ಕೋವಿಡ್‌ ಸುದ್ದಿ | ರಾಜ್ಯದಲ್ಲಿ 6, ದೇಶಾದ್ಯಂತ 49, ವಿಶ್ವಾದ್ಯಂತ 1,986 ಮಂದಿ ಸಾವು

covid cases india

ಕಳೆದ ಒಂದು ದಿನದ ಅವಧಿಯಲ್ಲಿ (ಆಗಸ್ಟ್ 11) ರಾಜ್ಯಾದ್ಯಂತ ಕೊರೊನಾ ಸೋಂಕಿಗೆ ಆರು ಮಂದಿ ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ, ವಿಜಯಪುರ, ಬಳ್ಳಾರಿ, ಧಾರವಾಡ, ಬೆಳಗಾವಿ ಹಾಗೂ ಕೊಪ್ಪಳದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ, ರಾಜ್ಯದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 40,134ಕ್ಕೆ ಏರಿಕೆಯಾಗಿದೆ. ಪತ್ತೆಯಾದ ಪ್ರಕರಣಗಳು 1,691. ಸಕ್ರಿಯ ಪ್ರಕರಣಗಳು 10,054. ಇನ್ನು, ಸೋಂಕಿನಿಂದ ಗುಣಮುಖರಾದವರು 1,982 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 6.09.

ದೇಶಾದ್ಯಂತ ಕಳೆದೊಂದು ದಿನದಲ್ಲಿ ದೃಢಪಟ್ಟ ಪ್ರಕರಣಗಳು 16,561. ಸೋಂಕಿಗೆ ಬಲಿಯಾದವರು 49 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳು 1,23,535. ಸೋಂಕಿನಿಂದ ಮುಕ್ತರಾದವರು 18,053 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.9.

ವಿಶ್ವಾದ್ಯಂತ ಕಳೆದ 24 ಗಂಟೆಯ ಅವಧಿಯಲ್ಲಿ ದಾಖಲಾಗಿರುವ ಸೋಂಕಿನ ಪ್ರಕರಣಗಳು 8,34,557. ಮೃತಪಟ್ಟವರು 1,986 ಮಂದಿ. ಸೋಂಕಿನಿಂದ ಹೊರಬಂದವರು 11,23,972. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 21,426,180. ಅಮೆರಿಕದಲ್ಲಿ ಒಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳು 79,145; ಸೋಂಕಿಗೆ ಬಲಿಯಾದವರು 290 ಮಂದಿ. ಫ್ರಾನ್ಸ್‌ನಲ್ಲಿ ಪತ್ತೆಯಾದ ಪ್ರಕರಣಗಳು 24,312; ಪ್ರಾಣ ಕಳೆದುಕೊಂಡವರು 80 ಮಂದಿ. ಬ್ರೆಜಿಲ್‌ನಲ್ಲಿ ಒಂದು ದಿನದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 27,644; ಸೋಂಕಿನಿಂದ ಮೃತಪಟ್ಟವರು 173 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180