ಕೋವಿಡ್‌ ಸುದ್ದಿ | ಕೇರಳದಲ್ಲಿ ತಗ್ಗದ ಕೊರೊನಾ ಸೋಂಕಿಗೆ ಐವರು ಬಲಿ, ದೇಶಾದ್ಯಂತ ಎಂಟು ಮಂದಿ ಸಾವು

Covid 19

ಕೇರಳದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಪರಿಣಾಮ ಸಾವು ನಿರಂತರವಾಗಿದ್ದು, ಕಳೆದೊಂದು ದಿನದಲ್ಲಿ (ಅ.30) ಐವರು ಬಲಿಯಾಗಿದ್ದಾರೆ. ಇನ್ನು, ದೇಶಾದ್ಯಂತ ಕೋವಿಡ್-19 ಸೋಂಕಿನಿಂದ ಮೃತಪಟ್ಟವರು ಎಂಟು ಮಂದಿ. ಪತ್ತೆಯಾದ ಕೊರೊನಾ ಪ್ರಕರಣಗಳ ಸಂಖ್ಯೆ 1,326. ಸಕ್ರಿಯ ಪ್ರಕರಣಗಳು 17,912. ಧನಾತ್ಮಕ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.08.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 185. ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ. ಇನ್ನು, ಸೋಂಕಿನಿಂದ ಗುಣಮುಖರಾದವರು 83 ಮಂದಿ. ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 2,085. ಧನಾತ್ಮಕ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 1.92.

ಪ್ರಪಂಚಾದ್ಯಂತ ಕಳೆದೊಂದು ದಿನದಲ್ಲಿ 3,40,503 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 1,143 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,44,57,345. ಸೋಂಕಿನಿಂದ ಹೊರಬಂದವರು 4,03,871 ಮಂದಿ. ಅಮೆರಿಕದಲ್ಲಿ ಕಳೆದ ಒಂದು ದಿನದಲ್ಲಿ ಪತ್ತೆಯಾದ ಸೋಂಕಿತರು 24,331; ಮೃತಪಟ್ಟವರು 214 ಮಂದಿ. ಫ್ರಾನ್ಸ್‌ನಲ್ಲಿ 37,089 ಪ್ರಕರಣ ದಾಖಲಾಗಿದ್ದು, 71 ಮಂದಿ ಸಾವನ್ನಪ್ಪಿದ್ದಾರೆ. ಜಪಾನ್‌ನಲ್ಲಿ ಸೋಂಕಿಗೆ ತುತ್ತಾದವರು 42,737 ಮಂದಿ; ಮೃತಪಟ್ಟವರು 71 ಜನ. ರಷ್ಯಾದಲ್ಲಿ ಪತ್ತೆಯಾದ ಕೋವಿಡ್-19 ಪ್ರಕರಣಗಳು 7,849; ಸೋಂಕಿಗೆ ಬಲಿಯಾದವರು 82 ಮಂದಿ.

ಸುದ್ದಿ ಮೂಲ: ಕೇಂದ್ರ ಆರೋಗ್ಯ ಸಚಿವಾಲಯ, ಬಿಬಿಎಂಪಿ, ವಿಶ್ವ ಆರೋಗ್ಯ ಸಂಸ್ಥೆ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app