'ಬಾರೋ ಮಚಾ... ನಾನಿದೀನಿ' ಎಂದು ಹೇಳುವ ಜೀವದ ಗೆಳೆಯ ಸುದೀಶ್

shair

ನಾನೀಗ ಹೀಗಿರುವುದಕ್ಕೆ ನನ್ನ ಗೆಳೆಯಾ ಸುದೀಶ್ ಕಾರಣ. ಯಾವುದೋ ಕೆಲಸದ ಮೇಲೆ ಆಚೆ ಹೋದವವನು ಹಿಂತಿರುಗಿ ಮನೆಗೆ ಬರುವಾಗ ಬೈಕ್ ಅಪಘಾತವಾಗಿ ನನ್ನ ಸ್ಥಿತಿ ಗಂಭೀರವಾಗಿತ್ತು. ಆಗ ನನಗೆ ನೆರವಾದವನೇ ಗೆಳೆಯ ಸುದೀಶ್. ನನ್ನ ಅಸ್ಪತ್ರೆಯ ಖರ್ಚುವೆಚ್ಚ ಎಲ್ಲವನ್ನೂ ಅವನೇ ವಹಿಸಿಕೊಂಡು ನನ್ನನ್ನು ಅಣ್ಣನಂತೆ ಕಾಪಾಡಿದ್ದಾನೆ

ನಾನಿರುವುದು ಜಯಪುರ ಸಮೀಪದ ಶಾಂತಿಪುರದಲ್ಲಿ. ನಮ್ಮ ಊರಿನಲ್ಲಿ ಜನರು ಜಾತಿಧರ್ಮವನ್ನು ನೋಡುವುದಿಲ್ಲ ಬದಲಾಗಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಇದ್ದಾರೆ. ಬೇರೆ ಧರ್ಮದವರು ಎಂದು ನೋಡುವುದಿಲ್ಲ, ಬದಲಾಗಿ ನಮ್ಮವರು ನಮ್ಮ ಊರಿನವರು ಎಂದು ಬದುಕುತ್ತೇವೆ. ಈ ಕಾರಣದಿಂದಲೇ ನಮ್ಮ ಊರಿನಲ್ಲಿ ಎಂದಿಗೂ ಘರ್ಷಣೆ ಕಂಡುಬರುವುದಿಲ್ಲ. ಗಣೇಶ ಹಬ್ಬದಲ್ಲಿ ಅವ್ರು ನಮಗೆ ಸಿಹಿಹಂಚುತ್ತಾರೆ, ನಾವು ನಮ್ಮ ಹಬ್ಬದಲ್ಲಿ ಅವರಿಗೆ ಸಿಹಿ ಹಂಚುತ್ತೀವಿ. ಒಟ್ಟಿನಲ್ಲಿ ಎಲ್ಲದರಲ್ಲಿಯೂ ಎಲ್ಲರೂ ಭಾಗಿಯಾಗಿ ಸೌಹಾರ್ದತೆಯಿಂದ ಇದ್ದೇವೆ.

ಬಾಲ್ಯಸ್ನೇಹ ಎಂಬುವುದು ಸಮುದ್ರದ ರೀತಿಯಲ್ಲಿ, ಅದು ಎಂದಿಗೂ ವಿಶಾಲವಾಗಿರುತ್ತದೆ. ಯಾರಿಂದಲೂ ಅದನ್ನು ಕೆಡಿಸಲು ಸಾಧ್ಯವಾಗುವುದಿಲ್ಲ. ನನಗೆ ಒಬ್ಬ ಸುದೀಶ್ ಎಂಬ ಹಿಂದೂ ಸ್ನೇಹಿತನಿದ್ದಾನೆ. ನಮ್ಮಿಬ್ಬರ ಸ್ನೇಹ ಆರಂಭವಾಗಿ ಹಲವಾರು ವರ್ಷಗಳೇ ಉರುಳಿಹೋಗಿವೆ. ನಾವಿಬ್ಬರು ಒಡಹುಟ್ಟಿದವರು ಅಲ್ಲದಿದ್ದರೂ ನನ್ನ ಮತ್ತು ಅವನ ಸಂಬಂಧ ಸ್ವಂತ ಅಣ್ಣ ತಮ್ಮನ ರೀತಿಯದು. ಎಲ್ಲ ಕಷ್ಟ ಸುಖಗಳನ್ನು  ಪರಸ್ಪರ ಹಂಚಿಕೊಳ್ಳುತ್ತೇವೆ. ನಮ್ಮಿಬ್ಬರ ಈ ಗೆಳೆತನವೇ ನಿಜವಾದ ಸಹಬಾಳ್ವೆ.

