ಕೋವಿಡ್‌ ಸುದ್ದಿ | ಒಂದೇ ದಿನದಲ್ಲಿ 20 ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು

covid india

ಕಳೆದ 145 ದಿನಗಳಲ್ಲಿ ಮೊದಲ ಬಾರಿಗೆ ಕೋವಿಡ್‌-19 ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿದೆ. ದೇಶದಲ್ಲಿ ಒಂದೇ ದಿನ ದಾಖಲಾದ ಕೊರೊನಾ ಪ್ರಕರಣಗಳು 20,139. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,36,076ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 4,36,89,989. ಸೋಂಕಿಗೆ 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ; ಸೋಂಕಿನಿಂದ ಮುಕ್ತರಾದವರು 16,482 ಮಂದಿ. ಇನ್ನು, ಈವರೆಗೆ ಕೊರೊನಾದಿಂದ ಮೃತಪಟ್ಟವರು 5,25,557. ಕೋವಿಡ್‌-19ರಿಂದ ಮುಕ್ತರಾದವರು ಒಟ್ಟು 4,30,28,356. ದೈನಂದಿನ ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 5.10ಕ್ಕೆ ಏರಿಕೆ ಕಂಡಿದೆ.‌

ಇನ್ನು, ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಕೋವಿಡ್‌-19 ಪ್ರಕರಣಗಳು ದಾಖಲಾಗುತ್ತಿವೆ. ಜುಲೈ 13ರಂದು ಸೋಂಕಿಗೆ ತುತ್ತಾದವರು 1,231 ಮಂದಿ. ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ. ಸೋಂಕಿನಿಂದ ಮುಕ್ತರಾದವರು 1,047 ಮಂದಿ.

Eedina App

ಜುಲೈ 14ರಂದು ಪತ್ತೆಯಾದ ಪ್ರಕರಣಗಳು 1,209. ಒಬ್ಬರು ಕೋವಿಡ್‌-19 ಸೋಂಕಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 6,739ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿನಿಂದ ಪ್ರಾಣ ಬಿಟ್ಟವರು 40,084 ಜನ. ಕೊರೊನಾದಿಂದ ಮುಕ್ತರಾದವರು 1072. ದೈನಂದಿನ ಸಕ್ರಿಯ ಪ್ರಕರಣಗಳ ಏರಿಕೆಯ ಪ್ರಮಾಣ ಶೇಕಡ 4.37.

ಸುದ್ದಿ ಮೂಲ: ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಬಿಬಿಎಂಪಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app