ವೀಕೆಂಡ್ ಟೆಂಟ್ | ಈ ವಾರ ನೋಡಲೇಬೇಕಾದ ಸಿನಿಮಾಗಳು ಮತ್ತು ವೆಬ್ ಸರಣಿಗಳು

ಈ ವಾರ ಅನೇಕ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಸಿನಿಮಾ ಪ್ರಿಯರಿಗೆ ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಆದರೆ, ನಾವಿಲ್ಲಿ ನಿಮಗಾಗಿ ಆಯ್ಕೆ ಮಾಡಿ ನೋಡಬಹುದಾದ ಮತ್ತು ನೋಡಲೇಬೇಕಾದ ಸಿನಿಮಾಗಳು ಮತ್ತು ಸರಣಿಗಳ ಬಗ್ಗೆ ತಿಳಿಸುತ್ತಿದ್ದೀವಿ.

 • ನಟ 'ನಿನಾಸಂ' ಸತೀಶ್‌ ಮತ್ತು 'ಯು ಟರ್ನ್‌' ಚಿತ್ರದ ನಾಯಕಿ ಶ್ರದ್ಧಾ ಶ್ರೀನಾಥ್ ಅವರು ಅಭಿನಯಿಸಿರುವ ‘ಡಿಯರ್‌ ವಿಕ್ರಮ್’ ಎಂಬ ಕನ್ನಡ ಚಲನಚಿತ್ರ ಜೂನ್‌ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.  'ಡಿಯರ್‌ ವಿಕ್ರಮ್’ ಚಿತ್ರವು ಕುತೂಹಲಕಾರಿಯಾಗಿದ್ದು, ಸಾಮಾಜಿಕ ಕಾಳಜಿ ಇರುವಂತಹ ಚಿತ್ರವಾಗಿದೆ. ಕೆಎಸ್ ನಂದೀಶ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಕುಟುಂಬ ಸಮೇತ ಚಿತ್ರಮಂದಿರಗಳಲ್ಲಿ ಮತ್ತು 'ವೂಟ್‌ ಸೆಲೆಕ್ಟ್‌'ನಲ್ಲಿ ನೋಡಬಹುದಾಗಿದೆ.

 • ಸಾಯಿ ಪಲ್ಲವಿ ಅಭಿನಯದ 'ವಿರಾಟ ಪರ್ವಂ' ಚಿತ್ರವು ಒಂದು ಆಕ್ಷನ್ ಚಿತ್ರವಾಗಿದ್ದು, ರಾಣಾ ಮತ್ತು ಸಾಯಿ ಪಲ್ಲವಿ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ವೇಣು ಉಡುಗಲ ಅವರು ಚಿತ್ರ ನಿರ್ದೇಶಿಸಿದ್ದಾರೆ. 1990ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ಕಥೆ ಇದಾಗಿದೆ. ಜೂನ್ 17ರಂದು ಸಿನಿಮಾ ಬಿಡುಗಡೆಯಾಗಿತ್ತು. ಇದೀಗಾ ಒಟಿಟಿ ವೇದಿಕೆಯಲ್ಲಿ ಚಿತ್ರ ಲಭ್ಯವಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರವನ್ನು ವೀಕ್ಷಣೆ ಮಾಡಬಹುದಾಗಿದೆ.

 • ರಾಹುಲ್ ರಿಜಿ ನಾಯರ್ ನಿರ್ದೇಶನದ ಮಲಯಾಳಂ ಚಿತ್ರವಾದ ‘ಕೀದಮ್’ ಚಿತ್ರವು ಬಾರಿ ಮೆಚ್ಚುಗೆ ಪಡೆದುಕೊಂಡಿದೆ. ರಜಿಶಾ ವಿಜಯನ್, ಶ್ರೀನಿವಾಸನ್ ಹಾಗೂ ವಿಜಯ್ ಬಾಬು ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ತೆದಾರಿ ಸಿನಿಮಾವಾಗಿದ್ದು, ಸೈಬರ್‌ ಅಪರಾದದ ಬಗ್ಗೆ ಪೊಲೀಸರ ತನಿಖೆ ಜೊತೆಗೆ ಕುತೂಹಲಕಾರಿಯಾಗಿದೆ. 'ಕೀದಮ್' ಮೇ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಜುಲೈ ಒಂದರಂದು ಒಟಿಟಿ ಅಂಗಳಕ್ಕೆ ಬಂದಿದೆ. ಚಿತ್ರವನ್ನು ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಮತ್ತು ಜೀ5ನಲ್ಲಿ ನೋಡಬಹುದು.

