರವು ಬಿಡುಗಡೆಯಾದ ಒಂದೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ 4.6 ಮಿಲಿಯನ್ ಹಣ ಬಾಚಿಕೊಂಡಿದೆ. ಜಪಾನೀಸ್ ಬುಲೆಟ್ ಟ್ರೈನ್‌ನಲ್ಲಿ ಸುತ್ತಾಡುವ ಹಂತಕನ ಸಾಹಸ ಕಥೆ ಇದಾಗಿದ್ದು, ಆತ ರೈಲಿನಲ್ಲಿ ಎಲ್ಲರ ಕಣ್ಣು ತಪ್ಪಿಸಿ ಹೇಗೆ ಕೊಲೆ ಮಾಡುತ್ತಾನೆ ಎಂಬುದು ರೋಚಕವಾಗಿದೆ. ಒಮ್ಮೆ ನೋಡಿ, ನಿಮಗೂ ಇಷ್ಟ ವಾಗಬಹುದು. 

  • ಆಲಿಯಾ ಭಟ್‌ ನಿರ್ಮಾಣದ ಮೊದಲ ಚಿತ್ರ: 'ಡಾರ್ಲಿಂಗ್ಸ್'

ಆಲಿಯಾ ಭಟ್ ಅವರ ಮೊದಲ ಬಾರಿಗೆ ನಿರ್ಮಾಣ ಮಾಡಿ ಅಭಿನಯಿಸಿರುವ 'ಡಾರ್ಲಿಂಗ್ಸ್' ಎಂಬ ಚಿತ್ರ ಆಗಸ್ಟ್ 5ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ವಿಜಯ್ ವರ್ಮ ಮತ್ತು ಶೆಫಾಲಿ ಶಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇದು ಹಾಸ್ಯ ಮತ್ತ ಸಾಹಸ ಪ್ರಧಾನ ಕಥೆಯಾಗಿದೆ. 'ಡಾರ್ಲಿಂಗ್ಸ್' ಚಿತ್ರವನ್ನು ಜಸ್ಮೀತ್ ಕೆ. ರೀನ್ ಅವರು ನಿರ್ದೇಶನ ಮಾಡಿದ್ದಾರೆ. ಬದ್ರು ಎಂಬ ವ್ಯಕ್ತಿ ಪ್ರತಿನಿತ್ಯ ಕುಡಿದು ಬರುತ್ತಿರುತ್ತಾನೆ. ಗಂಡನ ಕೋಪದಿಂದ ಬೇಸತ್ತು ಹೋಗಿದ್ದ ಆತನ ಪತ್ನಿ ಮತ್ತು ಆತನ ತಾಯಿ ಅವನಿಗೆ ಬುದ್ಧಿ ಕಲಿಸುವ ರೀತಿ ಹಾಸ್ಯಮಯವಾಗಿ ಮೂಡಿಬಂದಿದೆ. 

  • ಕಾಶ್ಮೀರಿ ಕಣಿವೆಯಲ್ಲಿನ ಪ್ರೀತಿ: ‘ಸೀತಾ ರಾಮಂ’ 

ದುಲ್ಕರ್ ಸಲ್ಮಾನ್ ಅಭಿನಯದ ಚಿತ್ರವಿದು. ಸದ್ಯ ಎಲ್ಲರ ಚರ್ಚೆಗೆ ಕಾರಣವಾಗಿರುವ ‘ಸೀತಾ ರಾಮಂ’ ಎಂಬ ಮಲೆಯಾಳಂ ಮತ್ತು ತೆಲುಗು ಚಿತ್ರವನ್ನು ಹನು ರಾಘವಪುಡಿ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಹಾಗೂ ಸುಮಂತ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕಾಶ್ಮೀರದ ಕಣಿವೆಯಲ್ಲಿ ಗಡಿ ಕಾಯುವ ರಾಮ ಮತ್ತು ದೂರದ ಹೈದರಾಬಾದ್‌ನಲ್ಲಿ ನೆಲೆಸಿರುವ ಸೀತಾಮಹಾಲಕ್ಷ್ಮೀ ನಡುವಿನ ಪ್ರೀತಿಯೇ ಚಿತ್ರದ ವಸ್ತು. ಪತ್ರದ ಮೂಲಕ ಶುರುವಾಗುವ ಇವರಿಬ್ಬರ ಪ್ರೀತಿ ಹೇಗೆ ಅಂತ್ಯವಾಗುತ್ತದೆ ಎಂಬ ಕಥೆಯನ್ನು ಈ ಚಿತ್ರ ಒಳಗೊಂಡಿದೆ. 

  • 'ಕಡುವ': ಒಟಿಟಿಗೆ ಬಂತು ನೋಡಿ

ಮಲಯಾಳಂನ 'ಕಡುವ' ಎಂಬ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದು ಆಕ್ಷನ್ ಚಿತ್ರವಾಗಿದ್ದು, ಪೃಥ್ವಿರಾಜ್ ಸುಕುಮಾರನ್, ಸಂಯುಕ್ತಾ ಮೆನನ್ ಹಾಗೂ ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕಡುವ' ಚಿತ್ರ ಜುಲೈ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಆಗಸ್ಟ್ 4ರಂದು 'ಅಮೆಜಾನ್ ಪ್ರೈಮ್ ವೀಡಿಯೊ'ದಲ್ಲಿ ಪ್ರದರ್ಶನ ನೀಡುತ್ತಿದೆ. ಶಾಜಿ ಕೈಲಾಸ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದು, ಸಾಕಷ್ಟು ಸಿನಿಮಾ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ನೋಡದೇ ಇರುವವರು ಈಗ ನೋಡಬಹುದು. 

  • ಭಯಾನಕವಾಗಿರುವ ‘ದಿ ಸ್ಯಾಂಡ್‌ಮ್ಯಾನ್’ ವೆಬ್‌ ಸರಣಿ

'ನೆಟ್‌ಫ್ಲಿಕ್ಸ್‌'ನ ಇತ್ತೀಚಿನ ವೆಬ್ ಸರಣಿ ‘ದಿ ಸ್ಯಾಂಡ್‌ಮ್ಯಾನ್’ ಆಗಸ್ಟ್ 5ರಂದು ಬಿಡುಗಡೆಯಾಗಿದೆ. ಈ ಸರಣಿಯು ನೀಲ್ ಗೈಮನ್ ಅವರ ಅದೇ ಹೆಸರಿನ ಭಯಾನಕ ಕಾದಂಬರಿ ಆಧಾರಿತ ಸರಣಿಯಾಗಿದೆ. ನಿಯಮ್ಹ್ ವಾಲ್ಸ್ಟೋಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ, ರೋಮಾಂಚನಕಾರಿಯಾಗಿರುವ ವೆಬ್ ಸರಣಿಯನ್ನು ಆಸಕ್ತರು ನೋಡಬಹುದು. 

ನಿಮಗೆ ಏನು ಅನ್ನಿಸ್ತು?
1 ವೋಟ್