ಭಾರತದಲ್ಲಿ ಕೋವಿಡ್ 19ರ ಉಪತಳಿಗಳ ಸೋಂಕಿಗೆ ಪ್ರತೀ ದಿನ 18,000 ಜನ ತುತ್ತಾಗುತ್ತಿದ್ದಾರೆ. ಈ ಮಧ್ಯೆ ಹೊಸ ವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಹೊಸ ವೈರಸ್ನ ತೀವ್ರತೆ ಬಗ್ಗೆ ಖಚಿತ ಮಾಹಿತಿ ಇಲ್ಲ
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಉಪತಳಿ ಬಿ ಎ 2.75 ಪತ್ತೆ
ಈ ವೈರಸ್ ಬಗ್ಗೆ ಮೊದಲು ವರದಿಯಾಗಿದ್ದು ಭಾರತದಿಂದ ಎಂದು ದೃಢೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ
ಈ ಕುರಿತು ವಿಶ್ವಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಟ್ವೀಟ್
ಭಾರತದಲ್ಲಿ ಪತ್ತೆಯಾಗುತ್ತಿರುವ ಕೋವಿಡ್ನ ಎರಡನೇ ಉಪತಳಿ ಬಿ ಎ 2.75
ವೈರಸ್ನ ಯಾವುದೇ ಸ್ಪಷ್ಟ ರೋಗ ಲಕ್ಷಣಗಳು ಈವರೆಗೆ ವರದಿಯಾಗಿಲ್ಲ
ವೈರಸ್ನಿಂದ ಉಂಟಾಗುವ ಸೋಂಕು ಸೌಮ್ಯವಾಗಿರಬಹುದು ಅಥವಾ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದೆ ಇರಬಹುದೆಂದು ತಜ್ಞರ ಟಿಪ್ಪಣಿ
ಈ ವೈರಸ್ನಿಂದ ಉಂಟಾಗುವ ಸೋಂಕಿನ ಪರಿಣಾಮ ಎರಡರಿಂದ ಮೂರು ದಿನಗಳವರೆಗೆ ಇರುವ ಸಾಧ್ಯತೆ
ಬೇರೆ ರೋಗಗಳಿಗೆ ತುತ್ತಾದವರು ಮತ್ತು ವಯಸ್ಸಾದವರು ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯ
ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ, ಸ್ವಯಂ ಉಪಚಾರ ಅಪಾಯಕಾರಿ
ವೈರಸ್ನ ತೀವ್ರತೆ ಬಗ್ಗೆ ಖಚಿತವಾಗಿ ಹೇಳಬಲ್ಲ ಮಾಹಿತಿ ಈವರೆಗೆ ಅಲಭ್ಯ