ಕೋವಿಡ್ ಸುದ್ದಿ | ದೇಶಾದ್ಯಂತ 5,664 ಹೊಸ ಪ್ರಕರಣ, ಕೇರಳವೊಂದರಲ್ಲೇ 21 ಮಂದಿ ಸಾವು

Covid_19

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್‌ ಸೋಂಕಿತರ ಸಂಖ್ಯೆ 476. ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. 3,735 ಸಕ್ರಿಯ ಪ್ರಕರಣಗಳಿದ್ದು, 358 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 2.3.

ಇನ್ನು, ದೇಶಾದ್ಯಂತ ಕಳೆದೊಂದು ದಿನದಲ್ಲಿ ಸೋಂಕಿಗೆ 35 ಮಂದಿ ಬಲಿಯಾಗಿದ್ದು, 5,664 ಪ್ರಕರಣ ದಾಖಲಾಗಿವೆ. ಕೇರಳವೊಂದರಲ್ಲೇ 21 ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ, ಕೊರೊನಾ ಸೋಂಕಿನಿಂದ 47,922 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.6.

ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 3,41,722. ಮೃತಪಟ್ಟವರು 834 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,40,40,809. ಸೋಂಕಿನಿಂದ ಹೊರಬಂದವರು 5,99,084 ಮಂದಿ. ಅಮೆರಿಕದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 13,030; ಮೃತಪಟ್ಟವರು 79 ಮಂದಿ. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 77,804 ಮಂದಿ; ಮೃತಪಟ್ಟವರು 186 ಮಂದಿ. ರಷ್ಯಾದಲ್ಲಿ ಪತ್ತೆಯಾದ ಕೋವಿಡ್‌-19ರ ಸೋಂಕಿತರು 77,804; ಮೃತಪಟ್ಟವರು 186 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180