ಕೋವಿಡ್ ಸುದ್ದಿ | ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ; ದೇಶಾದ್ಯಂತ 25 ಮಂದಿ ಸಾವು

Covid

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 1,105 ಪ್ರಕರಣ ದಾಖಲಾಗಿದ್ದು, ಒಬ್ಬರು ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,051. ಸೋಂಕಿನಿಂದ ಹೊರಬಂದವರು 1,432 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 5.28.

ಇನ್ನು, ದೇಶಾದ್ಯಂತ ಪತ್ತೆಯಾದ ಪ್ರಕರಣಗಳು 7,221. ಮೃತಪಟ್ಟವರು 25 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 56,745. ಸೋಂಕಿನಿಂದ ಮುಕ್ತರಾದವರು 9,651 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 2.7.

ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ 5,62,135 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 1,779 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,72,73,977. ಸೋಂಕಿನಿಂದ ಗುಣಮುಖರಾದವರು 7,04,286 ಮಂದಿ. ಅಮೆರಿಕದಲ್ಲಿ ಕಳೆದ ಒಂದು ದಿನದಲ್ಲಿ ದಾಖಲಾದ ಪ್ರಕರಣಗಳು 61,991; ಸಾವಿಗೀಡಾದವರು 308 ಮಂದಿ. ಜಪಾನಿನಲ್ಲಿ ಕೊರೊನಾ ದೃಢಪಟ್ಟವರು 1,53,313 ಮಂದಿ; ಮೃತಪಟ್ಟವರು 318 ಮಂದಿ. ಬ್ರೆಜಿಲ್‌ನಲ್ಲಿ 131 ಮಂದಿ ಸಾವನ್ನಪ್ಪಿದ್ದು, 13,180 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್