ವೀಕೆಂಡ್ ಟೆಂಟ್ | ಈ ವಾರ ನೋಡಲೇಬೇಕಾದ ಸಿನಿಮಾಗಳು ಮತ್ತು ವೆಬ್ ಸರಣಿಗಳು

ವಾರಾಂತ್ಯದಲ್ಲಿ ನೀವು ಬಿಡುವು ಮಾಡಿಕೊಂಡು ನೋಡಲೇಬೇಕಾದ ಹೊಸ ಸಿನಿಮಾ ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

ಜುಲೈನ ಕೊನೆವಾರದಲ್ಲಿ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ. ಸಿನಿಮಾ ಪ್ರಿಯರಿಗೆ ಯಾವ ಚಿತ್ರ ನೋಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಆದರೆ, ನಾವಿಲ್ಲಿ ನೀವು ನೋಡಬಹುದಾದ ಮತ್ತು ನೋಡಲೇಬೇಕಾದ ಸಿನಿಮಾಗಳು ಮತ್ತು ಸರಣಿಗಳ ಬಗ್ಗೆ ತಿಳಿಸುತ್ತಿದ್ದೇವೆ.

  • ‘ಪರ್ಪಲ್ ಹಾರ್ಟ್ಸ್’ನ ಪ್ರೀತಿಯ ಕಥೆಯಲ್ಲಿ ಏನಿದೆ?

ಬಹು ನಿರೀಕ್ಷಿತ ನೆಟ್‌ಫ್ಲಿಕ್ಸ್‌ನ ಚಿತ್ರ, ‘ಪರ್ಪಲ್ ಹಾರ್ಟ್ಸ್’ ಎಂಬ ಹಾಲಿವುಡ್ ಚಿತ್ರವು ಶುಕ್ರವಾರ ಜುಲೈ 29ರಂದು ಬಿಡುಗಡೆಯಾಗಿದೆ. ಸಿನಿಮಾವನ್ನು ಎಲಿಜಬೆತ್ ಅಲೆನ್ ರೋಸೆನ್ಬಾಮ್ ನಿರ್ದೇಶಿಸಿದ್ದಾರೆ. ಚಿತ್ರಕಥೆಯನ್ನು ಲಿಜ್ ಡಬ್ಲ್ಯೂ ಗಾರ್ಸಿಯಾ ಮತ್ತು ಕೈಲ್ ಜಾರೋ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಿಕೋಲಸ್ ಗ್ಯಾಲಿಟ್ಜಿನ್ ಮತ್ತು ಸೋಫಿಯಾ ಕಾರ್ಸನ್ ಮುಖ್ಯ ಪಾತ್ರಧಾರಿಗಳಾಗಿದ್ದು, ಸೇನೆಯಲ್ಲಿರುವ ಗಂಡ ದೂರದಲ್ಲಿರುವ ಹೆಂಡತಿಯ ನಡುವಿನ ವಿಭಿನ್ನ ತಿರುವು ಪಡೆಯುವ ಕಥೆಯಾಗಿದ್ದು, ಸಂಗೀತಮಯವಾಗಿದೆ. ನಿಮಗೆ ಇಷ್ಟ ಆಗುವಂತಹ ಸಿನಿಮಾ.

  • ‘ಗುಡ್ಲಕ್ ಜೆರ್ರಿ’ ಎಂದ ಜಾನ್ವಿ ಕಪೂರ್ ಅಭಿಮಾನಿಗಳು

ಜಾನ್ವಿ ಕಪೂರ್ ಅವರ ಅಭಿಮಾನಿಗಳು ಭಾರಿ ನಿರೀಕ್ಷೆಯಲ್ಲಿದ್ದ, ಹೆಚ್ಚು ಪ್ರಚಾರ ಪಡೆದುಕೊಂಡಿದ್ದ, ‘ಗುಡ್ಲಕ್ ಜೆರ್ರಿ’ ಎಂಬ ಹಿಂದಿ ಸಿನಿಮಾ ಅಂತಿಮವಾಗಿ ಇಂದು (ಜುಲೈ 30) 'ಡಿಸ್ನಿ ಫ್ಲಸ್‌ ಹಾಟ್‌ಸ್ಟಾರ್‍‌'ನಲ್ಲಿ ಬಿಡುಗಡೆಯಾಗಿದೆ. ಸಿದ್ಧಾರ್ಥ್ ಸೇನ್‌ಗುಪ್ತಾ ಅವರ ನಿರ್ದೇಶನದ ಬ್ಲ್ಯಾಕ್ ಕಾಮಿಡಿ ಚಿತ್ರ ಇದಾಗಿದೆ. ಡ್ರಗ್ಸ್ ಮಾಫಿಯಾದ ಜಾಲದಲ್ಲಿ ಜಾನ್ವಿ ಸಿಕ್ಕಿ ಕೊಳ್ಳುವ ಕಥೆ ಇದಾಗಿದ್ದು, ಆಕೆಯ ಜಾಣತನ ಇಲ್ಲಿ ಪ್ರದರ್ಶನಗೊಳ್ಳುತ್ತದೆ. 

