ಕೋವಿಡ್‌ ಸುದ್ದಿ | ದೇಶಾದ್ಯಂತ ಪ್ರಕರಣ ಹೆಚ್ಚಳ, ಕಳೆದ 24 ಗಂಟೆಯಲ್ಲಿ 56 ಮಂದಿ ಬಲಿ

Covid Testing

ದೇಶಾದ್ಯಂತ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ (ಜುಲೈ 16) 56 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು, ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್-19 ಪ್ರಕರಣಗಳು 20,044. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,40,760ಕ್ಕೆ ಏರಿಕೆಯಾಗಿದೆ. ಈವರೆಗೆ ಪ್ರಾಣ ಬಿಟ್ಟವರ ಒಟ್ಟು ಸಂಖ್ಯೆ 5,25,660. ಒಂದೇ ದಿನದಲ್ಲಿ ಹೆಚ್ಚಳವಾದ ಪ್ರಕರಣಗಳ ಸಂಖ್ಯೆ 1,687. ಸೋಂಕಿನಿಂದ ಗುಣಮುಖರಾದವರು 18,301. ದೈನಂದಿನ ಸಕ್ರಿಯ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.80.

ಜುಲೈ 16ರಂದು ಮೃತಪಟ್ಟವರ ಪೈಕಿ ಕೇರಳ ರಾಜ್ಯದವರು ಹೆಚ್ಚು (27 ಮಂದಿ). ಉಳಿದಂತೆ, ಮಹಾರಾಷ್ಟ್ರದಲ್ಲಿ 10 ಮಂದಿ, ಪಶ್ಚಿಮ ಬಂಗಾಳದಲ್ಲಿ ಐವರು, ಗುಜರಾತ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ತಲಾ ಇಬ್ಬರು, ಅಸ್ಸಾಂ, ಬಿಹಾರ, ಪಂಜಾಬ್, ಸಿಕ್ಕಿಂ, ತಮಿಳನಾಡು ಹಾಗೂ ಉತ್ತರಾಖಂಡನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 1,234 ಪ್ರಕರಣ ದಾಖಲಾಗಿವೆ. ಸೋಂಕಿನಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,704. ಸೋಂಕಿನಿಂದ ಮುಕ್ತರಾದವರು 724 ಮಂದಿ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app