ಒಂದು ನಿಮಿಷದ ಓದು | ಕೊರೊನಾ ವೈರಸ್ ನಿಷ್ಕ್ರಿಯಗೊಳಿಸಲು ಹೊಸ ವಿಧಾನ

Peptiside

ಕೋವಿಡ್ ಸೋಂಕನ್ನು ಉಂಟುಮಾಡುವ ಸಾರ್ಸ್ ಕೊರೊನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸಲು ಭಾರತೀಯ ವಿಜ್ಞಾನಿಗಳು ಹೊಸ ವಿಧಾನವೊಂದನ್ನು ಪರಿಚಯಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪೆಪ್ಟೈಡ್‌ಗಳ (ಅಮಿನೊ ಆಸಿಡ್‌ಗಳ ಸಣ್ಣ-ಸಣ್ಣ ಸರಪಳಿ) ಸಂಖ್ಯೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ 80ಕ್ಕೂ ಅಧಿಕ ಪೆಪ್ಟೈಡ್ ಔಷಧಿಗಳು ಲಭ್ಯವಿದ್ದು, ಕೋವಿಡ್ ವಿರುದ್ಧ ಹೋರಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅಧ್ಯಯನಕಾರರು ಹೇಳಿಕೊಂಡಿದ್ದಾರೆ. 

Eedina App

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು, ಇನ್ಸ್‌ಟಿಟ್ಯೂಟ್ ಆಫ್ ಮೈಕ್ರೋಬಿಯಲ್ ಟೆಕ್ನಾಲಜಿಯ ಸಂಶೋಧಕರ ಸಹಯೋಗದೊಂದಿಗೆ ಕೋವಿಡ್ ವೈರಸ್‌ ಅನ್ನು ತಡೆಯಲು ಸಿಂಥೆಟಿಕ್ ಪೆಪ್ಟೈಡ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಜೀವಕೋಶಗಳು ಸೋಂಕಿಗೆ ಒಳಗಾಗುವ ಪ್ರಮಾಣವನ್ನು ಇವು ಕಡಿಮೆ ಮಾಡಲಿವೆ.

ಪ್ರಯೋಗಕ್ಕಾಗಿ ಪೆಪ್ಟೈಡ್‌ನ ಡೋಸ್ ಅನ್ನು ಪ್ರಾಣಿಗಳಿಗೆ ನೀಡಿದಾಗ, ಕೋವಿಡ್ ವೈರಸ್ ಲೋಡ್ ಶ್ವಾಸಕೋಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಾನಿ ಮಾಡಿರುವುದು ಕಂಡುಬಂದಿದೆ. ರೋಗ ಹರಡುವ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸಲು ಇವುಗಳು ಪರ್ಯಾಯ ವಿಧಾನವಾಗಿದ್ದು, ಈ ಹೊಸ ಪೆಪ್ಟೈಡ್‌ಗಳು ಆ್ಯಂಟಿ ವೈರಲ್‌ಗಳಾಗಿ ಭರವಸೆ ಮೂಡಿಸಿವೆ ಎಂಬುದು ತಜ್ಞರ ಅಭಿಪ್ರಾಯ.

AV Eye Hospital ad

ಈ ಪೆಪ್ಟೈಡ್‌ಗಳು ಹೇರ್‌ಪಿನ್ ಆಕಾರ ಹೊಂದಿದ್ದು, ಒಂದರ ಜೊತೆ ಮತ್ತೊಂದು ಬೆಸೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೀಗೆ ಒಂದಕ್ಕೊಂದು ಸೇರಿಕೊಳ್ಳುವ ಇವುಗಳು, ಚೌಕ ಆಕಾರದ ರಚನೆ ಮಾಡಿ ಒಂದೇ ಗುರಿಯನ್ನು ನಿರ್ಧರಿಸಬಲ್ಲವು. ನಂತರ ರೋಗಾಣುಗಳನ್ನು ನಿಷ್ಕ್ರಿಯಗೊಳಿಸಬಲ್ಲವು ಎಂದು ಅಧ್ಯಯನದಲ್ಲಿ ಸಾಬೀತಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app