ಕೋವಿಡ್ ಸುದ್ದಿ | ದೇಶದಲ್ಲಿ ಕೊರೊನಾಗೆ 33 ಮಂದಿ ಬಲಿ; ಕೇರಳವೊಂದರಲ್ಲೇ 19 ಮಂದಿ ಸಾವು

Covid Test

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 368. ಕೊರೊನಾ ಸೋಂಕಿನಿಂದ ಇಬ್ಬರು ಬಲಿಯಾಗಿದ್ದಾರೆ. ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 40,236. ಸದ್ಯ ಸಕ್ರಿಯವಾಗಿರುವ ಪ್ರಕರಣಗಳು 3,434. ಸೋಂಕಿನಿಂದ ಗುಣಮುಖರಾದವರು 500 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.53.

ಇನ್ನು, ದೇಶಾದ್ಯಂತ ಸಾವಿನ ಸಂಖ್ಯೆ ಹೆಚ್ಚಿದ್ದು ಕಳೆದ ಒಂದು ದಿನದಲ್ಲಿ ಸೋಂಕಿನಿಂದ ಮೃತಪಟ್ಟವರು 33 ಮಂದಿ (ಸೆಪ್ಟಂಬರ್‌ 21, ಬೆಳಗ್ಗೆ 10 ಗಂಟೆಯವರೆಗೆ). ಕೇರಳವೊಂದರಲ್ಲೇ 19 ಮಂದಿ ಸಾವಿಗೀಡಾಗಿದ್ದಾರೆ. ಒಂದು ದಿನದಲ್ಲಿ ಪತ್ತೆಯಾದ ಕೋವಿಡ್‌ ಸೋಂಕಿತರ ಸಂಖ್ಯೆ 4,510. ಸಕ್ರಿಯ ಪ್ರಕರಣಗಳ ಸಂಖ್ಯೆ 46,216. ಸೋಂಕಿನಿಂದ ಹೊರಬಂದವರು 5,640 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.9.

ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್‌-19ರ ಪ್ರಕರಣಗಳ ಸಂಖ್ಯೆ 4,39,258. ಮೃತಪಟ್ಟವರು 1,124 ಮಂದಿ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,36,59,564. ಸೋಂಕಿನಿಂದ ಹೊರಬಂದವರು 5,45,576 ಮಂದಿ. ಅಮೆರಿಕದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 29,364; ಮೃತಪಟ್ಟವರು 238 ಮಂದಿ. ಫ್ರಾನ್ಸ್‌ನಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 51,816; ಸೋಂಕಿಗೆ ಬಲಿಯಾದವರು 48 ಮಂದಿ. ಜರ್ಮನಿಯಲ್ಲಿ ಸೋಂಕಿಗೆ ತುತ್ತಾದವರು 56,715; ಕೊರೊನಾಗೆ ಬಲಿಯಾದವರು 90. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 41,330 ಮಂದಿ; ಮೃತಪಟ್ಟವರು 73 ಮಂದಿ. ರಷ್ಯಾದಲ್ಲಿ ಪತ್ತೆಯಾದ ಕೋವಿಡ್‌-19ರ ಸೋಂಕಿತರು 46,474; ಸೋಂಕಿಗೆ ಬಲಿಯಾದವರು 98 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180