ಛತ್ತೀಸ್‌ಗಢದ ಹಳ್ಳಿಯೊಂದರಲ್ಲಿ ನಿಗೂಢ ಕಾಯಿಲೆ; ಎರಡು ವರ್ಷದಲ್ಲಿ 61 ಮಂದಿ ಸಾವು | 10 ಮುಖ್ಯ ಅಂಶ

ಛತ್ತೀಸ್‌ಗಢದ ಹಳ್ಳಿಯೊಂದರ ಜನ ನಿಗೂಢ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಸ್ಪಷ್ಟ ಕಾರಣವಿಲ್ಲದ ಸಾವಿನ ಸರಣಿ ಮುಂದುವರಿದದ್ದು ಆತಂಕ ಹೆಚ್ಚಿಸಿದೆ. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಜಿಲ್ಲಾಡಳಿತ ಮುಂದಾಗಿದೆ
Chattisgarh
  • ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ರೇಗಡಗಟ್ಟಾ ಎಂಬ ಹಳ್ಳಿಯಲ್ಲಿ ನಿಗೂಢ ಕಾಯಿಲೆಗೆ ಈವರೆಗೆ ಪ್ರಾಣ ಬಿಟ್ಟವರು 61 ಮಂದಿ. ಸ್ಪಷ್ಟ ಕಾರಣ ಗೊತ್ತಾಗದೆ ಗ್ರಾಮಸ್ಥರು ಕಂಗಾಲು.
  • ಗ್ರಾಮದಲ್ಲಿ 130 ಕುಟುಂಬಗಳು ವಾಸ. 1,000ಕ್ಕೂ ಹೆಚ್ಚು ಜನಸಂಖ್ಯೆ. ಸಾವಿನ ಸರಣಿ ಕುರಿತು ಇದೇ ಜುಲೈ 27ರಂದು ಸುಕ್ಮಾ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಪತ್ರ ಬರೆದ ನಂತರ ವಿಷಯ ಬಹಿರಂಗ.
  • ಗ್ರಾಮಸ್ಥರ ಪೈಕಿ ಬಹುತೇಕರಲ್ಲಿ ಕೈ ಮತ್ತು ಕಾಲು ಊತದ ಲಕ್ಷಣಗಳಿವೆ. ವಯಸ್ಸಾದವರು ಮಾತ್ರವಲ್ಲದೆ ಯುವಜನ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದು ಗ್ರಾಮಸ್ಥರು ಚಿಂತೆಗೀಡಾಗಲು ಮುಖ್ಯ ಕಾರಣ.
  • ಹೆಚ್ಚಿನ ಸಾವು ಸಂಭವಿಸುವುದನ್ನು ತಡೆಯಲು ತಕ್ಷಣ ವೈದ್ಯರ ತಂಡವನ್ನು ಕಳುಹಿಸುವಂತೆ ಗ್ರಾಮಸ್ಥರಿಂದ ಒಕ್ಕೊರಲ ಮನವಿ.
  • ಕೆಲವು ದಿನಗಳ ಹಿಂದೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ, ಪ್ರಾಥಮಿಕ ಮಾಹಿತಿ ಸಂಗ್ರಹ. ಆರೋಗ್ಯ ಇಲಾಖೆ ವರದಿಯ ಪ್ರಕಾರ, ಈವರೆಗೆ ಗ್ರಾಮದಲ್ಲಿ 47 ಮಂದಿ ಅಸಹಜ ಸಾವಿಗೀಡಾದವರಲ್ಲಿ ಗುರುತಿಸಬಹುದಾದ ಕೆಲವು ಸಾಮ್ಯತೆಗಳಿವೆ.
  • ವೈದ್ಯಕೀಯ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದೆ. ಈ ವೇಳೆ, 41 ಮಂದಿಯ ಕೈ-ಕಾಲು ಊದಿಕೊಂಡಿದ್ದು, ಕಿಡ್ನಿ ಸಂಬಂಧಿ ಸಮಸ್ಯೆಗಳು ಕೂಡ ಕಂಡುಬಂದಿವೆ.
  • 20 ಜಲಮೂಲಗಳ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ ಎರಡರಲ್ಲಿ ಫ್ಲೋರೈಡ್ ಮಟ್ಟ ಮಿತಿ ಮೀರಿರುವುದು ಕಂಡುಬಂದಿದೆ. ಅಲ್ಲದೆ, ಕೆಲವು ಜಲಮೂಲಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದು ಪತ್ತೆಯಾಗಿದೆ.
  • "ಕಬ್ಬಿಣದ ಅಂಶವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ವಿನಾ ಹಠಾತ್ ಸಾವು ಸಾಧ್ಯವಿಲ್ಲ," ಎಂಬುದು ವೈದ್ಯಕೀಯ ತಂಡದ ಟಿಪ್ಪಣಿ.
  • "ಫ್ಲೋರೈಡ್ ನೀರಿನಿಂದ ಮೂಳೆಗಳು ದುರ್ಬಲವಾಗುತ್ತವೆ. ಗ್ರಾಮಸ್ಥರಲ್ಲಿ ಆ ಲಕ್ಷಣಗಳು ಕಂಡುಬಂದಿಲ್ಲ. ಇದರಿಂದ ಸಂಭವಿಸಿರುವ ಸಾವುಗಳಿಗೆ ಲೋಹಮಿಶ್ರಿತ ನೀರು ಕಾರಣ ಎನ್ನಲಾಗದು,” ಎಂದಿದ್ದಾರೆ ಜಿಲ್ಲಾಧಿಕಾರಿ ಹರೀಶ್ ಎಸ್.
  • ನೀರು ಮತ್ತು ಮಣ್ಣಿನಲ್ಲಿ ಇರುವ ಆರ್ಸೆನಿಕ್‌ ಥರದ ಭಾರವಾದ ಲೋಹದ ಅಂಶವನ್ನು ಗುರುತಿಸಲು ಇದೇ ಆಗಸ್ಟ್ 8ರ ಸೋಮವಾರ ಅಧ್ಯಯನ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಲಿದೆ. 

ಈ ಸುದ್ದಿ ಓದಿದ್ದೀರಾ:? ಕರ್ನಾಟಕದಲ್ಲಿ ಮಂಕಿಪಾಕ್ಸ್; ಇದುವರೆಗೂ ಆಗಿದ್ದೇನು? | 10 ಮುಖ್ಯ ಅಂಶ

ನಿಮಗೆ ಏನು ಅನ್ನಿಸ್ತು?
2 ವೋಟ್