 • 'ಅನೆಕ್' ಹಿಂದಿ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಅನುಭವ್ ಸಿನ್ಹಾ ಅವರು ನಿರ್ದೇಶಿಸಿದ್ದಾರೆ. ಮೇ 27ರಂದು ಚಲನಚಿತ್ರ ಬಿಡುಗಡೆಯಾಗಿದ್ದು, ಆಯುಷ್ಮಾನ್ ಖುರಾನಾ, ಜೆ ಡಿ ಚಕ್ರವರ್ತಿ ಹಾಗೂ ಆಂಡ್ರಿಯಾ ಕೆವಿಚುಸಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಶಾನ್ಯ ರಾಜ್ಯಗಳ ಬಂಡುಕೋರರು ಮತ್ತು ಕೇಂದ್ರ ಸರ್ಕಾರದ ನಡುವಿನ ಒಪ್ಪಂದ- ಕಾರ್ಯಾಚರಣೆ ಸುತ್ತ ಅರಳುವ ಯುವತಿಯ ಕನಸು ಮತ್ತು ಸವಾಲುಗಳು ಸಿನಿಮಾದಲ್ಲಿ ಅನಾವರಣಗೊಂಡಿದೆ. ಸದ್ಯ ಚಿತ್ರ ಒಟಿಟಿ ವೇದಿಕೆಯಲ್ಲಿ ಲಭ್ಯವಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

 • ಮಾರ್ವೆಲ್ ಕಾಮಿಕ್ಸ್ ಆಧಾರದ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮುಲ್ಟಿವೆರ್ಸೆ ಆ ಮಾಡ್ನ್ಸ್’ ಎಂಬ ಹಾಲಿವುಡ್ ಚಿತ್ರ ಬಿಡುಗಡೆಯಾಗಿ ಹಲವು ದಿನಗಳೇ ಕಳೆದಿದ್ದರೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಳ್ಳುತ್ತಲೇ ಇದೆ. ಇಂಗ್ಲಿಷ್‌, ಕನ್ನಡ, ಹಿಂದಿ ಸೇರಿದಂತೆ ಆರು ಭಾಷೆಗಳಲ್ಲಿ ಚಿತ್ರವನ್ನು ನೋಡಬಹುದಾಗಿದೆ. 'ಡಿಸ್ನಿ ಹಾಟ್‌ಸ್ಟಾರ್‌'ನಲ್ಲಿ ಚಿತ್ರವನ್ನು ವೀಕ್ಷಿಸಬಹುದು.

 • 'ಆಶ್ರಮ್‌ ಸೀಸನ್ 3' ಹಿಂದಿ ಸೀರಿಸ್‌ ಆಗಿದ್ದು, ಪ್ರಕಾಶ್ ಝಾ ಅವರು ನಿರ್ದೇಶನ ಮಾಡಿದ್ದಾರೆ. ಜೂನ್‌ 3ರಂದು ಬಿಡುಗಡೆಯಾಗಿದೆ. ಸದ್ಯ ಸೀಸನ್‌ ಒಂದು ಮತ್ತು ಸೀಸನ್ ಎರಡನ್ನು ವೀಕ್ಷಣೆ ಮಾಡಿದವರು ಸೀಸನ್‌ ಮೂರನ್ನು ಸಹ ಒಟಿಟಿಯಲ್ಲಿ ನೋಡಬಹುದಾಗಿದೆ. ಬಾಬಿ ಡಿಯೋಲ್, ಚಂದನ್ ರಾಯ್ ಸನ್ಯಾಲ್ ಹಾಗೂ ಆದಿತಿ ಪೋಹಂಕಾರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ 'ಆಶ್ರಮ್‌ ಸೀಸನ್ 3' ‘ಎಂಎಕ್ಸ್‌ ಪ್ಲೇಯರ್’ನಲ್ಲಿ ಉಚಿತವಾಗಿ ನೋಡಬಹುದಾಗಿದೆ.

