ಕೋವಿಡ್‌ ಸುದ್ದಿ | ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ 47 ಮಂದಿ ಬಲಿ

Covid Testing

ಕಳೆದ 24 ಗಂಟೆಯಲ್ಲಿ (ಜುಲೈ 15) ದೇಶದಲ್ಲಿ 20,038 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಮೃತಪಟ್ಟವರು 47 ಮಂದಿ. ಈವರೆಗೆ 5,25,604 ಜನ ಮೃತಪಟ್ಟಿದ್ದಾರೆ. 16,994 ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಈಗ 1,39,073 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪ್ರಕರಣಗಳ ಪ್ರಮಾಣ ಶೇಕಡ 4.44ರಷ್ಟು ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಪತ್ತೆಯಾದ ಕೋವಿಡ್-19ರ ಪ್ರಕರಣಗಳು 977. ಸೋಂಕಿಗೆ ಒಬ್ಬರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 40,085ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,702. ಈವರೆಗೆ ಪತ್ತೆಯಾದ ಪ್ರಕರಣಗಳ ಒಟ್ಟು ಸಂಖ್ಯೆ 39,84,002. ದೈನಂದಿನ ಪ್ರಕರಣಗಳ ಏರಿಕೆಯ ಪ್ರಮಾಣ ಶೇಕಡ 3.73.

ಇನ್ನು, ವಿಶ್ವಾದ್ಯಂತ ಕಳೆದ ಏಳು ದಿನಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳು 6,429,413. ಅಮೆರಿಕದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳು 8,50,962; ಸಾವಿನ ಸಂಖ್ಯೆ 2,634. ಬ್ರೆಜಿಲ್‌ನಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳು 3,89,099; ಸಾವಿನ ಸಂಖ್ಯೆ 1,692. ರಷ್ಯಾದಲ್ಲಿ ದಾಖಲಾದ ಪ್ರಕರಣಗಳು 25,660; ಸಾವಿನ ಸಂಖ್ಯೆ 295. ಫ್ರಾನ್ಸ್‌ನಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳು 8,11,502; ಸಾವಿನ ಸಂಖ್ಯೆ 524.

ಸುದ್ದಿ ಮೂಲ: ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಬಿಬಿಎಂಪಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app