ಕೋವಿಡ್ ಸುದ್ದಿ | ಪ್ರಪಂಚಾದ್ಯಂತ ವೈರಸ್‌ ಹಾವಳಿ ಇಳಿಮುಖ: ವಿಶ್ವ ಆರೋಗ್ಯ ಸಂಸ್ಥೆ

Covid-19

ಕೋವಿಡ್-19 ವೈರಸ್ ಮತ್ತು ಅದರ ಉಪತಳಿಗಳಿಂದ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ವಿಶ್ವಾದ್ಯಂತ ಇಳಿಮುಖವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸಾಪ್ತಾಹಿಕ ವರದಿಯಲ್ಲಿ (ಸೆ.7) ಉಲ್ಲೇಖಿಸಿದೆ.

"ಹೊಸ ವೈರಸ್‌ ಸೋಂಕಿನ ಪ್ರಕರಣಗಳು ಶೇಕಡ 12ರಷ್ಟು ಕುಸಿತವಾಗಿವೆ. ಕಳೆದ ಒಂದು ವಾರದಲ್ಲಿ ಹೊಸದಾಗಿ ಸೋಂಕಿಗೆ ತುತ್ತಾದವರು 42 ಲಕ್ಷ ಮಂದಿ. ಸಾವಿಗೀಡಾದವರು 13,700 ಮಂದಿ. ಹಿಂದಿನ ವಾರಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಶೇಕಡ 5ರಷ್ಟು ಕಡಿಮೆ ಇದೆ. ಆಗ್ನೇಯ ಏಷ್ಯಾ, ಯುರೋಪ್‌ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಕೋವಿಡ್‌-19ರ ಸಾವುಗಳು ಕಡಿಮೆಯಾಗಿವೆ. ಆಫ್ರಿಕಾ, ಅಮೆರಿಕ ಹಾಗೂ ಪಶ್ಚಿಮ ಪೆಸಿಫಿಕ್‌ನಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ," ಎಂದಿದೆ ವಿಶ್ವಸಂಸ್ಥೆ ವರದಿ.

ಇನ್ನು, ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 5,16,370. ಮೃತಪಟ್ಟವರು 1,615 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,58,82,759. ಸೋಂಕಿನಿಂದ ಗುಣಮುಖರಾದವರು 7,22,588 ಮಂದಿ.

ದೇಶಾದ್ಯಂತ ಪತ್ತೆಯಾದ ಪ್ರಕರಣಗಳು 6,381 (ಸೆಪ್ಟೆಂಬರ್‌ 8ರ ಬೆಳಗ್ಗೆ 8 ಗಂಟೆಯವರೆಗೆ). ಸೋಂಕಿನಿಂದ ಮೃತಪಟ್ಟವರು 19 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 50,342. ಸೋಂಕಿನಿಂದ ಮುಕ್ತರಾದವರು 6,614 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 2.2.

ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರು 606 ಮಂದಿ. ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 40,211ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 4,726. ಸೋಂಕಿನಿಂದ ಗುಣಮುಖರಾದವರು 451 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 2.65.

ಸುದ್ದಿ ಮೂಲ: ವಿಶ್ವ ಆರೋಗ್ಯ ಸಂಸ್ಥೆ, ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180