ಜಾತಿ-ಧರ್ಮವೆಂಬ ವಿಷ ಬೀಜವನ್ನು ಮರೆತು ನಮ್ಮಿಬ್ಬರ ಸಂಬಂಧ ಹೆಚ್ಚುತ್ತಲೇ ಇದೆ. ನನ್ನ ಸ್ನೇಹಿತರ ಪಟ್ಟಿಯನ್ನೊಮ್ಮೆ ನೋಡುತ್ತಾ ಹೋದರೆ ಎಲ್ಲ ಧರ್ಮದವರು ಸಿಗುತ್ತಾರೆ. ಒಂದು ವೇಳೆ ನನ್ನ ಜಾತಿಯೇ ಮೇಲು ಎಂಬ ಅಹಂಕಾರವಾಗಲಿ, ಕೀಳರಿಮೆಯ ಭಾವವಾಗಲಿ ಇಟ್ಟುಕೊಂಡಿದ್ದರೆ ಈಗ ಜೀವಕ್ಕೆ ಜೀವ ಕೊಡುವ ಸ್ನೇಹಿತರು ಇರುತ್ತಿರಲಿಲ್ಲ. ನಾನು ಮತ್ತು ಸುದೀಶ್ ಕೆಲಸದ ಕಾರಣಕ್ಕೆ ದೂರ ದೂರದ ಊರಿನಲ್ಲಿದ್ದೇವೆ. ಇಬ್ಬರೂ ಎರಡು ದಿನಕ್ಕೊಮ್ಮೆ ಕರೆಮಾಡಿಕೊಂಡು ಮಾತನಾಡುತ್ತೇವೆ. ನಮ್ಮಿಬ್ಬರ ಮಾತುಕತೆ ಪ್ರಾರಂಭವಾದರೆ ಅದು ಮುಗಿಯಲು ಕನಿಷ್ಠ ಎರಡು ಗಂಟೆಯಾದರೂ ಬೇಕಾಗುತ್ತದೆ. ಕೇವಲ ಎರಡೇ ದಿನಕ್ಕೆ ನಮ್ಮಿಬ್ಬರಲ್ಲಿ ಹಂಚಿಕೊಳ್ಳಲು ಹಲವಾರು ವಿಷಯಗಳು ಇರುತ್ತವೆ. ನಡೆದ ಘಟನೆಗಳು, ಸಂತೋಷದ ವಿಚಾರಗಳನ್ನು ಮಾತನಾಡುತ್ತಾ, ಸಮಸ್ಯೆಗಳನ್ನು ಹೇಳಿಕೊಂಡು ಅದಕ್ಕೆ ದಾರಿಯನ್ನು ಕಂಡುಕೊಳ್ಳುತ್ತಾ, ಜೊತೆಗೆ ಒಂದಿಷ್ಟು ಹರಟೆ… ಹೀಗೆ ನಮಗೆ ಆ ಎರಡು ಗಂಟೆ ಹೇಗೆ ಕಳೆಯಿತು ಎಂದೇ ಗೊತ್ತಾಗುತ್ತಿರಲಿಲ್ಲ. ಅಷ್ಟೆಲ್ಲ ಮಾತನಾಡಿದ ಮೇಲೂ ಮತ್ತೆ ಮರುದಿನಕ್ಕೂ ಅಷ್ಟೇ ಬಾಕಿ ವಿಷಯ ಇರುತ್ತಿತ್ತು. ಇಂತಹ ನಮ್ಮ  ಗೆಳೆತನದಲ್ಲಿ ಸಹೋದರತ್ವದಲ್ಲಿ ಇದ್ದ ನೆಮ್ಮದಿ ಮತ್ತು ಸಂತೋಷ ಎಷ್ಟು ಹಣ ಕೊಟ್ಟರೂ ಖರೀದಿ ಮಾಡಲಾಗುವುದಿಲ್ಲ

