ಕೋವಿಡ್‌ ಸುದ್ದಿ | ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮೂವರು ಬಲಿ

COVID Women

ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 40,121ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ ಪತ್ತೆಯಾದ ಕೋವಿಡ್-19 ಪ್ರಕರಣಗಳು 1,019. ಒಟ್ಟು ಸಕ್ರಿಯ ಪ್ರಕರಣಗಳು 11,252. ಸೋಂಕಿನಿಂದ ಗುಣಮುಖರಾದವರು 1,662 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 6.17.

ಇನ್ನು, ದೇಶಾದ್ಯಂತ ಕಳೆದೊಂದು ದಿನದಲ್ಲಿ (ಆಗಸ್ಟ್ 8) ದೃಢಪಟ್ಟ ಪ್ರಕರಣಗಳ ಸಂಖ್ಯೆ 16,167. ಸೋಂಕಿಗೆ ಬಲಿಯಾದವರು 41 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳು 1,35,510. ಸೋಂಕಿನಿಂದ ಮುಕ್ತರಾದವರು 15,549 ಮಂದಿ. ಸೋಂಕಿನ ಏರಿಕೆ ಪ್ರಮಾಣ ಶೇಕಡ 4.7.

ವಿಶ್ವಾದ್ಯಂತ ಕಳೆದ 24 ಗಂಟೆಯ ಅವಧಿಯಲ್ಲಿ ದಾಖಲಾಗಿರುವ ಸೋಂಕಿನ ಪ್ರಕರಣಗಳು 492,270. ಮೃತಪಟ್ಟವರು 1,234 ಮಂದಿ. 1,039,641 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 21,862,957. ಅಮೆರಿಕದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 44,123; ಪ್ರಾಣ ಬಿಟ್ಟವರು 134 ಮಂದಿ. ಫ್ರಾನ್ಸ್‌ನಲ್ಲಿ ಪತ್ತೆಯಾದ ಪ್ರಕರಣಗಳು 5,090; ಸಾವಿಗೀಡಾದವರು 109 ಮಂದಿ. ಬ್ರೆಜಿಲ್‌ನಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 17,409; ಮೃತಪಟ್ಟವರು 188 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180