ಕೋವಿಡ್ ಸುದ್ದಿ | ಜಪಾನ್‌ನಲ್ಲಿ ನಿಯಂತ್ರಣಕ್ಕೆ ಬಾರದ ಸೋಂಕು; 347 ಮಂದಿ ಬಲಿ

Coronavirus

ಕಳೆದ 24 ಗಂಟೆಗಳ ಅವಧಿಯಲ್ಲಿ ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಜಪಾನ್‌ನಲ್ಲಿ ಮಾತ್ರ ತೀವ್ರ ಏರಿಕೆ ಕಂಡುಬಂದಿದೆ. ಆ ದೇಶದಲ್ಲಿ ಕಳೆದೊಂದು ದಿನದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 347. ಅಲ್ಲದೆ, 1,35,425 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್‌-19ರ ಪ್ರಕರಣಗಳು 941. ಸೋಂಕಿನಿಂದ ಚಾಮರಾಜನಗರ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 40,203. ಸಕ್ರಿಯ ಪ್ರಕರಣಗಳ ಸಂಖ್ಯೆ 5,203. ಸೋಂಕಿನಿಂದ ಹೊರಬಂದವರು 788 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.07.

ದೇಶಾದ್ಯಂತ ಪತ್ತೆಯಾದ ಪ್ರಕರಣಗಳು 7,219 (ಸೆಪ್ಟೆಂಬರ್‌ 04ರ ಬೆಳಗ್ಗೆ 8 ಗಂಟೆಯವರೆಗೆ). ಮೃತಪಟ್ಟವರು 33 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 56,745. ಸೋಂಕಿನಿಂದ ಮುಕ್ತರಾದವರು 9,651 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 2.6.

ಜಾಗತಿಕವಾಗಿ ಪತ್ತೆಯಾದ ಸೋಂಕಿತರು 4,41,476. ಸೋಂಕಿಗೆ ಬಲಿಯಾದವರು 1,177 ಮಂದಿ. 5,87,620 ಮಂದಿ ಸೋಂಕಿನಿಂದ ಗುಣಮುಖರಾದವರು. ಸಕ್ರಿಯ ಪ್ರಕರಣಗಳ ಸಂಖ್ಯೆ 1,71,37,753. ಅಮೆರಿಕದಲ್ಲಿ 22,765 ಮಂದಿ ಸೋಂಕಿಗೆ ತುತ್ತಾಗಿದ್ದು, 74 ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನಲ್ಲಿ 10,080 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 80 ಮಂದಿ ಜೀವ ಕಳೆದುಕೊಂಡಿದ್ದಾರೆ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್