ಆದರೆ ಜಾತಿ ಧರ್ಮವೆಂಬ ವಿಷ ಗಾಳಿ ತುಂಬಿಕೊಂಡ ಈ ಸಮಾಜದಲ್ಲಿ  'ಬಾ ಮಚಾ... ನಾನಿದೀನಿ 'ಎಂದು ಹೇಳುವ ನನ್ನ ಜೀವದ ಗೆಳೆಯ ಸುದೀಶ್ ಮತ್ತು ನನ್ನದು ತಾಯಿಮಕ್ಕಳ ಸಂಬಂಧದಂತೆಯೇ ಇದೆ. ಪ್ರೀತಿ ಎನ್ನುವುದು ಒಂದು ವಿಶೇಷವಾದ ಸಂಬಂಧ. ಇದು ಕೇವಲ ಹುಡುಗ ಮತ್ತು ಹುಡುಗಿ ಪ್ರೀತಿಸುವುದು ಅಂತ ಅಲ್ಲ. ಇದಕ್ಕೆ ವಿರುದ್ಧವಾಗಿ ಹಲವಾರು ಧರ್ಮದವರ ನಡುವಿನ ವಿಶೇಷ ಸಂಬಂಧ. ಇದನ್ನೇ ಸಹಬಾಳ್ವೆ ಎನ್ನುವುದು. ಕಷ್ಟ ಬಂದಾಗ ಕೈ ಬಿಡುವ ಸಾವಿರ ಸ್ನೇಹಿತರು ಇರುವುದಕ್ಕಿಂತ, ಕಷ್ಟ ಬಂದಾಗ ಕೈಹಿಡಿಯುವ ಒಬ್ಬ ಸ್ನೇಹಿತ ಇದ್ದರೆ ಸಾಕು. ಇಂತಹ ಸ್ನೇಹಕ್ಕೆ ಉದಾಹರಣೆಯೇ ನನ್ನ ಮತ್ತು ಸುದೀಶ್‌ನ ಗೆಳೆತನ.

ಇದನ್ನು ಓದಿದ್ದೀರಾ? ನಮ್ಮ ಊರಿಗೆ ‌ʼಅದ್ದʼ ಸಾಹೇಬರೇ ಒಂದು ಅಪ್ಲಿಕೇಷನ್

ಇದಲ್ಲವೇ ನಿಜವಾದ ಸೌಹಾರ್ದತೆ?

ನಾನೀಗ ಹೀಗಿರುವುದಕ್ಕೆ ಅದಕ್ಕೆ ನನ್ನ ಗೆಳೆಯಾ ಸುದೀಶ್ ಕಾರಣ. ನಾನು ಯಾವುದೊ ಕೆಲಸದ ಮೇಲೆ ಆಚೆ ಹೋದವವನು ಹಿಂತಿರುಗಿ ಮನೆಗೆ ಬರುವಾಗ ಬೈಕ್ ಅಪಘಾತದಿಂದ ನನ್ನ ಸ್ಥಿತಿ ಗಂಭೀರವಾಗಿತ್ತು. ಆಗ ನನಗೆ ನೆರವಾದವನೇ ಸುದೀಶ್. ನನ್ನ ಅಸ್ಪತ್ರೆಯ ಖರ್ಚು ಎಲ್ಲವನ್ನು ಅವನೇ ವಹಿಸಿ ನನ್ನ ಆರೋಗ್ಯ ನೋಡಿಕೊಂಡಿದ್ದಾನೆ. ಇದಲ್ಲವೆ ನಿಜವಾದ ಸೌಹಾರ್ದತೆ? ಎಷ್ಟೋ ಬಾರಿ ಇಂತಹ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಅರ್ಧ ಭಾಗ ಸಮಾನತೆಯ ಮಾರ್ಗದತ್ತ ಸಾಗಿದರೆ, ಇನ್ನೂ ಅರ್ಧಭಾಗ ಅಸಮಾನತೆಯತ್ತ ಕೈ ಹಾಕುತ್ತದೆ. ಅಂದು ಅವನೆಲ್ಲಾದರೂ ಜಾತಿ- ಧರ್ಮ ಎಂದು ನೋಡಿದ್ದರೆ ಎಲ್ಲಿ ಆ ಸೌಹಾರ್ದತೆ ಕಾಣುತ್ತಿತ್ತು? ನನಗೆ ನಮ್ಮ ಜಾತಿಧರ್ಮ ಎನ್ನುವುದಕ್ಕಿಂತ ನಮ್ಮ ಗೆಳೆತನದಲ್ಲಿ ಹೆಚ್ಚು ಸಂತೋಷ ಸಿಗುತ್ತಿದೆ. ಮನುಷ್ಯ ಕುಲ ಉಳಿಯಬೇಕಾದರೆ ಜಾತಿಭೇದವನ್ನು ಖಂಡಿಸಬೇಕು. ಜಾತಿ ಉಳಿಯಬೇಕಾದರೆ ಮನುಕುಲವನ್ನು ಗೌರವಿಸಬೇಕು.

ನಿಮಗೆ ಏನು ಅನ್ನಿಸ್ತು?
3 ವೋಟ್