ಕೋವಿಡ್ ಸುದ್ದಿ | ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯ ಇಳಿಕೆ; ಮೃತಪಟ್ಟವರು ಮೂರು ಮಂದಿ

Covid Test

ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ ಇಬ್ಬರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 40,225ಕ್ಕೆ ಏರಿಕೆಯಾಗಿದೆ. 344 ಹೊಸ ಪ್ರಕರಣ ದಾಖಲಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು 3,764. ಸೋಂಕಿನಿಂದ ಹೊರಬಂದವರು 522 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.85.

ಇನ್ನು, ದೇಶಾದ್ಯಂತ ಕಳೆದೊಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 4,369 (ಸೆಪ್ಟೆಂಬರ್‌ 14, ಬೆಳಗ್ಗೆ 8 ಗಂಟೆವರೆಗೆ). ಸೋಂಕಿನಿಂದ ಮೃತಪಟ್ಟವರು 20 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 45,749. ಸೋಂಕಿನಿಂದ ಮುಕ್ತರಾದವರು 5,675 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.8.

ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 4,53,332. ಮೃತಪಟ್ಟವರು 1,363 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,44,87,684. ಸೋಂಕಿನಿಂದ ಹೊರಬಂದವರು 6,85,560 ಮಂದಿ. ಅಮೆರಿಕದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 31,492; ಮೃತಪಟ್ಟವರು 287 ಮಂದಿ. ಜರ್ಮನಿಯಲ್ಲಿ ಪತ್ತೆಯಾದ ಪ್ರಕರಣಗಳು 51,299; ಸೋಂಕಿಗೆ ಬಲಿಯಾದವರು 109 ಮಂದಿ. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 64,694 ಮಂದಿ; ಮೃತಪಟ್ಟವರು 157.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180