ಗದಗ | ಭಾವೈಕ್ಯತೆ ಸಾರಿದ ಮೊಹರಂ ಹಬ್ಬ

ಈ ಊರಿನಲ್ಲಿ ಮುಸ್ಲಿಂ ಸಮುದಾಯದ ಒಬ್ಬರೂ ಇಲ್ಲ. ಆದರೂ, ಶತಮಾನಗಳಿಂದಲೂ ಇಲ್ಲಿ ಹಿಂದುಗಳೇ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದುಗಳು ಮೊಹರಂ ಹಬ್ಬವನ್ನು ನಡೆಸಿದ್ದಾರೆ. ಆದರೆ, ಈ ಊರಿನಲ್ಲಿ ಮುಸ್ಲಿಂ ಮನೆಗಳಾಗಲಿ, ಮುಸ್ಲಿಂ ಸದಸ್ಯನಾಗಲಿ ಇಲ್ಲ ಎನ್ನುವುದು ಗಮನಾರ್ಹವಾದ ವಿಷಯವಾಗಿದೆ.

ಈ ಸಂಬಂಧ ದೊಡ್ಡೂರು ಗ್ರಾಮದ ದಲಿತ ಮುಖಂಡ ಹನಮಂತ ಮಕರಬ್ಬಿ ಈ ದಿನ.ಕಾಮ್ ಪ್ರತಿನಿಧಿಯೊಂದಿಗೆ ಮಾತನಾಡಿ, “ನೂರಾರು ವರ್ಷಗಳಿಂದಲೂ ನಮ್ಮ ಊರಿನ ಹಿರಿಯರು ಮುಸ್ಲಿಮರು ಇಲ್ಲದಿದ್ದರೂ, ಮೊಹರಂ ಹಬ್ಬವನ್ನು ಆಚರಿಸಿಕೊಂಡು ಭಾವೈಕ್ಯತೆಯನ್ನು ಸಾರುತ್ತಾ ಬಂದಿದ್ದೇವೆ.” ಎಂದು ತಮ್ಮ ಗ್ರಾಮದ ಹಳೆಯ ನೆನಪನ್ನು ನೆನಪಿಸಿಕೊಂಡರು. 

“ಈ ರೀತಿಯ ಆಚರಣೆಗಳು ಮುಂದಿನ ಪೀಳಿಗೆಯವರು ಮುಂದುವರೆಸಿಕೊಂಡು ಹೋಗಬೇಕು, ಜೊತೆಗೆ ಹಿಂದು ಮತ್ತು ಮುಸ್ಲಿಮರು ಈ ನಾಡಿನಲ್ಲಿ ಶಾಂತಿ ಮತ್ತು ಸೌಹರ್ದತೆಯಿಂದ ಬದುಕಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ದೊಡ್ಡೂರು ಗ್ರಾಮದ ಎಲ್ಲ ಸಮುದಾಯದ ನಾಗರೀಕರು ಮತ್ತು ಅಕ್ಕಪಕ್ಕದ ಊರಿನವರು ಮೊಹರಂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಮಲ್ಲೇಶ ಮಣ್ಣಮ್ಮನವರ
ನಿಮಗೆ ಏನು ಅನ್ನಿಸ್ತು?
1 ವೋಟ್