 • ಮಾರ್ವೆಲ್ ಸ್ಟುಡಿಯೊಸ್ ಅವರ ‘ಮಿಸ್ ಮಾರ್ವೆಲ್’ ಎಂಬ ಹಾಲಿವುಡ್ ವೆಬ್‌ ಸರಣಿಯನ್ನು ಬಿಷ ಕೆ ಅಲಿ ಅವರು ನಿರ್ದೇಶನ ಮಾಡಿದ್ದಾರೆ. ಇಮಂ ವೆಲ್ಲನೀ, ಮಟ್ಟ್ ಲಿಂಟ್ಝ್ ಹಾಗೂ ಏನೋಬಿಯ ಶ್ರೋಫ್ ಅವರನ್ನು ಸರಣಿಯಲ್ಲಿ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.

 • ಅಕ್ಷಯ್ ಚೌಬೆಯ್ ನಿರ್ದೇಶನದ ‘ಕೋಡ್‌ ಎಂ’ ಎಂಬ ವೆಬ್‌ಸರಣಿಯು ಜೂನ್‌ ಒಂಭತ್ತರಂದು ಬಿಡುಗಡೆಯಾಗಿದ್ದು, ಸದ್ಯ 'ವೂಟ್‌ ಸೆಲೆಕ್ಟ್‌'ನಲ್ಲಿ ನೋಡಬಹುದಾಗಿದೆ. ಜೆನ್ನಿಫರ್ ವಿಂಗೆಟ್, ತನುಜ್ ವಿರ್ವಾನಿ, ರಜತ್ ಕಪೂರ್ ಹಾಗೂ ಆಲೇಖಾ ಕಪೂರ್ ಅವರನ್ನು ವೆಬ್‌ ಸರಣಿಯಲ್ಲಿ ಪ್ರಮುಖವಾಗಿ ಕಾಣಬಹುದು. ಈ ವೆಬ್‌ಸರಣಿ ರೋಮಂಚಾನಕಾರಿಯಾಗಿದೆ.

 • ಪಲ್ಲವಿ ಗಂಗಿರೆಡ್ಡಿ ನಿರ್ದೇಶನದ ‘ಅನ್ಯ’ಸ್ ಟುಟೋರಿಯಲ್’ ಎಂಬ ತೆಲುಗು ವೆಬ್‌ ಸರಣಿಯು ಜುಲೈ ಒಂದರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ರೆಜಿನಾ ಚಸ್ಸಂದ್ರ ಮತ್ತು ನಿವೇಧಿತಾ ಸತೀಶ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಅಹ' ಎಂಬ ತೆಲುಗು ಒಟಿಟಿ ವೇದಿಕೆಯಲ್ಲಿ ನೋಡಬಹುದಾಗಿದೆ.

 • ‘ಎಕ್‌ಸ್ಟ್ರಾಆರ್ಡಿನರಿ ಅಟಾರ್ನಿ ವೂ’ ಎಂಬ ಕೋರಿಯಾ ವೆಬ್‌ ಸರಣಿಯು ಜೂನ್‌ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಯೂ ಇನ್-ಸಿಕ್ ಮತ್ತು ಮೂನ್ ಜಿ-ವನ್ ಅವರು ಸರಣಿಯನ್ನು ರಚಿಸಿದ್ದಾರೆ. ಪಾರ್ಕ್ ಯೂನ್-ಬಿನ್, ಕಾಂಗ್ ಟ್ಯಾಗ್-ಒಹ್ ಹಾಗೂ ಕಾಂಗ್ ಕಿ-ಯಂಗ್ ಅವರನ್ನು ಸರಣಿಯಲ್ಲಿ ನೋಡಬಹುದಾಗಿದೆ. ಆಟಿಸಂ ಸಮಸ್ಯೆಯಿರುವ ಬುದ್ಧಿವಂತ ವಕೀಲೆಯೊಬ್ಬಳಿಗೆ ಸಂಬಂಧಿಸಿದ ಸರಣಿಯು ಕಲಾತ್ಮಕವಾಗಿದ್ದು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
   

ನಿಮಗೆ ಏನು ಅನ್ನಿಸ್ತು?
0 ವೋಟ್
eedina app