ಕೋವಿಡ್‌ ಸುದ್ದಿ | ಸೋಂಕಿಗೆ ರಾಜ್ಯದಲ್ಲಿ ಮೂವರು ಬಲಿ; ದೇಶಾದ್ಯಂತ 32 ಮಂದಿ ಸಾವು

Covid-19

ರಾಜ್ಯದಲ್ಲಿ ಕಳೆದೊಂದು ದಿನದಲ್ಲಿ (ಆಗಸ್ಟ್ 14) ಪತ್ತೆಯಾದ ಸೋಂಕಿತರ ಸಂಖ್ಯೆ 1,837. ಕೊಪ್ಪಳ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 40,147ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 10,922. ಸೋಂಕಿನಿಂದ ಹೊರಬಂದವರು 1,017 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 6.32.

ಇನ್ನು, ದೇಶಾದ್ಯಂತ ಕಳೆದ ಒಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 14,917. ಸೋಂಕಿಗೆ ಬಲಿಯಾದವರು 32 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳು 1,17,508. ಸೋಂಕಿನಿಂದ ಮುಕ್ತರಾದವರು 14,238 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 3.8.

ವಿಶ್ವಾದ್ಯಂತ ಕಳೆದ 24 ಗಂಟೆಯ ಅವಧಿಯಲ್ಲಿ ದಾಖಲಾಗಿರುವ ಸೋಂಕಿನ ಪ್ರಕರಣಗಳು 5,09,167. ಕೊರೊನಾದಿಂದ ಮೃತಪಟ್ಟವರು 1,025 ಮಂದಿ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 7,13,863. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 20,348,377. ಅಮೆರಿಕದಲ್ಲಿ ಕಳೆದೊಂದು ದಿನದಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 9,215; ಪ್ರಾಣ ಬಿಟ್ಟವರು 10 ಮಂದಿ. ಫ್ರಾನ್ಸ್‌ನಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 16,347; ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. ಬ್ರೆಜಿಲ್‌ನಲ್ಲಿ ಪತ್ತೆಯಾದ ಪ್ರಕರಣಗಳು 6,753; ಪ್ರಾಣ ಕಳೆದುಕೊಂಡವರು 70 ಮಂದಿ.

ನಿಮಗೆ ಏನು ಅನ್ನಿಸ್ತು?
0 ವೋಟ್