ಕೋವಿಡ್ ಸುದ್ದಿ | ದೇಶಾದ್ಯಂತ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ; 18 ಮಂದಿ ಸಾವು

Covid Test

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸತತವಾಗಿ ಇಳಿಮುಖವಾಗಿದ್ದು, ಕಳೆದ 24 ಗಂಟೆಯಲ್ಲಿ 253 ಪ್ರಕರಣ ಪತ್ತೆಯಾಗಿವೆ. ಸೋಂಕಿನಿಂದ ಮೃತಪಟ್ಟ ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯ 3,568 ಸಕ್ರಿಯ ಪ್ರಕರಣಗಳಿದ್ದು, 431 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.15.

ಇನ್ನು, ದೇಶಾದ್ಯಂತ ಕಳೆದೊಂದು ದಿನದಲ್ಲಿ 4,858 ಪ್ರಕರಣ ದಾಖಲಾಗಿವೆ. ಸೋಂಕಿನಿಂದ ಪ್ರಾಣ ಕಳೆದುಕೊಂಡವರು 18 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 47,379. 4,676 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.9. 

ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್‌-19ರ ಪ್ರಕರಣಗಳ ಸಂಖ್ಯೆ 3,10,757. ಮೃತಪಟ್ಟವರು 901 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,37,34,217. ಸೋಂಕಿನಿಂದ ಹೊರಬಂದವರು 5,20,978 ಮಂದಿ. ಅಮೆರಿಕದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 19,891; ಮೃತಪಟ್ಟವರು 90 ಮಂದಿ. ಫ್ರಾನ್ಸ್‌ನಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 5,219; ಸೋಂಕಿಗೆ ಬಲಿಯಾದವರು 58 ಮಂದಿ. ಜರ್ಮನಿಯಲ್ಲಿ ಸೋಂಕಿಗೆ ತುತ್ತಾದವರು 60,238; ಕೊರೊನಾಗೆ ಬಲಿಯಾದವರು 146. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 63,620 ಮಂದಿ; ಮೃತಪಟ್ಟವರು 82 ಮಂದಿ. ರಷ್ಯಾದಲ್ಲಿ ಪತ್ತೆಯಾದ ಕೋವಿಡ್‌-19ರ ಸೋಂಕಿತರು 49,488; ಸೋಂಕಿಗೆ ಬಲಿಯಾದವರು 91 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180