ಕೋವಿಡ್ ಸುದ್ದಿ | ಮೂಗಿನ ಮೂಲಕ ನೀಡಬಹುದಾದ ಮೂರನೇ ಬೂಸ್ಟರ್ ಡೋಸ್ ಪ್ರಯೋಗ ಯಶಸ್ವಿ

Intra Nasal Vaccine

ಮೂಗಿನ ಮೂಲಕ ನೀಡಬಹುದಾದ ಕೋವಿಡ್-19ರ ಮೂರನೇ ಬೂಸ್ಟರ್ ಡೋಸ್ ಲಸಿಕೆ ಸುರಕ್ಷಿತ ಎಂದು ಭಾರತ್ ಬಯೋಟೆಕ್ ಹೇಳಿದೆ.

"ಅಡೆನೊವೈರಲ್ ಇಂಟ್ರಾನಸಲ್ʼ ಲಸಿಕೆ 'ಬಿಬಿವಿ154ʼ ಅನ್ನು ಮೌಲ್ಯ ಮಾಪನ ಮಾಡಲು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಈ ಹಿಂದೆ ಬಳಸಲಾದ ಎರಡು ಬೂಸ್ಟರ್ ಡೋಸ್‌ಗಳಿಗಿಂತ ವಿಭಿನ್ನ ಡೋಸ್ ಇದಾಗಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಸುರಕ್ಷಿತ ಎಂದು ಸಾಬೀತಾಗಿದೆ ಎಂಬುದು ಬಯೋಟೆಕ್ ತಜ್ಞರ ಅಭಿಮತ.

ಪ್ರಾಥಮಿಕ ಹಂತದಲ್ಲಿ 14 ಕಡೆಗಳಲ್ಲಿ, 3,100 ಜನರ ಮೇಲೆ ಬೂಸ್ಟರ್ ಡೋಸ್‌ ಪ್ರಯೋಗ ನಡೆಸಲಾಗಿತ್ತು. ಈ ಮೊದಲು ನೀಡಲಾಗಿದ್ದ ಲಸಿಕೆಗಿಂತ ವಿಭಿನ್ನ ಬೂಸ್ಟರ್ ಡೋಸ್‌ ಇದಾಗಿದ್ದ ಕಾರಣ, ಹೆಚ್ಚುವರಿ ಒಂಬತ್ತು ಜಾಗಗಳಲ್ಲಿ 875 ಜನರ ಮೇಲೆ ಪ್ರಯೋಗ ಮಾಡಲಾಗಿತ್ತು.

"ಪ್ರಯೋಗದಲ್ಲಿ ಕಂಡುಕೊಂಡ ಅಂಕಿ-ಅಂಶಗಳನ್ನು ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ (National Regulatory Authorities) ಅನುಮೋದನೆಗೆ ಕಳುಹಿಸಲಾಗಿದೆ. ಬಿಬಿವಿ154 ಲಸಿಕೆ ಮೂಗಿನ ಮೂಲಕ ಹಾಕುವ ಲಸಿಕೆಯಾಗಿದೆ. ಈ ಲಸಿಕೆ ಶ್ವಾಸ ವ್ಯವಸ್ಥೆಯಲ್ಲಿ ರೋಗನಿರೋಧಕಗಳನ್ನು ಉತ್ಪಾದಿಸುತ್ತದೆ ಮತ್ತು ಸೋಂಕು ಹರಡುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಲಸಿಕೆಯ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ," ಎಂದು ಭಾರತ್ ಬಯೋಟೆಕ್ ಹೇಳಿದೆ.

AV Eye Hospital ad

"ಈ ಲಸಿಕೆ ಉತ್ಪಾದನೆಗಾಗಿ ಕಂಪನಿಯು ಭಾರತದಾದ್ಯಂತ ಘಟಕಗಳನ್ನು ಹೊಂದಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಗುಜರಾತ್‌ ಘಟಕಗಳು ಲಸಿಕೆ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ," ಎಂದಿದೆ ಬಯೋಟೆಕ್.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app