  • '777 ಚಾರ್ಲಿ'ಯ ಚಿತ್ರಮಂದಿರದಲ್ಲಿ ನೋಡಲಾಗದ ದೃಶ್ಯ ಒಟಿಟಿಯಲ್ಲಿ ಸಿಗಲಿದೆ

ಇನ್ನೂ ಕನ್ನಡದಲ್ಲಿ ಇತ್ತೀಚಿಗೆ ಕೇಳಿ ಬರುತ್ತಿರುವ ಹೆಸರು ಚಾರ್ಲಿ. ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಎಂಬ ನಾಯಿ ಜೊತೆಗಿನ ಭಾವನಾತ್ಮಕ ಸಂಬಂಧವೇ '777 ಚಾರ್ಲಿ'. ಈ ಚಿತ್ರ 50ನೇ ದಿನವನ್ನು ಪೂರೈಸಿದ್ದು, ಜುಲೈ 28ರಂದು 'ವೂಟ್ ಸೆಲೆಕ್ಟ್‌'ನಲ್ಲಿ ಬಿಡುಗಡೆಯಾಗಿದೆ. ಆದರೆ, ಒಟಿಟಿಯಲ್ಲಿನ ವಿಶೇಷವೆಂದರೆ ನೀವು ಚಿತ್ರಮಂದಿರಲ್ಲಿ ನೋಡಲಾಗದ ಕೆಲವು ವಿಭಿನ್ನ ದೃಶ್ಯಗಳನ್ನು ಇಲ್ಲಿ ನೋಡಬಹುದಾಗಿದೆ. 

  • '19 (1) (ಎ)' ಯಲ್ಲಿ ನಿತ್ಯಾ ಮೆನನ್‌ ಏನೂ ಹೇಳಲು ಹೊರಟಿದ್ದಾರೆ?

'19 (1) (ಎ)' ಎಂಬ ಮಲಯಾಳಂ ಚಲನಚಿತ್ರವನ್ನು, ಇಂಧು ವಿ ಎಸ್ ಬರೆದು ನಿರ್ದೇಶಿಸಿರುವ ಚೊಚ್ಚಲ ಚಿತ್ರವಾಗಿದೆ. 19(1)(ಎ) ಚಿತ್ರದಲ್ಲಿ ವಿಜಯ್ ಸೇತುಪತಿ, ನಿತ್ಯಾ ಮೆನನ್ ಹಾಗೂ ಇಂದ್ರಜಿತ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಡಿಸ್ನಿ ಫ್ಲಸ್‌ ಹಾಟ್‌ಸ್ಟಾರ್‍‌'ನಲ್ಲಿ ಜುಲೈ 29ರಂದು ಚಿತ್ರ ಬಿಡುಗಡೆಯಾಗಿದೆ. ತನ್ನ ತಂದೆಯ ಪೋಟೊಶಾಪ್ ಅಂಗಡಿಯನ್ನು ನಿಭಾಯಿಸುತ್ತಿರುವ ನಾಯಕಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಲೇಖಕ ಗೌರಿ ಶಂಕರ್ ಅವರ ಸುತ್ತ ಕಥೆ ಸಾಗುತ್ತದೆ. ಕಥೆ ಅರ್ಥಪೂರ್ಣವಾಗಿದ್ದು, ವಿಶೇಷ ಕಥಾಹಂದರವನ್ನು ಹೊಂದಿದೆ. 

  • ‘ಪೇಪರ್ ರಾಕೆಟ್’ ಎಲ್ಲಿಗೆ ಹಾರಲಿದೆ?

‘ಪೇಪರ್ ರಾಕೆಟ್’ ಎಂಬ ವೆಬ್ ಸರಣಿಯನ್ನು ಕಿರುತಿಗ ಉದಯನಿಧಿ ನಿರ್ದೇಶಿಸಿದ್ದಾರೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ “ವನಕ್ಕಂ ಚೆನ್ನೈ” ಮತ್ತು “ಕಲಿ” ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಇವರು ವೆಬ್ ಸರಣಿಯಲ್ಲಿ ಮೋಡಿ ಮಾಡಿದ್ದಾರೆ. ಸದ್ಯ ಈ ಸರಣಿಯು ಜುಲೈ 29ರಂದು 'ಜೀ ಫೈವ್‌'ನಲ್ಲಿ ಬಿಡುಗಡೆಯಾಗಿದೆ. ಸ್ನೇಹಿತರ ಜೊತೆ ನಡೆಯುವ ಪ್ರೀತಿ, ಸಾಹಸ, ಹಾಸ್ಯವನ್ನು ಒಳಗೊಂಡ ಈ ಕಥೆಯಲ್ಲಿ  ಬರುವ ತಿರುವುಗಳು ರೋಮಾಂಚನಕಾರಿಯಾಗಿದೆ. ಎಲ್ಲ ಸ್ನೇಹಿತರು ಒಟ್ಟಿಗೆ ಕುಳಿತು ನೋಡಬಹುದು.

ನಿಮಗೆ ಏನು ಅನ್ನಿಸ್ತು?
1 ವೋಟ್