
- ಅಮೆರಿಕ ಮೂಲದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುಯೇಶನ್ನಿಂದ (ಐಎಚ್ಎಂಇ) 27 ದೇಶದಲ್ಲಿ ಅಧ್ಯಯನ
- 2021ರ ಆರಂಭದಿಂದ ಮಧ್ಯಭಾಗದವರೆಗೆ (ಜುಲೈ) ಭಾರತದಲ್ಲಿ ಸಂಭವಿಸಿರುವ ಸಾವುಗಳಿಗೆ ಮೂರನೇ ಪ್ರಮುಖ ಕಾರಣ ಕೋವಿಡ್-19
- ವಿಶ್ವಸಂಸ್ಥೆಯ ಪ್ರಕಾರ, ಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆ 4.7 ಮಿಲಿಯನ್ಗೂ ಅಧಿಕ
- ಕೊರೊನಾ ಸಾಂಕ್ರಾಮಿಕದಿಂದ ಭಾರತೀಯರು ಅತೀ ಹೆಚ್ಚು ಅನಾಥ ಭಾವ ಅನುಭವಿಸುತ್ತಿದ್ದಾರೆ ಎನ್ನುತ್ತದೆ ಅಧ್ಯಯನ
- ಸೋಂಕಿನಿಂದ ದೂರವಾದವರನ್ನು ನೆನೆದು ಮಾನಸಿಕ ಯಾತನೆ ಪಡುತ್ತಿರುವವರಲ್ಲಿ ಖಿನ್ನತೆಯ ಅಪಾಯ
- ಮಾನಸಿಕ ಖಿನ್ನತೆ ಅಳೆಯಲು ಮಾಡಲು ಆರಿಸಿಕೊಂಡ ಅಧ್ಯಯನ ಅಂಶಗಳು: ಮೊದಲನೆಯದು - ರೋಗಿಗಳ ಪರಿಕಲ್ಪನೆಯಲ್ಲಿ ಒಳ್ಳೆಯ ಸಾವು ಮತ್ತು ಕೆಟ್ಟ ಸಾವುಗಳ ಪರಿಶೀಲನೆ
- ಎರಡನೆಯದು - ದೈಹಿಕ ಅಸ್ವಸ್ಥತೆ, ಉಸಿರಾಟದ ತೊಂದರೆ, ಸಮಾಜದಿಂದ ದೂರವಿದ್ದ ಅನುಭವ, ಮಾನಸಿಕ ಯಾತನೆ, ಪೂರ್ವಸಿದ್ಧತೆಯ ಕೊರತೆ ಹಾಗೂ ಗೌರವ ಸಿಗದಿರುವುದು
- ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಮೃತಪಟ್ಟವರ ಮೊಗವನ್ನು ಕೊನೆಯದಾಗಿ ನೋಡುವ ಅವಕಾಶ ಸಿಗದಿರುವುದು ಹೆಚ್ಚಿನವರಲ್ಲಿ ಮಾನಸಿಕ ಖಿನ್ನತೆಗೆ ಕಾರಣ
- ಸಂಗಾತಿಗಳನ್ನು ಕಳೆದುಕೊಂಡವರಲ್ಲಿ ಖಿನ್ನತೆ ಮತ್ತು ಒಂಟಿತನದ ಅಪಾಯಗಳು ಹೆಚ್ಚು
- ಕೊರೊನಾ ಸಾಂಕ್ರಾಮಿಕದ ಮುಂಚೆ ಇದ್ದ ವಿಯೋಗದ ದುಃಖ ಸಾಂಕ್ರಾಮಿಕದ ಬಳಿಕ ಹೆಚ್ಚಿನ ಜನರ ಮನಸ್ಸಿನ ಮೇಲೆ ಗಣನೀಯ ಪರಿಣಾಮ ಎನ್ನುತ್ತಿದೆ ಅಧ್ಯಯನ ವರದಿ
ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | ಕೋವಿಡ್ ಸಂತ್ರಸ್ತರಿಗೆ ಪರಿಹಾರ ವಿಳಂಬ; ಸುಪ್ರೀಂ ಕೋರ್ಟ್ ಹೇಳಿದ್ದೇನು, ಸರ್ಕಾರಗಳು ಮಾಡಿದ್ದೇನು?