
ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಪ್ರಕರಣಗಳು 13,615. ಇದುವರೆಗೆ ಪತ್ತೆಯಾದ ಒಟ್ಟು ಪ್ರಕರಣಗಳು 4,36,52,944. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,31,043. ಸೋಂಕಿನಿಂದ ಇದುವರೆಗು ಮುಕ್ತರಾದ ಒಟ್ಟು ಜನ 4,29,96,427.
ಒಂದು ದಿನದಲ್ಲಿ ಸೋಂಕಿನಿಂದ ಮೃತಪಟ್ಟವರು 20 ಮಂದಿ. ಕೇರಳ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಮೂರು. ಬಿಹಾರ, ಹರಿಯಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ತಲಾ ಇಬ್ಬರು. ಛತ್ತೀಸ್ಗಢ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್ ಹಾಗೂ ಸಿಕ್ಕಿಂನಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಇದುವರೆಗೆ ಒಟ್ಟು 5,25,474 ಸಾವುಗಳ ಸಂಖ್ಯೆ ದಾಖಲಾಗಿವೆ. ಮಹಾರಾಷ್ಟ್ರದಿಂದ 1,47,978, ಕೇರಳದಿಂದ 70,153, ಕರ್ನಾಟಕದಿಂದ 40,083, ತಮಿಳುನಾಡಿನಿಂದ 38,028, ದೆಹಲಿಯಿಂದ 26,284, ಉತ್ತರ ಪ್ರದೇಶದಿಂದ 23,547 ಮತ್ತು ಪಶ್ಚಿಮ ಬಂಗಾಳದಿಂದ 21,246 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 891. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,419. ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಸೋಂಕಿಗೆ ಪ್ರಾಣ ಕಳೆದುಕೊಂಡವರು ಒಟ್ಟು 40,083. ರಾಜ್ಯದಲ್ಲಿ ಇದುವರೆಗು ದಾಖಲಾಗಿರುವ ಒಟ್ಟು ಕೋವಿಡ್-19ರ ಪ್ರಕರಣಗಳು 39,80,585. ಸೋಂಕಿನಿಂದ ಗುಣಮುಖರಾದವರು 1,189 ಮಂದಿ.