ಕೋವಿಡ್ ಸುದ್ದಿ | ಅಮೆರಿಕ, ಫ್ರಾನ್ಸ್‌ನಲ್ಲಿ ಕಡಿಮೆಯಾಗದ ಸೋಂಕು; 499 ಮಂದಿ ಸಾವು

Covid_19

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 390. ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 40,236. ಸದ್ಯ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 3,334. ಸೋಂಕಿನಿಂದ ಗುಣಮುಖರಾದವರು 490 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.61.

ಇನ್ನು, ದೇಶಾದ್ಯಂತ ಸಾವಿನ ಸಂಖ್ಯೆ ಹೆಚ್ಚಿದ್ದು, ಕಳೆದ ಒಂದು ದಿನದಲ್ಲಿ 26 ಮಂದಿ ಮೃತರಾಗಿದ್ದಾರೆ. ಪತ್ತೆಯಾದ ಕೋವಿಡ್‌ ಸೋಂಕಿತರ ಸಂಖ್ಯೆ 5,443. ಸಕ್ರಿಯ ಪ್ರಕರಣಗಳ ಸಂಖ್ಯೆ 46,342. ಸೋಂಕಿನಿಂದ ಹೊರಬಂದವರು 5,291 ಮಂದಿ. ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.7.

ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್‌-19ರ ಪ್ರಕರಣಗಳು 4,34,092. ಮೃತಪಟ್ಟವರು 1,324 ಮಂದಿ. ಸಕ್ರಿಯ ಪ್ರಕರಣಗಳ ಸಂಖ್ಯೆ 1,36,80,165. ಸೋಂಕಿನಿಂದ ಹೊರಬಂದವರು 5,27,581 ಮಂದಿ. ಅಮೆರಿಕದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 47,843; ಮೃತಪಟ್ಟವರು 375 ಮಂದಿ. ಫ್ರಾನ್ಸ್‌ನಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 38,250; ಸೋಂಕಿಗೆ ಬಲಿಯಾದವರು 33 ಮಂದಿ. ಜರ್ಮನಿಯಲ್ಲಿ ಪತ್ತೆಯಾದ ಹೊಸ ಪ್ರಕರಣಗಳು 56,978; ಕೊರೊನಾಗೆ ಬಲಿಯಾದವರು 106. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 38,510 ಮಂದಿ; ಮೃತಪಟ್ಟವರು 124 ಮಂದಿ. ರಷ್ಯಾದಲ್ಲಿ ಪತ್ತೆಯಾದ ಕೋವಿಡ್‌-19ರ ಸೋಂಕಿತರು 53,045; ಸೋಂಕಿಗೆ ಬಲಿಯಾದವರು 107 ಮಂದಿ.

ಸುದ್ದಿ ಮೂಲ: ಬಿಬಿಎಂಪಿ, ಕೇಂದ್ರ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180