ಕೋವಿಡ್‌ ಸುದ್ದಿ | ಅಮೆರಿಕ, ಜಪಾನ್, ಬ್ರೆಝಿಲ್‌ನಲ್ಲಿ ಸೋಂಕು ಉಲ್ಬಣ; ವಿಶ್ವಾದ್ಯಂತ 1,840 ಮಂದಿ ಸಾವು

delhi-covid-19

ರಾಜ್ಯದಲ್ಲಿ ಕೊರೊನಾ ಸೋಂಕು ಸತತವಾಗಿ ಹೆಚ್ಚುತ್ತಿದ್ದು, ಕಳೆದೊಂದು ದಿನದಲ್ಲಿ ಹಾವೇರಿ ಜಿಲ್ಲೆಯಲ್ಲಿ ಇಬ್ಬರು ಮತ್ತು ಬಳ್ಳಾರಿ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 40,185ಕ್ಕೇರಿದೆ. ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆ 1,191. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7,856. ದೈನಂದಿನ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.09. ಸೋಂಕಿನಿಂದ ಹೊರಬಂದವರು 2,032 ಮಂದಿ.

ಇನ್ನು, ದೇಶಾದ್ಯಂತ ಈವರೆಗೆ ಪತ್ತೆಯಾದ ಕೊರೊನಾ ಸೋಂಕಿನ ಪ್ರಕರಣಗಳು 4,43,89,176. ಸೋಂಕಿಗೆ ಈವರೆಗೆ ಬಲಿಯಾದವರು ಒಟ್ಟು 5,27,556.8 ಮಂದಿ. ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 4,37,70,913. ಸಕ್ರಿಯ ಪ್ರಕರಣಗಳು 90,707. 

ವಿಶ್ವಾದ್ಯಂತ ಕಳೆದೊಂದು ದಿನದಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 6,76,400. ಸಾವಿನ ಸಂಖ್ಯೆ 1,840. ಸೋಂಕಿನಿಂದ 7,20,119 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,86,66,016. ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 63,798; ಸೋಂಕಿನಿಂದ ಮೃತಪಟ್ಟವರು 312 ಮಂದಿ. ಜಪಾನ್‌ನಲ್ಲಿ 2,27,139 ಮಂದಿ ಕೊರೊನಾಗೆ ತುತ್ತಾಗಿ, 310 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬ್ರೆಜಿಲ್‌ನಲ್ಲಿ ಪತ್ತೆಯಾದ ಪ್ರಕರಣಗಳು 18,270; ಸೋಂಕಿಗೆ ಬಲಿಯಾದವರು 136 ಮಂದಿ.

ನಿಮಗೆ ಏನು ಅನ್ನಿಸ್ತು?
0 ವೋಟ್