ಒಂದು ನಿಮಿಷದ ಓದು | ಮುಂಬೈ ಮಂದಿಯನ್ನು ಬಿಡದೆ ಕಾಡುತ್ತಿದೆ ವೈರಾಣು ಸೋಂಕು

Mumbai

ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಉಸಿರಾಟಕ್ಕೆ ಸಂಬಂಧಿಸಿದ ವೈರಾಣು ಸೋಂಕು ಉಲ್ಬಣಗೊಳ್ಳುತ್ತಿದೆ ಎಂದು ಮುಂಬೈ ನಗರದ ವೈದ್ಯರ ಸಂಘ ಎಚ್ಚರಿಸಿದೆ.

“ಇತ್ತೀಚೆಗೆ ಸುರಿದ ಭಾರಿ ಮಳೆ ನಗರದಲ್ಲಿ ಸೋಂಕು ಹೆಚ್ಚಳವಾಗಲು ಕಾರಣವಾಗಿದೆ. ಪರೀಕ್ಷೆಗೊಳಪಡಿಸಿದ ರೋಗಿಗಳಲ್ಲಿ ಕನಿಷ್ಠ ಎರಡರಿಂದ ನಾಲ್ವರಲ್ಲಿ ಕೋವಿಡ್ ಸೋಂಕು ಅಥವಾ ಎಚ್1ಎನ್ಒನ್ ಸೋಂಕಿರುವುದು ಪತ್ತೆಯಾಗುತ್ತಿದೆ,” ಎಂಬುದು ವೈದ್ಯರ ಆತಂಕ.

ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆ, ಡಾ.ಆರ್ ಎನ್ ಕೂಪರ್ ಮುನ್ಸಿಪಲ್ ಜನರಲ್ ಆಸ್ಪತ್ರೆ ಹಾಗೂ ಬಿವೈಎಲ್ ನಾಯರ್ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ ಸೋಂಕಿನ ಲಕ್ಷಣಗಳಿಂದ ಭೇಟಿ ನೀಡುತ್ತಿರುವ ರೋಗಿಗಳ ಸಂಖ್ಯೆ ಶೇಕಡ 50ರಿಂದ 60ರಷ್ಟು ಏರಿಕೆಯಾಗಿದೆ. ಸದ್ಯದ ಮಳೆ ಸಮಸ್ಯೆಗಳ ಜೊತೆಗೆ ನಗರದ ತಾಪಮಾನವೂ ಏರಿಕೆಯಾಗುತ್ತಿದ್ದು, ಯಾವುದೇ ರೋಗ ಲಕ್ಷಣಗಳನ್ನೂ ರೋಗಿಗಳು ನಿರ್ಲಕ್ಷಿಸಬಾರದು ಎಂಬುದು ವೈದ್ಯರ ಸಲಹೆ. 

"ಉಸಿರಾಟ, ಕೆಮ್ಮು, ಸೀನುವಿಕೆ, ಎದೆಯಲ್ಲಿ ಬಿಗಿತ, ಅಲರ್ಜಿ ಹಾಗೂ ಅಸ್ತಮಾ ಹಾಗೂ ಉಸಿರಾಟದ ಕಾಯಿಲೆಯಿಂದ ದಿನಕ್ಕೆ 30ರಿಂದ 40 ರೋಗಿಗಳು ಆಸ್ಪತ್ರೆ ಬರುತ್ತಿದ್ದಾರೆ,” ಎನ್ನುತ್ತಾರೆ ಡಾ.ಗೌತಮ್ ಬನ್ಸಾಲಿ.

“ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಹೊರರೋಗಿಗಳ ವಿಭಾಗಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಹೆಚ್ಚಿನವರು ಮಕ್ಕಳು, ಹಿರಿಯ ನಾಗರಿಕರು. ಬಹುತೇಕರು ಅಲರ್ಜಿ ಮತ್ತು ಜ್ವರದ ಕಾರಣಕ್ಕೆ ಬರುತ್ತಿದ್ದಾರೆ,” ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ. ಈ ಕುರಿತು ಮುಂಬೈ ಮಹಾನಗರ ಪಾಲಿಕೆ ಸದ್ಯದಲ್ಲೇ ಮಾರ್ಗಸೂಚಿ ಹೊರಡಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್