ಒಂದು ನಿಮಿಷದ ಓದು | ಕ್ಯಾನ್ಸರ್‌ಕಾರಕ ಕಣಗಳ ಪತ್ತೆಗೆ ಕೃತಕ ಬುದ್ಧಿಮತ್ತೆಯ ಸಾಧನ ಆವಿಷ್ಕಾರ

Chips

ಭಾರತೀಯ ಸಂಶೋಧಕರು ವಸ್ತುಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳನ್ನು ಪತ್ತೆಮಾಡುವ ಕೃತಕ ಬುದ್ಧಿಮತ್ತೆಯ (ಆರ್ಟಿಫೀಷಿಯಲ್‌ ಇಂಟೆಲಿಜನ್ಸ್‌) ಸಾಧನವೊಂದನ್ನು ಆವಿಷ್ಕರಿಸಿದ್ದಾರೆ.

ʼಮೆಟಾಬಾಲ್ಕಿಲ್ಲರ್ʼ ಎಂದು ಇದನ್ನು ಕರೆಯಲಾಗಿದ್ದು, ದೀರ್ಘಾವಧಿಯವರೆಗೆ ಬಳಸಿದ ನಂತರ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ (ಕಾರ್ಸಿನೋಜೆನ್) ಅಂಶಗಳನ್ನು ಪತ್ತೆಹಚ್ಚುವ ಬದಲು, ಬಳಕೆಗೂ ಮೊದಲೇ ಪತ್ತೆಹಚ್ಚಲು ಈ ಆವಿಷ್ಕಾರ ಸಹಕಾರಿಯಾಗಲಿದೆ ಎಂಬುದು ಸಂಶೋಧಕರ ಅಭಿಪ್ರಾಯ. ಈ ಕುರಿತ ಅಧ್ಯಯನ ವರದಿಯನ್ನು ʼನೇಚರ್ ಕೆಮಿಕಲ್ ಬಯಾಲಜಿʼ ಪ್ರಕಟಿಸಿದೆ.

Eedina App

ಚಿಪ್ಸ್ ಅಥವಾ ಸೌಂದರ್ಯವರ್ಧಕಗಳನ್ನು ತಯಾರಿಸುವಾಗ, ಔಷಧಿ ತಯಾರಕರು ಇವುಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿವೆಯೇ ಎಂದು ಪತ್ತೆಹಚ್ಚಲು ಪರೀಕ್ಷೆಗಳನ್ನು ನಡೆಸುತ್ತಾರೆ. ಕಳೆದ ಕೆಲವು ದಶಕಗಳ ಅವಧಿಯಲ್ಲಿ, ಆಹಾರ ಮತ್ತು ಔಷಧಿ ಪ್ರಾಧಿಕಾರವು (ಎಫ್‌ಡಿಎ) 750ಕ್ಕೂ ಹೆಚ್ಚು ಔಷಧಿಗಳನ್ನು ನಿಷೇಧಿಸಿದೆ. ಇವುಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಕಂಡುಬಂದಿದ್ದವು ಎಂಬುದು ನಿಷೇಧಕ್ಕೆ ಕಾರಣ.

ಕಾರ್ಸಿನೋಜೆನಿಸಿಟಿ ಅಂಶಗಳು ಪತ್ತೆಯಾದಾಗ ಮೆಟಾಬಾಲ್‌ಕಿಲ್ಲರ್ ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಹಾನಿಕಾರಕ ಕಣಗಳ ಪತ್ತೆಗೆ ಆರು ವಿಭಿನ್ನ ರಾಸಾಯನಿಕ ಪ್ರಕ್ರಿಯೆಗೆ ಒಳಪಡುತ್ತದೆ. ಸಂಶೋಧಕರು ಸಾವಿರಾರು ಅಣುಗಳ ಮೇಲೆ ಅಧ್ಯಯನ ನಡೆಸಿ, ಜೀವಕೋಶಗಳಲ್ಲಿ ಉಂಟಾಗುವ ರಾಸಾಯನಿಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಿದ್ದಾರೆ. ಅಲ್ಲದೆ, ಹೊಸ ಆವಿಷ್ಕಾರಕ್ಕೆ ಅಲ್ಗಾರಿದಮ್ ತರಬೇತಿ ನೀಡಿದ್ದಾರೆ.

AV Eye Hospital ad

ಕ್ಯಾನ್ಸರ್‌ಗೆ ಸಂಬಂಧಿಸಿದ ಆರು ಜೀವರಾಸಾಯನಿಕ ಪ್ರಕ್ರಿಯೆಗಳಿಗೆ ಅಣುವೊಂದು ಕಾರಣವಾಗಬಹುದೇ ಎಂದು ಕಂಡುಹಿಡಿಯಲು ಮೆಟಾಬಾಲ್‌ಕಿಲ್ಲರ್‌ಗೆ ತರಬೇತಿ ನೀಡಲಾಗುತ್ತಿದೆ. ಮೊದಲನೆಯದು ಎಲೆಕ್ಟ್ರೋಫಿಲಿಸಿಟಿ. ಇದು ಜೀವಕೋಶದಲ್ಲಿ ಧನಾತ್ಮಕ ಅಂಶವಿದೆಯೇ ಎಂದು ಪರೀಕ್ಷಿಸುತ್ತದೆ. ಸ್ವಾಭಾವಿಕವಾಗಿ ಮಾನವರಲ್ಲಿ, ಪ್ರಾಣಿಗಳಲ್ಲಿ ಡಿಎನ್‌ಎ ಋಣಾತ್ಮಕವಾಗಿರುತ್ತದೆ. ಆದ್ದರಿಂದ, ಧನಾತ್ಮಕ ಅಂಶ ಹೊಂದಿರುವ ಕಣಗಳು ಮಾತ್ರ ಆಕರ್ಷಿತವಾಗುತ್ತವೆ ಮತ್ತು ಕಾನ್ಸರ್‌ಗೆ ಕಾರಣವಾಗುತ್ತದೆ. 

ಎರಡನೆಯದಾಗಿ. ಕ್ಯಾನ್ಸರ್‌ ಬೆಳವಣಿಗೆಯಲ್ಲಿ ಕಂಡುಬರುವ ಜೀವಕೋಶಗಳ ಬೆಳವಣಿಗೆಯ ಸಾಮರ್ಥ್ಯವನ್ನು ಮೆಟಾಬಾಲ್‌ಕಿಲ್ಲರ್‌ ಪರೀಕ್ಷಿಸುತ್ತದೆ. ಕ್ಯಾನ್ಸರ್‌ ಅಣು ಸೃಷ್ಟಿಸುವ ಜೈವಿಕ ಅನಿಲವನ್ನು (ಆಕ್ಸಿಡೇಟಿ) ಪತ್ತೆಹಚ್ಚುತ್ತದೆ.

ಈ ಅಧ್ಯಯನಕ್ಕಾಗಿ ಸಂಶೋಧನಾ ತಂಡವು ಕೆಲವು ಫಾರ್ಮಾ ಕಂಪನಿಗಳ ಸಹಕಾರ ಪಡೆದಿದ್ದು, ಈ ಉಪಕರಣ ಸಂಶೋಧಕರಿಗೆ ಮತ್ತು ಕಂಪನಿಗಳಿಗೆ ಪರವಾನಗಿ ಮೂಲಕ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಸಂಶೋಧನೆಗೆ ಜೈವಿಕ ತಂತ್ರಜ್ಞಾನ ಇಲಾಖೆಯು ಬೆಂಬಲ ನೀಡಿದೆ. ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ವಿಜ್ಞಾನಿಗಳು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app