ಕೋವಿಡ್ ಸುದ್ದಿ | ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ, ಕಳೆದ 24 ಗಂಟೆಯಲ್ಲಿ 195 ಪ್ರಕರಣ

Covid-19

ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಇಳಿಮುಖವಾಗಿದ್ದು, ಕಳೆದ 24 ಗಂಟೆಯಲ್ಲಿ 195 ಪ್ರಕರಣ ದಾಖಲಾಗಿವೆ. 365 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಆದಾಗ್ಯೂ ಸಕ್ರಿಯ ಪ್ರಕರಣಗಳ ಸಂಖ್ಯೆ 3012 ಇದೆ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 2.01ರಷ್ಟಿದೆ.

ಇನ್ನು, ಕಳೆದೊಂದು ದಿನದಲ್ಲಿ ದೇಶಾದ್ಯಂತ ಕೋವಿಡ್‌-19ರ ಸೋಂಕಿಗೆ ತುತ್ತಾದವರ ಸಂಖ್ಯೆ 4,129. ಸೋಂಕಿಗೆ 20 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,28,562ಕ್ಕೇರಿದೆ. ಸೋಂಕಿನಿಂದ ಹೊರಬಂದವರು 4,255 ಮಂದಿ. ಸಕ್ರಿಯ ಪ್ರಕಣಗಳ ಸಂಖ್ಯೆ 42,358. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.3.

ಇದೇ ವೇಳೆ ಪ್ರಪಂಚಾದ್ಯಂತ ಪತ್ತೆಯಾದ ಕೊರೊನಾ ಸೋಂಕಿತರು 3,02,281 ಮಂದಿ. ಸೋಂಕಿಗೆ ಬಲಿಯಾದವರ ಸಂಖ್ಯೆ 797. ಸಕ್ರಿಯ ಪ್ರಕರಣಗಳ ಸಂಖ್ಯೆ 1,32,44,171. ಸೋಂಕಿನಿಂದ ಹೊರಬಂದವರು 5,05,524 ಮಂದಿ. ಅಮೆರಿಕದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 16,785; ಮೃತಪಟ್ಟವರು 98 ಮಂದಿ. ಫ್ರಾನ್ಸ್‌ನಲ್ಲಿ 7,489 ಪ್ರಕರಣ ದಾಖಲಾಗಿದ್ದು, 51 ಮಂದಿ ಉಸಿರು ಚೆಲ್ಲಿದ್ದಾರೆ. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 43,730 ಮಂದಿ; ಮೃತಪಟ್ಟವರು 44 ಮಂದಿ. ರಷ್ಯಾದಲ್ಲಿ ಪತ್ತೆಯಾದ ಕೋವಿಡ್‌-19 ಪ್ರಕರಣಗಳು 40,188; ಸೋಂಕಿಗೆ ಬಲಿಯಾದವರು 85 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್