ಕೋವಿಡ್‌ ಸುದ್ದಿ | ಕೇರಳದಲ್ಲಿ ಒಂಬತ್ತು ಮಂದಿ, ಮಹಾರಾಷ್ಟ್ರದಲ್ಲಿ ಮೂವರು ಕೊರೊನಾಗೆ ಬಲಿ

Covid

ಕಳೆದ 24 ಗಂಟೆಯ ಅವಧಿಯಲ್ಲಿ (ಅ.28ರ ಬೆಳಗ್ಗೆ 10ಗಂಟೆವರೆಗೆ) ದೇಶಾದ್ಯಂತ ಕೋವಿಡ್-19ರ ಸೋಂಕಿನಿಂದ 12 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಕೇರಳದ ಒಂಬತ್ತು ಮಂದಿ ಮತ್ತು ಮಹಾರಾಷ್ಟ್ರದ ಮೂವರು ಸೇರಿದ್ದಾರೆ. ಇದೇ ಅವಧಿಯಲ್ಲಿ 2,208 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 1,423 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,398. ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.1. ಧನಾತ್ಮಕ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.55.

ಇನ್ನು, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ (ಅ.27) ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 195. ಯಾವುದೇ ಸಾವು ವರದಿಯಾಗಿಲ್ಲ. ಸೋಂಕಿನಿಂದ ಗುಣಮುಖರಾದವರು 233 ಮಂದಿ. ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1,915. ಧನಾತ್ಮಕ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 4.12.

Eedina App

ಪ್ರಪಂಚಾದ್ಯಂತ ಕಳೆದೊಂದು ದಿನದಲ್ಲಿ 3,40,503 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 1,143 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,44,57,345. ಸೋಂಕಿನಿಂದ ಹೊರಬಂದವರು 4,03,871 ಮಂದಿ. ಅಮೆರಿಕದಲ್ಲಿ ಕಳೆದ ಒಂದು ದಿನದಲ್ಲಿ ಪತ್ತೆಯಾದ ಸೋಂಕಿತರು 24,331; ಮೃತಪಟ್ಟವರು 214 ಮಂದಿ. ಫ್ರಾನ್ಸ್‌ನಲ್ಲಿ 37,089 ಪ್ರಕರಣ ದಾಖಲಾಗಿದ್ದು, 71 ಮಂದಿ ಸಾವನ್ನಪ್ಪಿದ್ದಾರೆ. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 42,737; ಮೃತಪಟ್ಟವರು 71 ಮಂದಿ. ರಷ್ಯಾದಲ್ಲಿ ಪತ್ತೆಯಾದ ಕೋವಿಡ್-19 ಪ್ರಕರಣಗಳು 7,849; ಸೋಂಕಿಗೆ ಬಲಿಯಾದವರು 82 ಮಂದಿ.

ಸುದ್ದಿ ಮೂಲ: ಕೇಂದ್ರ ಆರೋಗ್ಯ ಸಚಿವಾಲಯ, ಬಿಬಿಎಂಪಿ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app