ಕೋವಿಡ್ ಸುದ್ದಿ | ರಾಜ್ಯದಲ್ಲಿ ನಾಲ್ವರು ಸಾವು; ಒಟ್ಟು ಸಾವಿನ ಸಂಖ್ಯೆ 40,231ಕ್ಕೆ ಏರಿಕೆ

Covid-19

ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಗದಗ, ಕಲಬುರಗಿ, ಮೈಸೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 40,231ಕ್ಕೆ ಏರಿಕೆಯಾಗಿದೆ. 426 ಹೊಸ ಸೋಂಕಿನ ಪ್ರಕರಣ ದಾಖಲಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳು 3,618. ಸೋಂಕಿನಿಂದ ಹೊರಬಂದವರು 492 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.87.

ಇನ್ನು, ದೇಶಾದ್ಯಂತ ಕಳೆದೊಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 6,298. ಸೋಂಕಿನಿಂದ ಮೃತಪಟ್ಟವರು 23 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 46,848. ಸೋಂಕಿನಿಂದ ಮುಕ್ತರಾದವರು 5,618 ಮಂದಿ. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.6.

ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 4,75,678. ಮೃತಪಟ್ಟವರು 1,721 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,42,87,268. ಸೋಂಕಿನಿಂದ ಹೊರಬಂದವರು 5,71,441 ಮಂದಿ. ಅಮೆರಿಕದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 39,301; ಮೃತಪಟ್ಟವರು 270 ಮಂದಿ. ಜರ್ಮನಿಯಲ್ಲಿ ಪತ್ತೆಯಾದ ಪ್ರಕರಣಗಳು 36,613; ಸೋಂಕಿಗೆ ಬಲಿಯಾದವರು 88 ಮಂದಿ. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 88,379 ಮಂದಿ; ಮೃತಪಟ್ಟವರು 170.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180